ಹಾವೇರಿ: ಮಾರ್ಚ್ 28 ರಂದು ಹೊರಡಿಸಿದ್ದ ದರ ಪರಿಷ್ಕರಣೆ ಆದೇಶವನ್ನು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (Haveri Milk Producers Associations) ಹಿಂಪಡೆದು ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್‌ಗೆ 34.05 ರೂಪಾಯಿ ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.
ಈ ಮೊದಲು 31.50 ಪೈಸೆ ದರವಿತ್ತು. ಈಗ ರೈತರಿಗೆ ಎರಡೂವರೆ ರೂಪಾಯಿ ದರ ಹೆಚ್ಚಳ ಮಾಡಲಾಗಿದೆ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್ ಅವರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಅಗ್ನಿ ಅವಘಡ | 345 ವಾಹನಗಳು ಭಸ್ಮ – ಬೆಂಕಿ ನಂದಿಸಲು 2ಗಂಟೆ ಕಾಲ ಹರಸಾಹಸ ಪಟ್ಟ ಅಧಿಕಾರಿಗಳು
- Advertisement
ನಗರದ ಒಕ್ಕೂಟದ ಕಚೇರಿಯಲ್ಲಿ ಮಾತನಾಡಿದ ಅವರು, 4 ರೂಪಾಯಿಗೆ ಬದಲಾಗಿ, ಎರಡೂವರೆ ರುಪಾಯಿ ಹೆಚ್ಚಳ ಮಾಡಲಾಗಿದೆ. ಹಾವೇರಿ ಹಾಲು ಒಕ್ಕೂಟ ಅರ್ಥಿಕವಾಗಿ ನಷ್ಟದಲ್ಲಿರುವುದರಿಂದ ಎರಡೂವರೆ ರೂಪಾಯಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಒಂದು ದಿನಕ್ಕೆ, 2,87,500 ರೂಪಾಯಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳಿಗೆ 86,25,000 ರೂಪಾಯಿ ನಷ್ಟವಾಗಲಿದ್ದು, ವರ್ಷಕ್ಕೆ 10.35 ಕೋಟಿ ರೂ. ನಷ್ಟವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ
- Advertisement
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರೊಂದಿಗೆ ದರ ಪರಿಷ್ಕರಣೆ ವಿಚಾರವಾಗಿ ಸಭೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಯುಹೆಚ್‌ಟಿ ಪ್ಲಾಂಟ್‌ನ್ನು ಬೆಂಗಳೂರು ಕೆಎಂಎಫ್‌ಗೆ ವಹಿಸಿಕೊಡುವ ತೀರ್ಮಾನ ಮಾಡಿದ್ದಾರೆ. ಬಾಂಬೆ ಮತ್ತು ಹುಬ್ಬಳ್ಳಿ ಮಾರ್ಕೆಟ್ ಕೊಡಿಸುವುದಾಗಿ ಸಚಿವರು ಹೇಳಿದ್ದಾರೆ. ಬೇರೆ ಮಾರ್ಕೆಟ್ ಕೊಡಿಸಿದರೆ ನಷ್ಟ ಸರಿಯಾಗಲಿದೆ. ಹಾವೇರಿ ಹಾಲು ಒಕ್ಕೂಟವನ್ನು ನಷ್ಟದ ಸುಳಿಯಿಂದ ಪಾರು ಮಾಡಿ ಲಾಭದತ್ತ ತರಲು ಪ್ರಯತ್ನ ಮಾಡಲಾಗುವುದು.
ಏಪ್ರಿಲ್ 12 ರಂದು ಬೆಂಗಳೂರಿನಲ್ಲಿ ಬೆಂಗಳೂರಿನ ಕೆಎಂಎಫ್, ಜಿಲ್ಲೆಯ ಶಾಸಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು