ದೇವಸ್ಥಾನ, ಕೆರೆ, ಕೃಷಿ ಭೂಮಿ ಸೇರಿ 5,970 ಸರ್ಕಾರಿ ಆಸ್ತಿಗಳನ್ನ ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ – ಜೆ.ಪಿ ನಡ್ಡಾ ಕಳವಳ

Public TV
2 Min Read
JP Nadda

– ಮೋದಿ ಸರ್ಕಾರದಲ್ಲಿ ಎಲ್ಲರೂ ಸಮಾನರು
– ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗೆ ತಿವಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ನವದೆಹಲಿ: ಕಳೆದ ಕೆಲವು ದಶಕಗಳಲ್ಲಿ 5,970 ಸರ್ಕಾರಿ ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 1975 -2020ರ ವರೆಗೂ 40 ಆಸ್ತಿಗಳನ್ನು ವಕ್ಫ್‌ ಆಸ್ತಿ (Wafq Property) ಎಂದು ಘೋಷಿಸಲಾಗಿದೆ. ಇದರಲ್ಲಿ ಕೆರೆಗಳುಮ, ರೈತರ ಜಮೀನು, ಮಂದಿರ, ಸಾರ್ವಜನಿಕ ಆಸ್ತಿಯೂ ಸೇರಿದೆ. ವಕ್ಫ್ ಆಸ್ತಿ ಹೆಚ್ಚುತ್ತಿದೆ, ಹಾಗಾಗಿ ಅದರ ದುರುಪಯೋಗ ಆಗಬಾರದು. ಆದ್ದರಿಂದಲೇ ಅದಕ್ಕೆ ಕಾನೂನು ಮಾಡುತ್ತಿದ್ದೇವೆ ಎಂದು ಸಚಿವ ಜೆ.ಪಿ ನಡ್ಡಾ (JP Nadda) ಹೇಳಿದ್ದಾರೆ.

kiran rijiju rajya sabha

ರಾಜ್ಯಸಭೆಯಲ್ಲಿ ವಕ್ಫ್ ಬಿಲ್ ಮೇಲೆ ಮಾತನಾಡಿದ ಅವರು, ಮೋದಿ ಸರ್ಕಾರದಲ್ಲಿ (Modi Government) ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತದೆ. ಕಳೆದ 70 ವರ್ಷಗಳಲ್ಲಿ ಯಾರು ಅವರನ್ನು ಬೆದರಿಸಿ ಇಟ್ಟಿದ್ದಾರೆ? ಅವರನ್ನು ಯಾರು ಪ್ರತ್ಯೇಕವಾಗಿ ನೋಡಿದ್ದಾರೆ? 50-100 ವರ್ಷಗಳ ಬಳಿಕ ನಾವು ಯಾರು ಇರಲ್ಲ. ಆದರೆ ಮಾಡಿದ ಕೆಲಸಗಳು ಪರಿಣಾಮ ಬೀರುತ್ತವೆ. ತ್ರಿವಳಿ ತಲಾಖ್‌ ಕೋರ್ಟ್ ಹೇಳಿದರೂ ರದ್ದು ಮಾಡಲಿಲ್ಲ, ಕಾಂಗ್ರೆಸ್ ಸರ್ಕಾರ (Congress Government) ಯಾಕೆ ರದ್ದು ಮಾಡಲಿಲ್ಲ? ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಮುಸ್ಲಿಮರನ್ನು 2ನೇ ದರ್ಜೆ ನಾಗರಿಕಂತೆ ನೋಡಲಾಗುತ್ತಿದೆ ಎನ್ನುತ್ತಾರೆ. ಮುಸ್ಲಿಂ ಮಹಿಳೆಯರನ್ನ 2ನೇ ದರ್ಜೆ ನಾಗರಿಕನ್ನಾಗಿ ನೋಡಲಾಗುತ್ತಿತ್ತು. ಆದ್ರೆ ಇಂದು ಕೋಟ್ಯಂತರ ಮುಸ್ಲಿಂ ಮಹಿಳೆಯರು (Muslim Women) ಸ್ವಾತಂತ್ರ‍್ಯಗೊಂಡಿದ್ದಾರೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ನನ್ನ ವಿರುದ್ಧದ ಆರೋಪ ಸಾಬೀತುಪಡಿಸಿದ್ರೆ ರಾಜೀನಾಮೆ, ಇಲ್ಲದಿದ್ರೆ ನೀವು ಕೊಡಿ – ಅನುರಾಗ್ ಠಾಕೂರ್‌ಗೆ ಖರ್ಗೆ ಸವಾಲು

ವಕ್ಫ್ ಅನ್ನು ಬೇರೆ ದೇಶಗಳು ಸರ್ಕಾರಕ್ಕೆ ತೆಗೆದುಕೊಂಡು ನಡೆಸುತ್ತಿವೆ. ಆದ್ರೆ ನಾವು ಸರ್ಕಾರದ ವ್ಯಾಪ್ತಿಗೆ ತೆಗೆದುಕೊಂಡಿಲ್ಲ. ಬದಲಿಗೆ ಹೊಣೆಗಾರಿಕೆಗೆ ತರುತ್ತಿದ್ದೇವೆ. ಮುಸ್ಲಿಂ ದೇಶಗಳು ವಕ್ಫ್ ಅನ್ನು ಪರಾಮರ್ಶಕ, ಡಿಜಿಟಲ್ ಮಾಡುತ್ತಿವೆ. ಭಾರತದಲ್ಲಿ ಮಾಡಲು ಏನ್ ಸಮಸ್ಯೆ? ವಕ್ಫ್ ಆಸ್ತಿ ಸರಿಯಾದ ಕೈಯಲ್ಲಿ ಇರಬೇಕು, ಸರಿಯಾಗಿ ಬಳಕೆಯಾಗಬೇಕು. ವಕ್ಫ್ ಆಸ್ತಿ ಹೆಚ್ಚುತ್ತಿದೆ, ಹಾಗಾಗಿ ಅದರ ದುರುಪಯೋಗ ಆಗಬಾರದು. ಆದ್ದರಿಂದಲೇ ಅದಕ್ಕೆ ಕಾನೂನು ಮಾಡುತ್ತಿದ್ದೇವೆ, ದುರುಪಯೋಗ ತಡೆಯುತ್ತಿದ್ದೇವೆ ಎಂದು ಜೆ.ಪಿ ನಡ್ಡಾ ಹೇಳಿದರು. ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ

ಕಳೆದ ಕೆಲವು ದಶಕಗಳಿಂದ 5,970 ಸರ್ಕಾರಿ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಕರ್ನಾಟಕದಲ್ಲಿ 1975 -2020ರ ವರೆಗೂ 40 ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಿಸಲಾಗಿದೆ. ಇದರಲ್ಲಿ ಕೆರೆಗಳುಮ, ರೈತರ ಜಮೀನು, ಮಂದಿರ, ಸಾರ್ವಜನಿಕ ಆಸ್ತಿಯೂ ಸೇರಿದೆ. ವಕ್ಫ್ ಆಸ್ತಿಯಲ್ಲಿ ಏರಿಕೆಯಾದರೂ ಅದರ ಆದಾಯದಲ್ಲಿ ಯಾವುದೇ ಏರಿಕೆಯಾಗಿಲ್ಲ. ವಕ್ಫ್ ಆಸ್ತಿ ದುರ್ಬಳಕೆ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದೆ. ಕೇರಳದಲ್ಲಿ ಕ್ರಿಶ್ಚಿಯನ್ ಆಸ್ತಿಯನ್ನೂ ವಶಪಡಿಸಿಕೊಳ್ಳಿಸಲಾಗುತ್ತಿದೆ. ಅವರು ನಮ್ಮ ಬಳಿ ಅಳಲು ವ್ಯಕ್ತಪಡಿಸುತ್ತಿದ್ದಾರೆ. ಈ ದುರ್ಬಳಕೆಗೆ ಕಡಿವಾಣ ಹಾಕೋದಕ್ಕೆ ವಕ್ಫ್‌ ಮಸೂದೆಗೆ ತಿದ್ದುಪಡಿ ತರಲಾಗಿದೆ. ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

Share This Article