ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

Public TV
2 Min Read
uttar pradesh womans meerut like drum warning to husband assault video goes viral

ಲಕ್ನೋ: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ (Meerut) ನಡೆದ ಭೀಕರ ಹತ್ಯೆಯಂತೆಯೇ, ನಿನ್ನನ್ನು ಕತ್ತರಿಸಿ ಡ್ರಮ್‌ನಲ್ಲಿ ಹಾಕಿಬಿಡ್ತೀನಿ ಎಂದು ಮಹಿಳೆಯೊಬ್ಬಳು ಮಚ್ಚು ಹಿಡಿದು ತನ್ನ ಪತಿಗೆ (Husband) ಬೆದರಿಕೆ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಝಾನ್ಸಿ ಮೂಲದ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ ಮೇಲೆ ಪತ್ನಿ (Wife) ಮಾಯಾ ಮೌರ್ಯ ಮತ್ತು ಆಕೆಯ ಪ್ರೇಮಿ ನೀರಜ್ ಮೌರ್ಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು 

2016ರಲ್ಲಿ ಕುಶ್ವಾಹ ಅವರು ಬಸ್ತಿ ಜಿಲ್ಲೆಯ ನಿವಾಸಿ ಮಾಯಾ ಮೌರ್ಯ ಅವರನ್ನು ಪ್ರೇಮ ವಿವಾಹವಾಗಿದ್ದರು. ಬಳಿಕ ಕುಶ್ವಾಹ 2022 ರಲ್ಲಿ ಮಾಯಾಳ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿದ್ದರು. ನಂತರ ಮಾಯಾ ಸಂಬಂಧಿ ನೀರಜ್ ಮೌರ್ಯ ಅವರಿಗೆ ಆ ಜಾಗದಲ್ಲಿ ಮನೆ ನಿರ್ಮಾಣದ ಕೆಲಸವನ್ನು ವಹಿಸಿದ್ದರು. ಇದಾದ ಬಳಿಕ ಮಾಯಾ ಹಾಗೂ ನೀರಜ್‌ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಕೋವಿಡ್ -19 ಸಮಯದಲ್ಲಿ ನೀರಜ್ ಪತ್ನಿಯ ಮರಣದ ನಂತರ ಅವರ ಸಂಬಂಧ ಇನ್ನೂ ಹೆಚ್ಚಾಗಿತ್ತು. 2024 ರಂದು ಮಾಯಾ ಮತ್ತು ನೀರಜ್‌ ಖಾಸಗಿ ಕ್ಷಣಗಳನ್ನು ಕುಶ್ವಾಹ ಗಮನಿಸಿ ಗಲಾಟೆ ಮಾಡಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ಮಾಡಿ, ಮಾಯಾ ಮನೆ ತೊರೆದಿದ್ದಳು.

2024ರ ಆಗಸ್ಟ್‌ನಲ್ಲಿ ನೀರಜ್ ಜೊತೆಗೆ ಬಂದಿದ್ದ ಮಾಯಾ ಮನೆಯ ಬೀಗ ಮುರಿದು 15 ಗ್ರಾಂ ಚಿನ್ನದ ಸರ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕುಶ್ವಾಹ ಸೆಪ್ಟೆಂಬರ್ 2024ರಲ್ಲಿ ದೂರು ದಾಖಲಿಸಿದ್ದರು. ಇನ್ನೂ, ಇದೇ ತಿಂಗಳ 29ರಂದು ಮಾಯಾ ಮತ್ತು ನೀರಜ್ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಇತ್ತೀಚೆಗೆ ಮೀರತ್‌ನಲ್ಲಿ ನಡೆದ ವ್ಯಕ್ತಿಯ ಕೊಲೆ ಮಾದರಿಯಲ್ಲೇ ನನ್ನನ್ನು ಹತ್ಯೆಗೈದು ಡ್ರಮ್‌ನಲ್ಲಿ ಪ್ಯಾಕ್ ಮಾಡುತ್ತೇನೆ ಎಂದು ಮಾಯಾ ಬೆದರಿಕೆ ಹಾಕಿದ್ದಾಳೆ ಎಂದು ಕುಶ್ವಾಹ ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ಮಾಯಾ, ತನ್ನ ಪತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ ಮತ್ತು ನಾಲ್ಕು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

Share This Article