ಟಾಲಿವುಡ್ ನಟ ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ‘ಪೆಡ್ಡಿ’ (Peddi) ಎಂದು ಚಿತ್ರಕ್ಕೆ ಕ್ಯಾಚಿ ಟೈಟಲ್ ಅನ್ನೇ ಸಿನಿಮಾಗೆ ಇಡಲಾಗಿದೆ. ಇದನ್ನೂ ಓದಿ:ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾ ರಾವ್ ಜಾಮೀನು ಅರ್ಜಿ ಆದೇಶ ಇಂದು
‘ಆರ್‌ಆರ್‌ಆರ್’ (RRR) ಸಿನಿಮಾದ ಬಳಿಕ ಡೈರೆಕ್ಟರ್ ಬುಚ್ಚಿ ಬಾಬು ಸನಾ ಜೊತೆ ರಾಮ್ ಚರಣ್ ಕೈಜೋಡಿಸಿದ್ದಾರೆ. ಈ ಸಿನಿಮಾಗೆ ‘ಪೆಡ್ಡಿ’ ಎಂದು ಮಸ್ತ್ ಆಗಿರೋ ಟೈಟಲ್ ಅನ್ನೇ ಇಡಲಾಗಿದೆ. ರಾಮ್ ಚರಣ್ ಅವರು ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಾಯಲ್ಲಿ ಬೀಡಿ ಇದೆ. ಅವರ ಲುಕ್ ಸಖತ್ ರಗಡ್ ಆಗಿದೆ. ನಟನ ಲುಕ್ ನೋಡಿ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ.
View this post on Instagram
ಇನ್ನೂ ಈ ಚಿತ್ರದಲ್ಲಿ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ನಟಿಸಿದ್ದಾರೆ. ಕನ್ನಡದ ನಟ ಶಿವರಾಜ್‌ಕುಮಾರ್ ಕೂಡ ಪವರ್‌ಫುಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್, ಮೈಸೂರು ಸೇರಿದಂತೆ ಹಲವೆಡೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.
ಮೂರು ವರ್ಷಗಳ ಬಳಿಕ ‘ಪೆಡ್ಡಿ’ ಚಿತ್ರದ ಮೂಲಕ ಬರುತ್ತಿರೋ ರಾಮ್ ಚರಣ್‌ರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.