ಮುಂಬೈ: ಇಲ್ಲಿನ ಜುಹು ಉಪನಗರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ಅವರ ಐಷಾರಾಮಿ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಅಪಘಾತದಲ್ಲಿ (Car Accident) ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈನ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (BEST) ಸಂಸ್ಥೆಯ ಬಸ್ ನಟಿಯ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭದಲ್ಲಿ ನಟಿ ಕಾರಿನಲ್ಲಿ ಇರಲಿಲ್ಲ. ಆದ್ರೆ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಅದು ಐಶ್ವರ್ಯ ರೈ ಅವರದ್ದೇ ಕಾರು ಎಂಬುದು ಹೊತ್ತಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Aashiqui 3: ಕಾರ್ತಿಕ್ ಆರ್ಯನ್, ಶ್ರೀಲೀಲಾ ನಟನೆಯ ಸಿನಿಮಾ ಶೂಟಿಂಗ್ ಶುರು
ಅಪಘಾತ ದೃಶ್ಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕಾರು ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್ ಬಸ್ ಚಾಲಕನಿಗೆ ಕಪಾಳಕ್ಕೆ ಬಾರಿಸಿದ್ದಾನೆ ಎಂದು ಬೆಸ್ಟ್ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಮೋಹನ್ ಲಾಲ್ ಪೂಜೆ- ಶುರುವಾಯ್ತು ಪರ ವಿರೋಧದ ಚರ್ಚೆ
ಒಂದಿಷ್ಟು ಹೈಡ್ರಾಮಾ ಬಳಿಕ ಬೌನ್ಸರ್ ಪೊಲೀಸರ ಎದುರು ಚಾಲಕನಿಗೆ ಕ್ಷಮೆ ಕೋರಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ