ಬಾಲಿವುಡ್ ನಟ ಕಾರ್ತಿಕ್ ಆರ್ಯನ್‌ಗೆ (Karthik Aryan) ಶ್ರೀಲೀಲಾ (Sreeleela) ಜೊತೆಯಾಗಿದ್ದಾರೆ. ಡೇಟಿಂಗ್ ವದಂತಿಯ ನಡುವೆ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಕಾರ್ತಿಕ್ ಮತ್ತು ಶ್ರೀಲೀಲಾ ಭಾಗಿಯಾಗಿದ್ದಾರೆ. ಇದನ್ನೂ ಓದಿ:ನನ್ನ ಮೇಲೆ ಕಲ್ಲೆಸೆದಿಲ್ಲ: ಸೋನು ನಿಗಮ್ ಸ್ಪಷ್ಟನೆ
‘ಆಶಿಕಿ 3’ (Aashiqui 3) ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡದ ಜೊತೆ ಈ ಜೋಡಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ. ಇಬ್ಬರೂ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
View this post on Instagram
ಅನುರಾಗ್ ಬಸು ನಿರ್ದೇಶನದ ರೊಮ್ಯಾಂಟಿಕ್ ಲವ್ ಸ್ಟೋರಿ ಕುರಿತಾದ ಸಿನಿಮಾ ಇದಾಗಿದೆ. ಇದೇ ವರ್ಷ ದೀಪಾವಳಿ ಹಬ್ಬದಂದು ಸಿನಿಮಾ ತೆರೆ ಕಾಣಲಿದೆ. ಇದನ್ನೂ ಓದಿ:ಲಾಂಗ್ ವಿವಾದ: ರಜತ್, ವಿನಯ್ 3 ದಿನ ಪೊಲೀಸ್ ಕಸ್ಟಡಿಗೆ
#KartikAaryan and #Sreeleela in West Bengal, shooting for their Next Film Directed by Anurag Basu.
Releasing this Diwali. pic.twitter.com/uJSpRUmDUq
— Asad (@KattarAaryan) March 25, 2025
ಇತ್ತೀಚೆಗೆ ನಡೆದ ಅವಾರ್ಡ್ ಫಂಕ್ಷನ್‌ನಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು. ಕಾರ್ತಿಕ್ ಆರ್ಯನ್ ತಾಯಿ ಆಡಿದ ಮಾತು ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡಿತ್ತು.
ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ಡಾಕ್ಟರ್ ಸೊಸೆ ಬೇಕು ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿದೆ. ಕಾರ್ತಿಕ್ ಮತ್ತು ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದ್ದರೂ, ಈ ಜೋಡಿ ಮಾತ್ರ ಇದುವರೆಗೂ ಏನು ಪ್ರತಿಕ್ರಿಯೆ ನೀಡಿಲ್ಲ. ಈ ಬೆನ್ನಲ್ಲೇ ಹೊಸ ಸಿನಿಮಾದ ಶೂಟಿಂಗ್‌ನಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.