ಬೆಂಗಳೂರು: ʻಸೌಗಾದ್ ಎ ಮೋದಿʼ (Saugat-e-Modi) ಹೆಸರಿನಲ್ಲಿ 32 ಲಕ್ಷ ಗಿಫ್ಟ್ ಕಿಟ್ (Eid Gift Kit) ಕೊಡೋದು ಮುಸ್ಲಿಂ ಓಲೈಕೆ ಅಲ್ವಾ? ಅಂತಾ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇವರ ಮಕ್ಕಳು ಎಸಿ ರೂಮಲ್ಲಿ ಕೂತಿರ್ತಾರೆ. ಹೊರಗಡೆ ಬೇರೆಯವರು ಮಾತ್ರ ಹೋರಾಟ ಮಾಡಬೇಕು ಅಂತಾ ಬಿಜೆಪಿ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ
ಉತ್ತರ ಪ್ರದೇಶ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಮುಸ್ಲಿಮರನ್ನ (Muslims) ಒಬಿಸಿಗೆ ಸೇರಿಸಿದ್ದಾರೆ. ಧಾರ್ಮಿಕ ಆಧಾರದ ಮೀಸಲಾತಿ ಎನ್ನುವ ಬಿಜೆಪಿಯವರಿಗೆ ಏನಾದರೂ ಕಾಮನ್ ಸೆನ್ಸ್ ಇದ್ಯಾ ಸ್ವಲ್ಪನಾದ್ರು ಸಾಮಾನ್ಯ ಪ್ರಜ್ಞೆ ಇದೆಯಾ? ನಾಲ್ಕು ಕಮಿಷನ್‌ಗಳು ಮುಸ್ಲಿಮರಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿವೆ. ಮುಸ್ಲಿಮರು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಶಿಫಾರಸು ಮಾಡಿದೆ. ನಾಲ್ಕು ಕಮಿಷನ್‌ಗಳ ಅಧ್ಯಕ್ಷರು ಮುಸಲ್ಮಾನರಾ? ಹಿಂದುಗಳಲ್ವಾ? 4% ಪರ್ಸೆಂಟ್ ಮೀಸಲಾತಿಯನ್ನ ಎಸ್‌ಸಿ, ಎಸ್ಟಿ ಕೆಟಗೆರಿಗೆ 1, ಕೆಟಗರಿ 2ಕ್ಕೆ ನೀಡಿದ್ವಿ. ಅದನ್ನ ಮುಸ್ಲಿಮರಿಗೆ ವಿಸ್ತರಣೆ ಮಾಡುತ್ತಿದ್ದೇವೆ. ಇದು ಧಾರ್ಮಿಕ ಆಧಾರದ ಮೀಸಲಾತಿ ಹೇಗಾಗುತ್ತದೆ? ಅಂತ ಪ್ರಶ್ನೆ ಮಾಡಿದರು.
ಸಂವಿಧಾನದ (Constitution) ಅರಿವನ್ನ ಮೂಡಿಸಿಕೊಂಡರೆ ಇದೆಲ್ಲ ಸಮಸ್ಯೆ ಆಗುವುದಿಲ್ಲ. ಸಂವಿಧಾನವನ್ನು ಕರೆಕ್ಟಾಗಿ ಓದಿಕೊಳ್ಳುವುದಿಲ್ಲ ಸುಮ್ಮನೆ ಬಂದು ಮಾತನಾಡಿ ಜನರ ದಾರಿ ತಪ್ಪಿಸುತ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹನಿಟ್ರ‍್ಯಾಪ್ ಪ್ರಕರಣ; ಜೆಡಿಎಸ್‌ನಲ್ಲಿ ಯಾರು ಟ್ರ‍್ಯಾಪ್ ಆಗಿಲ್ಲ: ಅನ್ನದಾನಿ