ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಅವರು ನಿವೇದಿತಾ (Niveditha Gowda) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ಮೇಲೆ ಸಂಜನಾ ಜೊತೆ ಹೆಸರು ಸದ್ದು ಮಾಡಿತ್ತು. ‘ಸಲಗ’ ನಟಿ ಸಂಜನಾ (Sanjana Anand) ಜೊತೆ ಚಂದನ್ 2ನೇ ಮದುವೆ ಆಗ್ತಾರೆ ಎಂದೇ ಸುದ್ದಿ ಹರಿದಾಡಿತ್ತು. ಅದಕ್ಕೆಲ್ಲಾ ಈಗ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಈ ಗಾಸಿಪ್ ಹೇಗೆ ಶುರುವಾಯ್ತು ಗೊತ್ತಿಲ್ಲ. ಈ ವಿಚಾರ ಸುಳ್ಳು ಎಂದಿದ್ದಾರೆ.
ಸಂಜನಾ ಆನಂದ್ ಜೊತೆ 2ನೇ ಮದುವೆ ಆಗ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿ, ಈ ರೀತಿ ಸುದ್ದಿ ಹರಿದಾಡೋದು ಕಾಮನ್. ಯಾರು ಗಾಸಿಪ್ ಶುರು ಮಾಡಿದ್ರು ಗೊತ್ತಿಲ್ಲ. ಈಗಿನ ಸೋಶಿಯಲ್ ಮೀಡಿಯಾ ಆ ರೀತಿ ಇದೆ. ಏನು ಮಾಡೋಕೆ ಆಗಲ್ಲ. ಯಾರೋ ಏನೋ ಒಂದು ಪೋಸ್ಟ್ ಹಾಕಿದ್ರೆ, ಅದನ್ನೇ ನಿಜ ಎಂದು ಜನ ನಂಬುತ್ತಾರೆ. ಆದರೆ ಈ ವಿಚಾರ ನನ್ನ ವೈಯಕ್ತಿಕ ಜೀವನಕ್ಕೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಪಬ್ಲಿಕ್ ಫಿಗರ್ ಅಂದಾಗ ಹೀಗೆ ಸುದ್ದಿ ಹಬ್ಬೋದು ಕಾಮನ್, ಈ ವಿಚಾರ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ನಿರ್ದೇಶಕನ ಜೊತೆ ಶಾರುಖ್ ಖಾನ್ ಸಿನಿಮಾ
ಇತ್ತ ಸಂಜನಾ ಆನಂದ್ ಕೂಡ ಮಾತನಾಡಿ, ಎಲ್ಲರೂ ಕಾಲ್ ಮಾಡಿ, ಚಂದನ್ ಜೊತೆ ಮದುವೆನಾ? ಎಂದೆಲ್ಲಾ ಕೇಳುತ್ತಿದ್ದರು. ಆ ರೀತಿ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ‘ಸೂತ್ರಧಾರಿ’ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆ ಸಂಜನಾ ಸೊಂಟ ಬಳುಕಿಸಿದ್ದಾರೆ. ‘ಡ್ಯಾಶ್’ ಎಂಬ ಸ್ಪೆಷಲ್ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ರಿಲೀಸ್ ಆಗ್ತಿದ್ದಂತೆ ಚಂದನ್ ಮತ್ತು ಸಂಜನಾ ಮದುವೆ ಆಗ್ತಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆಲ್ಲಾ ನಟ ಸ್ಪಷ್ಟನೆ ನೀಡಿದ್ದಾರೆ.