ಚಿಕ್ಕಮಗಳೂರು: ಭದ್ರಾ ನದಿಯಲ್ಲಿ (Bhadra River) ಈಜಲು ತೆರಳಿದ್ದ ರಾಜಸ್ಥಾನ (Rajasthan) ಮೂಲದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಕಳಸ (Kalasa) ತಾಲೂಕಿನ ಸಂಜೆ ಮೆಟ್ಟಿಲು ತೂಗು ಸೇತುವೆ ಬಳಿ ನಡೆದಿದೆ.
ಮೃತರನ್ನು ಜಗದೀಶ್ (33) ಹಾಗೂ ಚೋಟಾಸಿಂಗ್ (28) ಎಂದು ಗುರುತಿಸಲಾಗಿದೆ. ರಾಜಸ್ಥಾನದಿಂದ 12 ಜನ ಸ್ನೇಹಿತರು ಪ್ರವಾಸಕ್ಕೆಂದು ಎರಡು ಕಾರಿನಲ್ಲಿ ಕಳಸಕ್ಕೆ ಬಂದಿದ್ದರು. ಕಳಸ ಸಮೀಪದ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಮೊದಲು ಡಿಕೆಶಿಯಿಂದ ಶಕ್ತಿಪ್ರದರ್ಶನ!
ಸಂಜೆ ಮೆಟ್ಟಿಲು ಸಮೀಪದ ತೂಗುಸೇತುವೆ ಜಾಗ ಅತ್ಯಂತ ಅಪಾಯಕಾರಿಯಾಗಿದೆ. ಭಾರೀ ಆಳ ಇರುವ ಜಾಗವಾಗಿದ್ದು, ಈ ಸ್ಥಳದಲ್ಲಿ ಮಾಹಿತಿ ಇಲ್ಲದವರು ಈಜುವುದು ಕಷ್ಟ. ಆದರೆ, ರಾಜಸ್ಥಾನದಿಂದ ಬಂದವರಿಗೆ ಸ್ಥಳದ ಪರಿಚಯ ಇಲ್ಲದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮಲ್ಪೆಯ ಮುಳುಗು ತಜ್ಞ ಭಾಸ್ಕರ್, ಇಬ್ಬರ ಮೃತದೇಹಗಳನ್ನು ಮೇಲಕ್ಕೆ ಎತ್ತಿದ್ದಾರೆ. ಅವರು ನೀರಿನಲ್ಲಿ ಮುಳುವಾಗ ಜೊತೆಗಿದ್ದ ಸ್ನೇಹಿತರು ಎಳೆಯುವ ಪ್ರಯತ್ನ ಮಾಡಿದರೂ ನದಿ ಆಳವಿದ್ದ ಕಾರಣ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು