ದುಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಗೆ ಸೆಡ್ಡು ಹೊಡೆಯಲು ಸೌದಿ ಅರೇಬಿಯಾ ಪ್ಲ್ಯಾನ್ ಮಾಡಿದೆ. 500 ಮಿಲಿಯನ್ ಡಾಲರ್ (ಸುಮಾರು 4,347 ಕೋಟಿ ರೂಪಾಯಿ) ಹೂಡಿಕೆ ಮಾಡಿ ಟಿ20 ಕ್ರಿಕೆಟ್ (Grand Slam Cricket) ಲೀಗ್‌ವೊಂದನ್ನ ಆರಂಭಿಸಲು ಚಿಂತನೆ ನಡೆಸಿದೆ.
8 ತಂಡಗಳ ಟೆನ್ನಿಸ್ ಗ್ರ್ಯಾಂಡ್‌ಸ್ಲ್ಯಾಮ್ ಮಾದರಿಯಲ್ಲೇ ಕ್ರಿಕೆಟ್ ಲೀಗ್ ನಡೆಸಲು ಉದ್ದೇಶಿಸಿದೆ. ಈ ವ್ಯವಸ್ಥೆಯಲ್ಲಿ ತಂಡಗಳು ಒಂದು ವರ್ಷದಲ್ಲಿ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ಒಟ್ಟು ಸೇರುತ್ತವೆ. ಎ-ಲೀಗ್‌ನ ಮಾಜಿ ಸಿಇಒ ಡ್ಯಾನಿ ಟೌನ್‌ಸೆಂಡ್ ನೇತೃತ್ವದ ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್ ಲೀಗ್‌ನ ಪೋಷಕನಾಗಲಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಒಂದು ವರ್ಷದಿಂದಲೂ ಎಸ್‌ಆರ್‌ಜೆ ಸ್ಪೋರ್ಟ್ಸ್ ಇನ್ವೆಸ್ಟ್‌ಮೆಂಟ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ನಡುವೆ ಈ ಟಿ20 ಲೀಗ್ ಕುರಿತಂತೆ ಮಾತುಕತೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಟೂರ್ನಿ ಆಯೋಜಿಸುವ ಕುರಿತು ಒಂದು ವರ್ಷದಿಂದಲೂ ರಹಸ್ಯ ಮಾತುಕತೆ ನಡೆಯುತ್ತಿದೆ. ಈ ಪರಿಕಲ್ಪನೆಯ ಹಿಂದಿರುವ ಪ್ರಮುಖ ವ್ಯಕ್ತಿ ಆಸ್ಟ್ರೇಲಿಯಾದ ಎನ್‌ಎಸ್‌ಡಬ್ಲ್ಯು ಮತ್ತು ವಿಕ್ಟೋರಿಯ ತಂಡಗಳ ಮಾಜಿ ಆಲ್‌ರೌಂಡರ್ ನೀಲ್ ಮ್ಯಾಕ್ಸ್‌ವೆಲ್ ಎನ್ನಲಾಗಿದೆ. ಇದನ್ನೂ ಓದಿ: ಭಾರತದ ಟೆಸ್ಟ್ ಟೀಂ ಕ್ಯಾಪ್ಟನ್ ಆಗಿ ಮುಂದುವರಿಯಲಿದ್ದಾರೆ ರೋಹಿತ್ ಶರ್ಮಾ – ಚಾಂಪಿಯನ್ಸ್ ಟ್ರೋಫಿ ಗೆಲುವಿನಿಂದ ನಾಯಕತ್ವಕ್ಕೆ ಬೂಸ್ಟ್!
ಈ ಯೋಜನೆಯ ಮುಖ್ಯ ಉದ್ದೇಶ ಕ್ರಿಕೆಟ್‌ನ ‘ಅತ್ಯಂತ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೈತ್ಯ ತಂಡಗಳನ್ನು ಮೀರಿ ಕ್ರಿಕೆಟ್ ಉಳಿಸುವ ಉದ್ದೇಶ ಹೊಂದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 | ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ ವೀರರು ಇವರೇ…