PUBLiC TV Exclusive | ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ – ಸಿಐಡಿ ವಿಚಾರಣೆ ಆದೇಶ ವಾಪಸ್ ಪಡೆದ ಸರ್ಕಾರ!

Public TV
2 Min Read
Ranya Rao 1

ಬೆಂಗಳೂರು: ನಟಿ ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Ranya Rao Gold Smuggling Case) ಸ್ಫೋಟಕ ವಿಚಾರಗಳು ಬಯಲಿಗೆ ಬರ್ತಿವೆ. ಈ ನಡುವೆ ರಾಜ್ಯ ಸರ್ಕಾರವೇ ಸಿಐಡಿ ವಿಚಾರಣೆಗೆ (CID Investigation) ನೀಡಿದ್ದ ಆದೇಶವನ್ನು ವಾಪಸ್‌ ಪಡೆದಿದೆ.

ಶಿಷ್ಟಾಚಾರ ಉಲ್ಲಂಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶ ನೀಡಿದ್ದ ಸರ್ಕಾರ ಒಂದೇ ದಿನದಲ್ಲಿ ಯೂಟರ್ನ್‌ ಹೊಡೆದಿದೆ. ಮೊನ್ನೆ ರಾತ್ರಿ ಆದೇಶ ನೀಡಿ, ನಿನ್ನೆ ರಾತ್ರಿಯೇ ಆದೇಶ ವಾಪಸ್ ಪಡೆದಿದೆ. ಸದ್ಯ ಸರ್ಕಾರದ ದಿಢೀರ್‌ ಯೂಟರ್ನ್‌ ನಿರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರನ್ಯಾ ರಾವ್ ಪ್ರಕರಣದಲ್ಲಿ ಯಾರ ಒತ್ತಡ ಹೆಚ್ಚಾಗಿತ್ತು..? ಎಂಬ ಪ್ರಶ್ನೆಯೂ ಹುಟ್ಟುಹಾಕಿದೆ. ಇದನ್ನೂ ಓದಿ: ಭೂಸ್ವಾಧೀನ ಪರಿಹಾರ ನೀಡದ ಜಿಲ್ಲಾಡಳಿತ – ಹಾವೇರಿ ಜಿಲ್ಲಾಧಿಕಾರಿ ಕಾರು ಜಪ್ತಿ

ಸಿಐಡಿ ತನಿಖೆ ಆದೇಶ ಬೆನ್ನಲ್ಲೇ ಐಓ ಆಗಿ ರಾಘವೇಂದ್ರ ಹೆಗ್ಡೆ ಅವರ ನೇಮಕ ಆಗಿತ್ತು. ಆದ್ರೆ ಆದೇಶ ಹಿಂಪಡೆಯಲಾಗಿದ್ದು, ಸಿಐಡಿ ಡಿಜಿಪಿ ತನಿಖಾಧಿಕಾರಿಯನ್ನ ನೇಮಕಗೊಳಿಸಿದ ಬಳಿಕ ಏಕೆ ಸರ್ಕಾರದ ವರಸೆ ಬದಲಾಯ್ತು..? ಎಂಬುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಈಗ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ತನಿಖೆಯಷ್ಟೇ ನಡೆಯಲಿದೆ. ಅದು ಪ್ರೋಟೋಕಾಲ್ ಉಲ್ಲಂಘನೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ವಿರುದ್ಧದ ಆರೋಪದ ಬಗ್ಗೆ ತನಿಖೆ ಮಾತ್ರ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕದ ಮದ್ಯದ ಮೇಲೆ ಭಾರತ 150%, ಕೃಷಿ ಉತ್ಪನ್ನಗಳ ಮೇಲೆ 100% ತೆರಿಗೆ ವಿಧಿಸುತ್ತಿದೆ: ವೈಟ್‌ಹೌಸ್

Ranya

ಬಗೆದಷ್ಟೂ ರಹಸ್ಯ ಬಯಲು:
ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ ಬರ್ತಿವೆ. ಕಳೆದ ವರ್ಷದ ಕೊನೆಯಲ್ಲಿ 2 ಬಾರಿ ದುಬೈನಲ್ಲಿ ಚಿನ್ನ ಖರೀದಿ ಮಾಡಿದ್ದ ರನ್ಯಾರಾವ್, ಅದನ್ನು ಸ್ವಿಟ್ಜರ್‌ಲೆಂಡ್‌ಗೆ ಕೊಂಡೊಯ್ಯೋದಾಗಿ ಹೇಳಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿದ್ರು. ಜಿನೇವಾಗೆ ಹೋಗೋದಾಗಿ ಸುಳ್ಳು ಹೇಳಿದ್ದ ರನ್ಯಾರಾವ್ ನೇರವಾಗಿ ಭಾರತಕ್ಕೆ ಬಂದಿದ್ರು ಎಂಬುದು ಆಕೆಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಗೊತ್ತಾಗಿದೆ ಎಂದು ಡಿಆರ್‌ಐ, ಅರೆಸ್ಟ್ ಮೆಮೋದಲ್ಲಿ ತಿಳಿಸಿದೆ. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ರಾಜ್ಯಪಾಲರಿಗೆ ಬಿಜೆಪಿ ದೂರು

ರನ್ಯಾ ರಾವ್ ನಿರಂತರವಾಗಿ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕಿಂಗ್‌ಪಿನ್ ಆಗಿರುವ ಈಕೆ ಆರು ತಿಂಗಳು ದೇಶದಿಂದ ಹೊರಗೆ ಇರ್ತಿದ್ರು.. ಎಂದಿದೆ. ರನ್ಯಾ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಎಲ್ಲಾ ಅಂಶಗಳು ಪ್ರಸ್ತಾಪವಾದ್ವು. ಸರ್ಚ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ನಿದ್ದೆ ಮಾಡೋಕೂ ಬಿಡದೇ ವಿಚಾರಣೆ ನಡೆಸಿದ್ದಾರೆ. ನಿದ್ದೆಯ ಹಕ್ಕನ್ನು ಕಿತ್ಕೊಂಡಿದ್ದಾರೆ ಎಂದು ರನ್ಯಾ ಪರ ವಕೀಲರು ವಾದ ಮಂಡಿಸಿದ್ರು. ರನ್ಯಾ ಮದ್ವೆಯಾದ ಮಹಿಳೆ. ಅವರೆಲ್ಲೂ ಹೋಗಲ್ಲ.. ಜಾಮೀನು ನೀಡಿ ಎಂದು ಮನವಿ ಮಾಡಿದ್ರು. ಆದ್ರೆ, ಇದನ್ನು ಡಿಆರ್‌ಐ ಪರ ವಕೀಲರು ಆಕ್ಷೇಪಿಸಿದ್ರು. ರನ್ಯಾಗೆ ಕರೆ ಮಾಡಿದ್ದ ವ್ಯಕ್ತಿಗೆ ಸಮನ್ಸ್ ನೀಡಿ ಹೇಳಿಕೆ ಪಡೆಯಲಾಗಿದೆ. ಯಾವುದೇ ಲೋಪ ಎಸಗಿಲ್ಲ. ಆಕೆ ಬಳಿ ಯುಎಇ ರೆಸಿಡೆನ್ಸಿ ಕಾರ್ಡ್ ಸಿಕ್ಕಿದೆ. ಹೀಗಾಗಿ ಜಾಮೀನು ಕೊಡಬಾರದು ಎಂದು ಪ್ರತಿವಾದ ಮಾಡಿದ್ರು. ಕಡೆಗೆ ಕೋರ್ಟ್ ಮಾರ್ಚ್ 14ಕ್ಕೆ ಆದೇಶ ಕಾಯ್ದಿರಿಸಿತು.

Share This Article