ಬಾಗಲಕೋಟೆ | ಕುರಿ ಕಳ್ಳರನ್ನ ಹಿಡಿಯಲು ಹೋದ ವ್ಯಕ್ತಿಯ ಕೊಲೆ – ಆರೋಪಿಗಳು ಅರೆಸ್ಟ್

Public TV
1 Min Read
bagalakote murder

ಬಾಗಲಕೋಟೆ: ಕುರಿ ಕಳ್ಳರನ್ನು ಹಿಡಿಯಲು ಹೋದ ವ್ಯಕ್ತಿಯನ್ನ ಮೂವರು ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯ ಬಾದಾಮಿ (Badami) ತಾಲೂಕಿನ ಹಳಗೇರಿ ಗ್ರಾಮದ ಟೋಲನಾಕಾ ಹತ್ತಿರ ನಡೆದಿದೆ.

ಉಗಲವಾಟ ಗ್ರಾಮದ ಶರಣಪ್ಪ ಜಮ್ಮನಕಟ್ಟಿ(23) ಹತ್ಯೆಯಾದ ವ್ಯಕ್ತಿ. ಉಗಲವಾಟ ಗ್ರಾಮದ ಯಾಕುಬ್ ಅಗಸಿಮನಿ, ಸಲ್ಮಾನ ಕರೆಮನ್ಸೂರ, ಸಚಿನ್ ಭಜಂತ್ರಿ ಬಂಧಿತ ಆರೋಪಿಗಳು. ಇದನ್ನೂ ಓದಿ: ‘ಅವತಾರ್’ ಚಿತ್ರದಲ್ಲಿ ಆಕ್ಟ್ ಮಾಡೋಕೆ 18 ಕೋಟಿ ಆಫರ್ ಬಂದಿತ್ತು: ನಟ ಗೋವಿಂದ

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಆರೋಪಿಗಳು, ಶರಣಪ್ಪ ಅವರ ಹೊಲದ ದಡ್ಡಿಯಲ್ಲಿರುವ ಕುರಿಗಳನ್ನು ಕಳ್ಳತನ ಮಾಡಲು ಬಂದಿದ್ದರು. ಕುರಿಕಳ್ಳರನ್ನು ಗಮನಿಸಿದ ಶರಣಪ್ಪ, ಯಾಕುಬ್ ಅಗಸಿಮನಿಯನ್ನು ಹಿಡಿದುಕೊಂಡಿದ್ದರು. ಈ ವೇಳೆ ಆರೋಪಿಗಳು, ಶರಣಪ್ಪ ಅವರನ್ನು ಕಲ್ಲು, ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳ ಚರ್ಚೆಗೆ ವಿಪಕ್ಷಗಳ ಆಗ್ರಹ

ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಟಿ ರನ್ಯಾಗೆ ಸಿದ್ದರಾಮಯ್ಯರಿಂದ ಪರಮೇಶ್ವರ್‌ವರೆಗೆ ಯಾರೂ ಸಪೋರ್ಟ್ ಮಾಡಿಲ್ಲ: ಚಲುವರಾಯಸ್ವಾಮಿ

Share This Article