ವಿ.ಜಿ ಮಂಜುನಾಥ್ ನಿರ್ಮಾಣ ಮಾಡಿರುವ ‘ಅಪಾಯವಿದೆ ಎಚ್ಚರಿಕೆ’ (Apaayavide Eccharike) ಚಿತ್ರ ಇದೀಗ ರಾಜ್ಯಾದ್ಯಂತ ರಿಲೀಸ್ ಆಗಿ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದರೊಂದಿಗೆ ದಶಕಗಳಿಗೂ ಹೆಚ್ಚು ಕಾಲ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವ ಅಭಿಜಿತ್ ತೀರ್ಥಹಳ್ಳಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಸಿನಿಮಾ ಮೂಲಕವೇ ಒಂದಷ್ಟು ನವ ಪ್ರತಿಭೆಗಳಿಗೂ ಕೂಡ ವೇದಿಕೆ ಸಿಕ್ಕಿದೆ. ತೀರ್ಥಹಳ್ಳಿಯ ಮಲೆನಾಡಿನ ಮಡಿಲಲ್ಲಿ ಹುಟ್ಟಿ, ಅಲ್ಲಿಯ ರಂಗಭೂಮಿ ಮೂಲಕ ಬಣ್ಣದ ಲೋಕದ ಕನಸು ಕಂಡಿದ್ದ ಮಿಥುನ್ ತೀರ್ಥಹಳ್ಳಿ (Mithun Thirthahalli) ಈ ಸಿನಿಮಾದ ಮೂರು ಮುಖ್ಯ ಪಾತ್ರಗಳಲ್ಲಿ ಒಂದನ್ನು ನಿರ್ವಹಿಸಿದ್ದಾರೆ. ಈ ಮೂಲಕ ಒಂದಷ್ಟು ವರ್ಷಗಳ ನಿರಂತರ ಪ್ರಯತ್ನ, ಪ್ರತಿಭೆಗಳು ನಿರ್ಣಾಯಕ ಘಟ್ಟ ತಲುಪಿಕೊಂಡಂತಾಗಿದೆ.
Advertisement
ತೀರ್ಥಹಳ್ಳಿ ಸೀಮೆಯಲ್ಲಿ ಹುಟ್ಟಿ ಬೆಳೆದಿರುವ ಮಿಥುನ್ ಪಾಲಿಗೆ ಹೊಸ ಜಗತ್ತು ಕಾಣಿಸಿದ್ದು ಈ ಭಾಗದ ರಂಗಭೂಮಿ ತಂಡಗಳ ಮೂಲಕ. ನಟಮಿತ್ರರು, ಸ್ಪಂದನಾದಂಥಾ ತಂಡಗಳೊಂದಿಗೆ ಹಲವಾರು ನಾಟಕ, ಬೀದಿ ನಾಟಕಗಳಲ್ಲಿ ಭಾಗಿಕಯಾಗಿದ್ದ ಮಿಥುನ್ ತೀರ್ಥಹಳ್ಳಿ ಪಾಲಿಗೆ ಕಾಲೇಜು ದಿನಗಳಲ್ಲಿಯೇ ಬದುಕಿನ ಗುರಿ ಸ್ಪಷ್ಟವಾಗಿತ್ತು. ಅದರ ಫಲವಾಗಿ ನಟನಾಗಬೇಕೆಂಬ ಕನಸು ಹೊತ್ತು ಬೆಂಗಳೂರು ಸೇರಿದ್ದ ಮಿಥುನ್ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಕಡೆಗೂ ಪೋಸ್ಟರ್ ಮೂಲಕ ‘ಅಪಾಯವಿದೆ ಎಚ್ಚರಿಕೆ’ ಆಡಿಷನ್ ನಡೆಯುತ್ತಿರೋ ವಿಚಾರ ತಿಳಿದ ಮಿಥುನ್ ಅದರಲ್ಲಿ ಭಾಗಿಯಾಗಿದ್ದರು. ಕಡೆಗೂ ಇದರ ಗಾಬರಿ ಎಂಬ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದರು. ಇದನ್ನೂ ಓದಿ:‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ವಿವಾದ: ನ್ಯಾಯ ನನ್ನ ಪರ ಇದೆ ಎಂದ ರಮ್ಯಾ
Advertisement
Advertisement
ಆ ನಂತರ ಮತ್ತೊಂದು ರೋಮಾಂಚಕ ಅನುಭವ ಮಿಥುನ್‌ರನ್ನು ಎದುರುಗೊಂಡಿತ್ತು. ಸರಿಸುಮಾರು ಎಂಟು ತಿಂಗಳವರೆಗೆ ಈ ಪಾತ್ರ ಸೇರಿದಂತೆ ನಾನಾ ಪಾತ್ರಗಳಿಗೆ ರಿಹರ್ಸಲ್ ನಡೆದಿತ್ತಂತೆ. ಈ ಹಂತದಲ್ಲಿ ನಟನೆಯ ಮತ್ತೊಂದು ಮಜಲನ್ನು ಒಳಗಿಳಿಸಿಕೊಂಡು, ಆ ಪಾತ್ರಕ್ಕೆ ಜೀವ ತುಂಬಿದ ಖುಷಿ ಮಿಥುನ್‌ಗಿದೆ. ಈ ಭಾಗದ ದಟ್ಟ ಕಾಡುಗಳಲ್ಲಿ ಒಂದಿಡೀ ತಂಡದೊಂದಿಗೆ ಭಾಗಿಯಾದ ಅಪರೂಪದ ಅನುಭವವೂ ಮಿಥುನ್ ಪಾಲಿಗೆ ಸಿಕ್ಕಿದೆ. ಒಂದು ಕಾಲದಲ್ಲಿ ನಟನಾಗಬೇಕೆಂಬ ಕನಸು ಕಂಡಿದ್ದ ಮಿಥುನ್ ನಂತರ ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ‘ಅಪಾಯವಿದೆ ಎಚ್ಚರಿಕೆ’ ಚಿತ್ರದ ಮೂಲಕ ಅದು ಕೈಗೂಡಿದೆ.
Advertisement
ಗಾಬರಿ ಎಂಬ ವಿಶಿಷ್ಟ ಪಾತ್ರ ನಟನಾಗಿ ಚಿತ್ರಂಗದಲ್ಲಿ ಮಿಥುನ್ ಪಾಲಿಗೆ ಮೊದಲ ಹೆಜ್ಜೆ. ಒಂದಿಡೀ ಚಿತ್ರವೇ ವಿಶೇಷವಾಗಿ ರೂಪಿಸಲ್ಪಟ್ಟಿರೋದರಿಂದ ಈ ಮೂಲಕ ತನ್ನ ವೃತ್ತಿ ಬದುಕು ಕಳೆಗಟ್ಟಿಕೊಳ್ಳಬಹುದೆಂಬ ನಿರೀಕ್ಷೆ ಮಿಥುನ್ ತೀರ್ಥಹಳ್ಳಿಗಿದೆ. ಆ ಪಾತ್ರವೀಗ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಯಶಸ್ವಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ವಿ.ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣದೊಂದಿಗೆ ಈ ಸಿನಿಮಾ ಮೂಡಿ ಬಂದಿದೆ.