ಮೆಗ್ ಲ್ಯಾನಿಂಗ್ ಫಿಫ್ಟಿ – ಯುಪಿ ವಿರುದ್ಧ ಡೆಲ್ಲಿಗೆ 7 ವಿಕೆಟ್‌ಗಳ ರೋಚಕ ಜಯ

Public TV
1 Min Read
CaptaIn Meg Lanning

ವಡೋದರಾ: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ (UP Warriors) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಗೆದ್ದ ಡೆಲ್ಲಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಯುಪಿ ವಾರಿಯರ್ಸ್ ತಂಡ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ, ಡೆಲ್ಲಿಗೆ 167 ರನ್‌ಗಳ ಟಾರ್ಗೆಟ್ ನೀಡಿತು. ಇದನ್ನೂ ಓದಿ: ಕೊಪ್ಪಳ| ನದಿಯಲ್ಲಿ ಈಜಲು ಹೋಗಿ ಹೈದರಾಬಾದ್‌ನ ವೈದ್ಯೆ ಸಾವು

Delhi Capitals Celebration

ಯುಪಿ ವಾರಿಯರ್ಸ್‌ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ಟೀಂ ಕೇವಲ ಒಂದು ಬಾಲ್ ಬಾಕಿ ಇರುವಾಗಲೇ ಗುರಿ ತಲುಪಿತು. ತಂಡದ ನಾಯಕಿ ಮೆಗ್ ಲ್ಯಾನಿಂಗ್ 12 ಫೋರ್ ಬಾರಿಸುವ ಮೂಲಕ 49 ಬಾಲ್‌ಗೆ 69 ರನ್ ಗಳಿಸಿದರು. ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ 42 ಬಾಲ್‌ಗೆ 65 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಸದರ್ಲ್ಯಾಂಡ್ 35 ಎಸೆತಕ್ಕೆ 42 ರನ್ ಬಾರಿಸಿದರೆ, ಕಾಪ್ 17 ಬಾಲ್‌ಗೆ 29 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ

UP VS DELHI CAPITALS WPL

ಮೊದಲು ಬ್ಯಾಟಿಂಗ್ ಮಾಡಿದ ಯುಪಿ ತಂಡದ ಕಿರಣ್ ನವ್ಗಿರೆ 6 ಫೋರ್ ಹಾಗೂ 3 ಸಿಕ್ಸ್ ಬಾರಿಸಿ 27 ಎಸೆತಕ್ಕೆ 51 ರನ್ ಗಳಿಸಿ ಗಮನ ಸೆಳೆದಿದ್ದರು. ದಿನೇಶ್ ವೃಂದ 16 ರನ್ ಕಲೆ ಹಾಕಿದರೆ, ನಾಯಕಿ ದೀಪ್ತಿ ಶರ್ಮಾ ಕೇವಲ 7 ರನ್ ಗಳಿಸಿ ಪೆವಿಲಿಯನ್ ಪೆರೇಡ್ ನಡೆಸಿ ನಿರಾಸೆ ಮೂಡಿಸಿದರು. ಶ್ವೇತಾ ಸೆಹ್ರಾವತ್ 37 ಹಾಗೂ ಚಿನೆಲ್ಲೆ ಹೆನ್ರಿ 33 ರನ್ ಗಳಿಸಿ ತಂಡದ ಮೊತ್ತವನ್ನು 166 ಕ್ಕೇರಿಸಿದರು. ಇದನ್ನೂ ಓದಿ: ಹೆತ್ತ ತಾಯಿಯ ಮೇಲೆ ಹಲ್ಲೆ ಆರೋಪ – ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಎಫ್‌ಐಆರ್ ದಾಖಲು

Share This Article