ನಟ ಧ್ರುವ ಸರ್ಜಾ (Dhruva Sarja) ಅವರು ಸರಳ ವ್ಯಕ್ತಿ ಎಂಬುದಕ್ಕೆ ಜಯಮಾಲಾ ಮಗಳ ಆರತಕ್ಷತೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಸೌಂದರ್ಯ ದಂಪತಿಗೆ ಶುಭ ಕೋರಲು ವೇದಿಕೆಗೆ ಆಗಮಿಸುವಾಗ ಧ್ರುವ ಸರ್ಜಾ ತಲೆ ಭಾಗಿ ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ನಟನ ಸಿಂಪ್ಲಿಸಿಟಿ ಕಂಡು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.
ಸೌಂದರ್ಯ ಆರತಕ್ಷತೆ ಸಂಭ್ರಮದಲ್ಲಿ ಪತ್ನಿ ಪ್ರೇರಣಾ ಜೊತೆ ಆಗಮಿಸಿದ ಧ್ರುವ ಸರ್ಜಾ ವೇದಿಕೆಯ ಬಳಿ ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟಿದ್ದಾರೆ. ಸ್ಟಾರ್ ನಟ ಆಗಿದ್ರೂ ಸರಳತೆ ಮೆರೆದಿರುವ ಧ್ರುವ ಸರ್ಜಾ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಧ್ರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಕ್ರೇಜಿ ಕ್ವೀನ್ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್
ನಿನ್ನೆ (ಫೆ.8) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಅಂಬಿಕಾ, ಶುಭ ಪೂಂಜಾ, ರಾಧಿಕಾ ಕುಮಾರಸ್ವಾಮಿ, ಗಿರಿಜಾ ಲೋಕೇಶ್, ಸುಧಾರಾಣಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.
View this post on Instagram
ಇನ್ನೂ ‘ಕೆಡಿ’ ಸಿನಿಮಾದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.