‘ಬಿಗ್ ಬಾಸ್ 11’ರ ವಿನ್ನರ್ (Bigg Boss Kannada 11) ಹನುಮಂತ (Hanumantha) ರಿಯಾಲಿಟಿ ಶೋ ಮುಗಿದ ಬಳಿಕ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ, ಬಿಗ್ ಬಾಸ್‌ನಲ್ಲಿ 50 ಲಕ್ಷ ರೂ. ಗೆದ್ದ ಹಣವನ್ನು ಏನು ಮಾಡಿದ್ರಿ? ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅಚ್ಚರಿ ಉತ್ತರ ನೀಡಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹನುಮಂತ ಅತಿಥಿಯಾಗಿ ಆಗಮಿಸಿದ್ದರು. ನೆರೆದಿದ್ದ ಅಭಿಮಾನಿಗಳ ಮುಂದೆ ತಮ್ಮ ಶೈಲಿಯಲ್ಲಿ ‘ಕಪ್ ಗೆದ್ದೇನಬೇ ಅವ್ವ’ ಅಂತ ಹನುಮಂತ ಡೈಲಾಗ್ ಹೊಡೆದಿದ್ದಾರೆ. 5 ಕೋಟಿ ಮತ ಹಾಕಿ ನನ್ನ ಗೆಲ್ಲಿಸಿದಕ್ಕೆ ಹನುಮಂತ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಸ್ನೇಹಿತೆಯ ಅರಿಶಿನ ಶಾಸ್ತ್ರದಲ್ಲಿ ‘ಬಿಗ್ ಬಾಸ್’ ಮೋಕ್ಷಿತಾ ಮಿಂಚಿಂಗ್
ನನಗೆ 5 ಕೋಟಿ ವೋಟಿಂಗ್ ಬಂದಿದೆ ಅಂತ ನನಗೆ ಗೊತ್ತಿರಲಿಲ್ಲ. ಆದರೆ ಸುದೀಪ್ ಸರ್ ಕೈ ಎತ್ತಿದಾಗಲೇ ನನಗೆ ತಿಳಿದಿದ್ದು ಎಂದಿದ್ದಾರೆ. ನಿಮ್ಮೆಲ್ಲರ ಪ್ರೀತಿ ಆರ್ಶೀವಾದ ಹೀಗೆ ಇರಲಿ, ಹೀಗೆ ನನ್ನಾ ಪ್ರೋತ್ಸಾಹಿಸಿ ಬೆಂಬಲಿಸಿ ಎಂದಿದ್ದಾರೆ. ಈ ವೇಳೆ, ಗೆದ್ದಿರೋ ಹಣ ಏನ್ಮಾಡ್ರಿ? ಎಂದು ಅಭಿಮಾನಿಯೊಬ್ಬ ಕೇಳಲಾದ ಪ್ರಶ್ನೆಗೆ ಬಿಗ್ ಬಾಸ್‌ನಿಂದ 50 ಲಕ್ಷ ರೂ. ಇನ್ನೂ ಬಂದಿಲ್ಲ. ಬರೋಕೆ ಸ್ವಲ್ಪ ತಡವಾಗುತ್ತದೆ. ಬಂದ್ಮೇಲೆ ಹೇಳ್ತೀನಿ ಅಣ್ಣ ಮನೆ ಕಡೆ ಬರಬಹುದು ಎಂದು ತಮಾಷೆಯಾಗಿ ಹನುಮಂತ ಉತ್ತರಿಸಿದ್ದಾರೆ.
ಇನ್ನೂ ಬಿಗ್ ಬಾಸ್ ಶೋ ಮುಗಿದ ಮೇಲೆ ಪ್ರಸ್ತುತ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿದ್ದಾರೆ ಹನುಮಂತ. ಇವರೊಂದಿಗೆ ದೋಸ್ತ್ ಧನರಾಜ್ ಆಚಾರ್, ಐಶ್ವರ್ಯಾ, ಶೋಭಾ ಶೆಟ್ಟಿ, ರಜತ್, ಚೈತ್ರಾ ಕುಂದಾಪುರ ಕೂಡ ಇದ್ದಾರೆ.