ಚಾರ್ಮಾಡಿ ಘಾಟಿಯಲ್ಲಿ ಲಾರಿ ಅಡ್ಡಗಟ್ಟಿ 1.61 ಲಕ್ಷ ದೋಚಿದ ಗ್ಯಾಂಗ್!

Public TV
1 Min Read
gang robs 1 61 lakhs rs from lorry driver at charmadi ghat

ಚಿಕ್ಕಮಗಳೂರು: ಮೀನು ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ದೋಚಿದ ಪ್ರಕರಣ ಮೂಡಿಗೆರೆಯ (Mudigere) ಚಾರ್ಮಾಡಿ ಘಾಟಿಯಲ್ಲಿ (Charmadi Ghat) ನಡೆದಿದೆ.

ಎರಡು ಬೈಕ್‍ನಲ್ಲಿ ಬಂದ ನಾಲ್ವರು ಅಪರಿಚಿತರು ಲಾರಿಯನ್ನು ಅಡ್ಡಗಟ್ಟಿದ್ದಾರೆ. ಬಳಿಕ ಗಾಜನ್ನು ಒಡೆದು ಚಾಲಕ ಸಲಾಂ ಬಣಕಲ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಬಳಿ ಇದ್ದ 1 ಲಕ್ಷದ 61 ಸಾವಿರ ರೂ. ಹಣವನ್ನು ದೋಚಿದ್ದಾರೆ. ಇದನ್ನೂ ಓದಿ: ಶೃಂಗೇರಿ ಅರಣ್ಯದಲ್ಲಿ ಹೂತಿಟ್ಟಿದ್ದ ಬಂದೂಕು, ಸಜೀವ ಗುಂಡುಗಳು ಪತ್ತೆ!

ಈ ಸಂಬಂಧ ಲಾರಿ ಚಾಲಕ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೂ ಪೊಲೀಸ್ ಬೀಟ್ ಹೆಚ್ಚಿಸಬೇಕೆಂದು ಸ್ಥಳಿಯರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನ | ಹೈವೇಯಲ್ಲಿ ಟೈರ್ ಸ್ಫೋಟ – ವ್ಯಾನ್‌ಗೆ ಬಸ್ ಡಿಕ್ಕಿಯಾಗಿ 8 ಮಂದಿ ದುರ್ಮರಣ

Share This Article