ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೂ ನೋಟಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಗೀತಾ ಮಹದೇವಪ್ರಸಾದ್ ಅವರಿಗೆ 90,258 ಮತಗಳು ಬಿದ್ದರೆ, ಬಿಜೆಪಿ ನಿರಂಜನ್ ಕುಮಾರ್‍ಗೆ 79,382 ಮತಗಳು ಬಿದ್ದಿವೆ. ಆದರೆ 1596 ಮಂದಿ ನೋಟಾ ಒತ್ತಿದ್ದಾರೆ.
ಏಪ್ರಿಲ್ 9ರಂದು ನಡೆದ ಚುನಾವಣೆಯಲ್ಲಿ 2,00,82 ಮತದಾರರ ಪೈಕಿ 1,74,955 ಮಂದಿ ಮತದಾನ ಮಾಡಿದ್ದರು.
ಯಾರಿಗೆ ಎಷ್ಟು ಮತ?
ಕಾಂಗ್ರೆಸ್‍ನ ಗೀತಾ ಮೋಹನ್ ಕುಮಾರ್ – 90,260(ಶೇ.51.59)
ಬಿಜೆಪಿಯ ನಿರಂಜನ್ ಕುಮಾರ್ – 79,383(ಶೇ.45.37)
ಶಿವರಾಜು ಎಂ. ರಿಪಬ್ಲಿಕನ್ ಪಾರ್ಟಿ – 1,512(ಶೇ.86)
ಪಕ್ಷೇತರ ಅಭ್ಯರ್ಥಿ ಕೆ. ಸೋಮಶೇಖರ -901(ಶೇ0.51)
ಭಾರತೀಯ ಡಾ.ಬಿಆರ್.ಅಂಬೇಡ್ಕರ್ ಜನತಾ ಪಾರ್ಟಿ -503(ಶೇ.0.29)
ಪಕ್ಷೇತರ ಅಭ್ಯರ್ಥಿ ಶಿವರಾಮು – 470(ಶೇ. 0.27)
ಪಕ್ಷೇತರ ಅಭ್ಯರ್ಥಿ ಮಹಾದೇವಪ್ರಸಾದ್ ಬಿ – 330(ಶೇ.0.19)
ನೋಟಾ -1596( ಶೇ.0.91)
2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮಹದೇವಪ್ರಸಾದ್ 73,723(ಶೇ.45.4) ಮತಗಳನ್ನು ಪಡೆದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ನಿರಂಜನ್ ಕುಮಾರ್‍ಗೆ 66,048(ಶೇ.40.7) ಮತಗಳು ಬಿದ್ದಿತ್ತು. ಬಿಎಸ್‍ಪಿಯಿಂದ ಸ್ಪರ್ಧಿಸಿದ್ದ ನಾಗೇಂದ್ರ ಅವರಿಗೆ 6,052(ಶೇ.3.7) ಮತಗಳು ಬಿದ್ದಿತ್ತು.