ಕೇಂದ್ರದಿಂದ ಬೋಗಸ್ ಬಜೆಟ್, ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ: ಡಿಕೆ ಸುರೇಶ್

Public TV
2 Min Read
DK Suresh

ರಾಮನಗರ: ಇದು ಬೋಗಸ್ ಬಂಡಲ್ ಬಜೆಟ್. ಬಿಹಾರಕ್ಕೆ (Bihar) ಬಂಪರ್ ಕೊಟ್ಟು ಕರ್ನಾಟಕಕ್ಕೆ (Karnataka) ಬಂಡಲ್ ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಬಹುಶಃ ಬೇರೆಬೇರೆ ರೀತಿ ಕೂಗೂ ಏಳುತ್ತಾ ಇರುತ್ತದೆ. ಆಮೇಲೆ ತಡೆಯೋದಕ್ಕೆ ನಿಮಗೆ ಕಷ್ಟ ಆಗುತ್ತದೆ. ಬಿಜೆಪಿಯವರಿಗೆ (BJP) ಚುನಾವಣಾ ದೃಷ್ಟಿ ಅಷ್ಟೇ. ಅವರಿಗೆ ಅಭಿವೃದ್ಧಿ ಮುಖ್ಯ ವಿಚಾರ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?

Union budget niramala sitharaman

ಮಧ್ಯಮ ವರ್ಗಕ್ಕೆ ಒಂದಿಷ್ಟು ತೆರಿಗೆ ವಿನಾಯಿತಿ ನೀಡಿ ಉಳಿದಂತವರಿಗೆ ರೈತರು, ಮಹಿಳೆಯರು ಯುವಕರಿಗೆ, ದಲಿತರ ಹೆಸರು ಹೇಳಿದ್ದಾರೆ. ನೊಂದ ಜನರಿಗೆ ಯಾವ ರೀತಿ ಯೋಜನೆ ಮಾಡುತ್ತೇವೆ ಎಂದು ಹೇಳಿಲ್ಲ. ಜೊತೆಗೆ ಕರ್ನಾಟಕದ 5 ಲಕ್ಷ ಕೋಟಿ ತೆರಿಗೆ ಹಣ ಕೆಂದ್ರದ ಖಾತೆಗೆ ಹೋಗುತ್ತಿದೆ. ಇಷ್ಟು ಹಣ ಕೊಟ್ಟರೂ ರಾಜ್ಯದ ಯಾವುದೇ ಯೋಜನೆಗೆ ಅನುಮೋದನೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸ್ನೇಹಿತನಿಗೆ ಸಾಲ ಕೊಡಿಸಿದ್ದ ತಪ್ಪಿಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ. ಇದು ರಾಜಕೀಯ ಹೇಳಿಕೆ ಅಲ್ಲ. ಕನ್ನಡಿಗರು ಮಲಗಿದರೆ ನಮ್ಮನ್ನು ಮುಗಿಸುತ್ತಾರೆ. ಕನ್ನಡಿಗರೇ ದಯವಿಟ್ಟು ಎದ್ದೇಳಿ. ಕರ್ನಾಟಕದ ನಿಮ್ಮ ಮಕ್ಕಳನ್ನು ಬೇರೆಯವರು ಆಳುವ ಸ್ಥಿತಿ, ಬೇರೆಯವರ ಹತ್ರ ಕೂಲಿ ಮಾಡುವ ಪರಿಸ್ಥಿತಿ ಬರುತ್ತದೆ. ತಕ್ಷಣ ಎದ್ದು ಹೋರಾಟ ಮಾಡಿ. ರಾಜ್ಯದ ಏಳೂವರೆ ಕೋಟಿ ಕನ್ನಡಿಗರಿಗೆ ನಾನು ಕರೆ ಕೊಡುತ್ತಿದ್ದೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪತ್ನಿಯ ಖಾಸಗಿ ಫೋಟೋ, ವಿಡಿಯೋ ವೈರಲ್‌ – ಪತಿ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತ್ನಿ

ರಾಜ್ಯ ಯಾವ ಮಂತ್ರಿಗಳು ನನ್ನನ್ನು ಸಂಪರ್ಕ ಮಾಡಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಜಿ ಸಿಎಂ. ಯಾರು ಹೇಳಲಿ, ಬಿಡಲಿ ಅವರ ಮೇಲೆ ಜವಾಬ್ದಾರಿ ಇದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಪ್ರತಿ ವಿಚಾರ ಅವರಿಗೆ ಗೊತ್ತಿದೆ. ಕರ್ನಾಟಕದ ಗೌರವ, ಜನರ ರಕ್ಷಣೆ, ಯೋಜನೆ ಬಗ್ಗೆ ಒತ್ತಾಯ ಮಾಡೋದು ಅವರ ಜವಾಬ್ದಾರಿ. ಅವರನ್ನು ಕೇಳಬೇಕು, ಅರ್ಜಿ ಕೊಡಬೇಕು ಎಂದೇನಿಲ್ಲ. ಅದು ನಿಮ್ಮ ಜವಾಬ್ದಾರಿ. ದಯವಿಟ್ಟು ಕನ್ನಡಿಗರಿಗೆ ಅನ್ಯಾಯ ಮಾಡಬೇಡಿ. ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ. ರಾಜಕೀಯವನ್ನು ಚುನಾವಣೆಯಲ್ಲಿ ಮಾಡೋಣ. ಆದರೆ ಕರ್ನಾಟಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

Share This Article