ಆನೇಕಲ್: ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಸ್ವಪ್ರೇರಿತವಾಗಿ ಒಳಗಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ನಡೆದಿದೆ.
ಮೃತ ವ್ಯಕ್ತಿಯನ್ನು ಕಲಬುರಗಿ (Kalaburagi) ಮೂಲದ ನಾಗೇಶ್ (33) ಎಂದು ಗುರುತಿಸಲಾಗಿದ್ದು, ತಮ್ಮ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು.ಇದನ್ನೂ ಓದಿ: Budget 2025: ಮಧ್ಯಮ ವರ್ಗಕ್ಕೆ ಬಂಪರ್; 12 ಲಕ್ಷದವರೆಗೆ ಆದಾಯಕ್ಕೆ ತೆರಿಗೆ ಕಟ್ಟುವಂತಿಲ್ಲ
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಮೆಡಿಸನ್ಸ್ ಕಂಪನಿಯೊಂದಕ್ಕೆ ಆ್ಯಪ್ ಮೂಲಕ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಲು ನೋಂದಣಿ ಮಾಡಿಕೊಂಡಿದ್ದರು. ಕಳೆದ ಡಿಸೆಂಬರ್ 2ನೇ ವಾರದಲ್ಲಿ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿದ್ದರು. ಅದಾದ ಎರಡು ದಿನದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ಅದಾದ ಕೆಲವು ದಿನಗಳ ಬಳಿಕ ಸಹೋದರನ ಮನೆಯಲ್ಲಿದ್ದಾಗ ರಕ್ತ ಹೆಪ್ಪುಗಟ್ಟಿ ನಾಗೇಶ್ ಮೃತಪಟ್ಟಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಮೃತ ನಾಗೇಶ್ ಸಹೋದರ ಮಾತನಾಡಿ, ನೋಂದಣಿ ವೇಳೆ ಸಾವನ್ನ ಹೊರತುಪಡಿಸಿ ಸೈಡ್ ಎಫೆಕ್ಟ್ ಬಗ್ಗೆ ತಿಳಿದುಕೊಂಡು ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ ಮೆಡಿಸಿನ್ಸ್ ಪ್ರಯೋಗದಿಂದಲೇ ಸಾವು ಎಂದು ಆರೋಪಿಸಿದ್ದಾರೆ.
ಈ ಕುರಿತು ನಾಗೇಶ್ ಸಹೋದರ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಾವಿನ ಬಗ್ಗೆ ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಕಂಪನಿಯವರನ್ನು ಕರೆಯಿಸಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಮರಣೋತ್ತರ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವು: ಕಾಶಿಯಲ್ಲಿ ಪವಿತ್ರಾ ಗೌಡ