ಮಹಾ ಕುಂಭಮೇಳದಲ್ಲಿ ನಡೆಯುವ ಅಮೃತ ಸ್ನಾನದ ವಿಶೇಷತೆ, ಹಿನ್ನೆಲೆ ಏನು?

Public TV
3 Min Read
Amirt Snan Maha Kumbh Mela

ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ (Prayag Raj) ಮಹಾಕುಂಭವನ್ನು (Maha Kumbh Mela) ಆಯೋಜಿಸಲಾಗುತ್ತದೆ. ಆದರೆ ಈ ಬಾರಿಯ ಮಹಾಕುಂಭಮೇಳ ಬಹಳ ವಿಶೇಷವಾಗಿದ್ದು, 144 ವರ್ಷಗಳ ಬಳಿಕ ಈ ಕುಂಭಮೇಳ ನಡೆಯುತ್ತಿದೆ.

ಈ ಬಾರಿ ಪ್ರಯಾಗರಾಜ್‌ದಲ್ಲಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಆಗಮಿಸುತ್ತಿದ್ದಾರೆ. ಮಹಾಕುಂಭಮೇಳ ಕೇವಲ ಉತ್ಸವ ಮಾತ್ರವಲ್ಲ, ಸಾವಿರಾರು ವರ್ಷಗಳ ಐತಿಹ್ಯ, ಪುರಾತನ ಇತಿಹಾಸ ಹೊಂದಿರುವ ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಈ ಉತ್ಸವವು ಪ್ರಾಚೀನ ಹಿಂದೂ ಪುರಾಣ ಮತ್ತು ಭಾರತದ ಶ್ರೀಮಂತ ಧಾರ್ಮಿಕ ಪರಂಪರೆಯ ಸಾಕ್ಷಿಯಾಗಿದೆ.

Maha Kumbh

ಫೆಬ್ರವರಿ 26ರಮಹಾ ಶಿವರಾತ್ರಿವರೆಗೂ ನಡೆಯಿರುವ ಮಹಾಕುಂಭ ಮೇಳದ ಒಟ್ಟು 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಇನ್ನೂ ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯುತ್ತಿದ್ದು, ಕೆಲವು ಪ್ರಮುಖ ದಿನಗಳಲ್ಲಿ ಪವಿತ್ರ ಸ್ನಾನಗಳು ನಡೆಯುತ್ತಿವೆ. ಈಗಾಗಲೇ ಮೂರು ದಿನಗಳ ಪೂರ್ನಗೊಂಡಿದ್ದು, ಇನ್ನೂ ಮೂರು ರೀತಿಯ ಪುಣ್ಯ ಸ್ನಾನಗಳು ಬಾಕಿಯಿವೆ.

ಸಂಗಮದಲ್ಲಿ ಶಾಹಿಸ್ನಾನ:
ಜನವರಿ 13-ಪೌಷ ಪೂರ್ಣಿಮಾ ಸ್ನಾನ (ಉದ್ಘಾಟನಾ ದಿನ)
ಜನವರಿ 15 -ಮಕರ ಸಂಕ್ರಾಂತಿ ಸ್ನಾನ
ಜನವರಿ 29 -ಮೌನಿ ಅಮಾವಾಸ್ಯೆ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
ಫೆಬ್ರವರಿ 3 – ವಸಂತ ಪಂಚಮಿ ಸ್ನಾನ (ರಾಜ ಸ್ನಾನ/ಶಾಹಿ ಸ್ನಾನ)
ಫೆಬ್ರವರಿ 12- ಮಾಘಿ ಪೂರ್ಣಿಮಾ ಸ್ನಾನ
ಫೆಬ್ರವರಿ 26- ಮಹಾ ಶಿವರಾತ್ರಿ ಸ್ನಾನ (ಸಮಾಪ್ತಿಯ ದಿನ)

ಕೊನೆಯ ದಿನ ಫೆ.26 ರಂದು ನಡೆಯಲಿರುವ ಅಮೃತ ಸ್ನಾನದಲ್ಲಿ ಕೋಟ್ಯಂತರ ಜನರು ಭಾಗಿಯಾಗುವ ನೀರಿಕ್ಷೆಯಿದೆ. ಏಕೆಂದರೆ ಇದು ಕುಂಭಮೇಳದ ಕೊನೆಯ ದಿನ ಆಗಿರಲಿದ್ದು, ಜೊತೆಗೆ ಈ ದಿನ ಸ್ನಾನ ಮಾಡುವುದು ವಿಭಿನ್ನ ಹಾಗೂ ವಿಶೇಷವಾಗಿಲಿದೆ. ಹೀಗಾಗಿ ಹೆಚ್ಚಿನ ಜನ ಈ ದಿನ ಅಮೃತ ಸ್ನಾನದಲ್ಲಿ ಭಾಗಿಯಾಗಲಿದ್ದಾರೆ.

Maha Kumbh Mela 2025 3

 

 

ಅಮೃತ ಸ್ನಾನ ಹೆಸರಿಗೆ ಕಾರಣ:
ಮಹಾಕುಂಭ ಮೇಳದ ಇತಿಹಾಸವು ಸಮುದ್ರ ಮಂಥನ ಹಿಂದೂ ಪುರಾಣವನ್ನು ಉಲ್ಲೇಖಿಸುತ್ತದೆ. ಪುರಾಣ ಪ್ರಕಾರ, ಸಮುದ್ರ ಮಾಂಥನ ವೇಳೆ ದೊರೆತ ಅಮೃತವನ್ನು ವಿಷ್ಣು, ಮೋಹಿನಿ ರೂಪತಾಳಿ ಅಸುರರ ಕಣ್ಣು ತಪ್ಪಿಸಿ ಕೊಂಡೊಯ್ಯುವಾಗ ಕುಂಭದಿಂದ ನಾಲ್ಕು ಹನಿಯು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿತು. ಅದೇ ಜಾಗದಲ್ಲಿ ಮೇಳ ಆಚರಿಸಲಾಗುತ್ತದೆ. ಬೇರೊಂದು ಕಥೆ ಪ್ರಕಾರ, ಇಂದ್ರನ ಮಗ ಜಯಂತ ಕುಂಭ ಪಡೆದುಕೊಂಡು ಓಡು­ವಾಗ ರಾಕ್ಷ­ಸ­ರರು ಬೆನ್ನಟ್ಟಿರುತ್ತಾರೆ. ಜಯಂತನ ಸುರಕ್ಷೆಗೆ ಸೂರ್ಯ, ಚಂದ್ರ, ಶನಿ, ಬೃಹಸ್ಪತಿ ಗ್ರಹ ನಿಲ್ಲುತ್ತಾರೆ. 12 ದಿನ ಓಡುತ್ತಲೇ ಇದ್ದ ಜಯಂತ ಈ ನಡುವೆ 4 ಸ್ಥಳಗಳಲ್ಲಿ ಕುಂಭ ಕೆಳ ಗಿಟ್ಟಿದ್ದನಂತೆ. ಆ 4 ಸ್ಥಳಗಳಲ್ಲೇ ಗ್ರಹಗಳು ವಿಶಿಷ್ಟ ರಾಶಿಗಳಲ್ಲಿ ನಿಂತು ಕುಂಭ ರಕ್ಷಿಸಿದ್ದರಂತೆ ಆ ಸ್ಥಳಗಳಲ್ಲಿ ಇದೀಗ ಕುಂಭಮೇಳ ನಡೆಯುತ್ತದೆ. ಹೀಗೆ ಈ ನಾಲ್ಕು ಸ್ಥಳಗಳು ಪವಿತ್ರ ತೀರ್ಥಸ್ಥಳಗಳಾದವು. ಈ ತೀರ್ಥಸ್ಥಳಗಳ ಮೂಲಕ ಹರಿಯುವ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ. ಹೀಗಾಗಿ ಅಮೃತ ಸ್ನಾನವೆಂದು ಕರೆಯಲಾಗುತ್ತದೆ ಎಂದು ನಂಬಲಾಗಿದೆ.

ಮಹಾ ಕುಂಭ ಮೇಳವು ಮುಖ್ಯವಾಗಿ ಈ ಪವಿತ್ರ ಸಂಗಮದಲ್ಲಿ ಸ್ನಾನ ಮಾಡುವ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಪ್ರತಿ ಸ್ನಾನವು ಪಾಪಗಳನ್ನು ಕಳೆಯುವುದರ ಜೊತೆಗೆ ಮೋಕ್ಷ ನೀಡುತ್ತದೆ ಎಂಬ ನಂಬಿಕೆಯಿದೆ. ವಿಮೋಚನೆಗಾಗಿ ಪವಿತ್ರ ಸ್ನಾನದಲ್ಲಿ ತೊಡಗುವುದು ಮುಖ್ಯ ಎಂದು ಜನರು ನಂಬುತ್ತಾರೆ. ಅಮೃತ ಸ್ನಾನವನ್ನು ಹಿಂದೆ ಶಾಹಿ ಸ್ನಾನ ಎಂದು ಕರೆಯಲಾಗುತ್ತಿತ್ತು. ಎಂದರೆ `ಮಕರಂದ ಸ್ನಾನ’. ಕುಂಭಮೇಳದ ಸಮಯದಲ್ಲಿ ಭಕ್ತರು ಪವಿತ್ರ ನೀರಿನಲ್ಲಿ ಮುಳುಗುವ ಆಚರಣೆಯಾಗಿದೆ.

Maha Kumbh Mela 1

ಜುನಾ ಅಖಾಡದ ಪೀಠಾಧೀಶ್ವರ ಆಚಾರ್ಯ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜರ ಪ್ರಕಾರ, ಗುರುವು ವೃಷಭ ರಾಶಿಯನ್ನು ಪ್ರವೇಶಿಸಿದಾಗ ಅಮೃತ ಸ್ನಾನ ಸಂಭವಿಸುತ್ತದೆ ಮತ್ತು ಸೂರ್ಯ ಮತ್ತು ಚಂದ್ರರು ಮಕರ ರಾಶಿಯಲ್ಲಿ ಒಟ್ಟುಗೂಡುತ್ತಾರೆ. ಇದನ್ನು `ಅಮೃತ್ ಯೋಗ’ ಎಂದು ಕರೆಯುತ್ತಾರೆ.
ಇದು 12 ವರ್ಷಗಳಿಗೊಮ್ಮೆ ಮಾತ್ರ ಸಂಭವಿಸುತ್ತದೆ.

ಅಮೃತ ಸ್ನಾನವು ಹಿಂದೂಗಳಿಗೆ ಮುಖ್ಯವಾಗಿದೆ. ಯಾಕೆಂದರೆ ಮಕರ ಸಂಕ್ರಾಂತಿ ಯ ಬಳಿಕ ಸೂರ್ಯ ಉತ್ತರಕ್ಕೆ ಚಲಿಸುತ್ತಾನೆ. ಇದನ್ನು ಉತ್ತರಾಯಣ ಎಂದು ಕರೆಯುತ್ತಾರೆ. ಹೀಗಾಗಿ ಉತ್ತರಾಯಣದಲ್ಲಿ ಪವಿತ್ರ ಸ್ನಾನದಲ್ಲಿ ತೊಡಗುವುದರಿಂದ ಒಳ್ಳೆಯದಾಗುತ್ತದೆ ಎಂದು ನಂಬಲಾಗುತ್ತದೆ. ಪ್ರತಿಯೊಂದು ಸ್ನಾನಕ್ಕೂ ಧಾರ್ಮಿಕ ನಿಯಮಗಳಿದ್ದು, ಫೆಬ್ರವರಿ 26ರಂದು ನಡೆಯುವ ಅಮೃತ ಸ್ನಾನ ಪವಿತ್ರ ಸ್ನಾನಗಳ ಕೊನೆಯ ದಿನವಾಗಿದೆ. ಮಹಾಶಿವರಾತ್ರಿಯನ್ನು ಶಿವನ ಮಹಾನ್ ರಾತ್ರಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿನ ಸ್ನಾನದಲ್ಲಿ ತೊಡಗುವುದರಿಂದ ಶಿವನ ಶಕ್ತಿ ದೊರೆಯುತ್ತದೆ. ಜೀವನದಿಂದ ಎಲ್ಲಾ ರೀತಿಯ ಅಜ್ಞಾನಗಳು ದೂರವಾಗುತ್ತದೆ.

Share This Article