ಭಾರತೀಯರ ಕಾನೂನು ಬದ್ಧ ವಾಪಸಾತಿಗೆ ದೆಹಲಿ ಮುಕ್ತ – ಜೈಶಂಕರ್‌

Public TV
1 Min Read
jaishankar 1

ವಾಷಿಂಗ್ಟನ್‌: ಅಮೆರಿಕ (USA) ಸೇರಿದಂತೆ ವಿದೇಶಗಳಲ್ಲಿ ಕಾನೂನು ಬಾಹಿರವಾಗಿ ವಾಸಿಸುತ್ತಿರುವ ಭಾರತೀಯರ ಕಾನೂನು ಬದ್ಧ ವಾಪಸಾತಿಗೆ ನವದೆಹಲಿ ಮುಕ್ತವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (S Jaishankar) ಹೇಳಿದ್ದಾರೆ.

Donald Trump 2

ಈ ಕುರಿತು ವಾಷಿಂಗ್ಟನ್‌ (Washington) ಡಿಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜೈಶಂಕರ್‌, ಕಾನೂನು ಬಾಹಿರವಾಗಿ ಯಾರಾದ್ರೂ ಇದ್ದರೆ, ಅವರು ನಮ್ಮ ದೇಶದ ಪ್ರಜೆಗಳೆಂದು ಖಚಿತವಾಗಿದ್ದರೆ, ಭಾರತಕ್ಕೆ ಮರಳಬಹುದು. ಅದಕ್ಕೆ ದೆಹಲಿ ಮುಕ್ತವಾಗಿರುತ್ತದೆ. ಈ ಬಗ್ಗೆ ಭಾರತದ ನಿಲುವು ಸ್ಪಷ್ಟ ಎಂದಿದ್ದಾರೆ. ಈ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧವನ್ನು ಕೊನೆಗೊಳಿಸದಿದ್ದರೆ ಮತ್ತಷ್ಟು ನಿರ್ಬಂಧ, ಸುಂಕ – ಪುಟಿನ್‌ಗೆ ಟ್ರಂಪ್‌ ಬೆದರಿಕೆ

ಭಾರತವು ತನ್ನ ದೇಶದ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಅವಕಾಶ ಹೊಂದಬೇಕೆಂದು ಬಯಸುತ್ತದೆ. ಅದೇ ಸಮಯದಲ್ಲಿ ಅಕ್ರಮ ವಲಸೆಯನ್ನು ದೃಢವಾಗಿ ವಿರೋಧಿಸುತ್ತದೆ. ಏಕೆಂದರೆ ಅಕ್ರಮ ವಲಸೆಯು ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಗಳೂ ಇರುತ್ತವೆ ಎಂದು ಜೈಶಂಕರ್‌ ಹೇಳಿದ್ದಾರೆ. ಇದನ್ನೂ ಓದಿ: ಜನ್ಮತಃ ಪೌರತ್ವ ಕಾಯ್ದೆ ರದ್ದತಿಗೆ ಅಮೆರಿಕದಲ್ಲೇ ಆಕ್ರೋಶ – 18,000 ಭಾರತೀಯರು ಗಡಿಪಾರಾಗ್ತಾರಾ?

ಸಚಿವ ಜೈಶಂಕರ್‌ ಅವರು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅ ಬಳಿಕ ಮೊದಲ ಕ್ವಾಡ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೌಂಟ್‌ ಎವರೆಸ್ಟ್‌ ಇನ್ನು ಮುಂದೆ ದುಬಾರಿ| ಶುಲ್ಕ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆ? 

Share This Article