ಬಿಗ್ ಬಾಸ್ ನಿರೂಪಣೆಗೆ ಕಿಚ್ಚ ಸುದೀಪ್ (Kiccha Sudeep) ವಿದಾಯ ಘೋಷಿಸಿದ ಬೆನ್ನಲ್ಲೇ ಅಭಿಮಾನಿಗಳು ಬೇಸರ ವ್ಕಕ್ತಪಡಿಸುತ್ತಿದ್ದಾರೆ. ಈ ಕುರಿತು ‘ಬಿಗ್ ಬಾಸ್ ಕನ್ನಡ 11’ರ ರಿಯಾಕ್ಟ್ ಮಾಡಿ, ಸುದೀಪ್ ಇಲ್ಲದೇ ಬಿಗ್ ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.
ಸುದೀಪ್ ಅವರ ಈ ನಿರ್ಧಾರ ಬಿಗ್ ಬಾಸ್ ಕಂಟೆಸ್ಟಂಟ್‌ಗಳಿಗೂ ಬೇಸರ ತಂದಿದೆ. ಸುದೀಪ್ ಇಲ್ಲದೇ ಬಿಗ್‌ಬಾಸ್ ಊಹಿಸಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಈ ಸೀಸನ್‌ನಲ್ಲೇ ಇಲ್ಲ ಎನ್ನಲಾಗಿತ್ತು. ನಮ್ಮ ಅದೃಷ್ಟಕ್ಕೆ ಸುದೀಪ್ ಇದ್ದಾರೆ. ಮುಂದೆ ಸುದೀಪ್ ಸರ್ ನಿರೂಪಣೆ ಇರೋದಿಲ್ಲ ಅಂದ್ರೆ ಮುಂದೆ ಬರುವ ಕಂಟೆಸ್ಟಂಟ್‌ಗಳಿಗೆ ಅದು ದೊಡ್ಡ ನಿರಾಸೆ. ಅವರ ಕೊನೆಯ ಪಂಚಾಯ್ತಿಯಲ್ಲಿ ನಾವಿದ್ವಿ ಅನ್ನೋದೇ ನಮ್ಮ ಸೌಭಾಗ್ಯ ಎಂದಿದ್ದಾರೆ ಧನ್‌ರಾಜ್.
ಇನ್ನೂ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಗಳಿಗೆ ಅವರು ಆಡುತ್ತಿದ್ದ ಮಾತು ಸ್ಫೂರ್ತಿ ಕೊಡುತ್ತಿತ್ತು. ಸುದೀಪ್ ಸರ್ ಬಿಗ್ ಬಾಸ್‌ಗೆ ಬೇಕು ಎಂಬುದು ನಮ್ಮ ಆಸೆ ಎಂದಿದ್ದಾರೆ ಧನರಾಜ್. ಇದನ್ನೂ ಓದಿ:‘ಪುಷ್ಪ 2’ ಸಕ್ಸಸ್ ಬಳಿಕ ಮರಾಠಿ ಕ್ವೀನ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ
ಇನ್ನೂ ಜ.19ರ ಬಿಗ್ ಬಾಸ್ ಕೊನೆಯ ವೀಕೆಂಡ್ ಕಾರ್ಯಕ್ರಮ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಪ್ರತಿಕ್ರಿಯಿಸಿ, ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
‘ಬಿಗ್ ಬಾಸ್’ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.