ಬ್ರಾಹ್ಮಣ ದಂಪತಿ ನಾಲ್ಕು ಮಕ್ಕಳನ್ನು ಹೆತ್ತರೇ 1 ಲಕ್ಷ ಬಹುಮಾನ – ಪರಶುರಾಮ್ ಕಲ್ಯಾಣ್ ಬೋರ್ಡ್ ಘೋಷಣೆ

Public TV
1 Min Read
Pandit Vishnu Rajoria

ಭೋಪಾಲ್‌: ನಾಲ್ಕು ಮಕ್ಕಳನ್ನು ಹೆತ್ತರೇ 1 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಮಧ್ಯಪ್ರದೇಶ (Madhya Pradesh) ಸರ್ಕಾರದ ಅಧೀನದ ಪರಶುರಾಮ್ ಕಲ್ಯಾಣ್ ಬೋರ್ಡ್ (Parshuram Kalyan Board) ಸಂಚಲನಾತ್ಮಕ ಘೋಷಣೆ ಮಾಡಿದೆ.

ತಮ್ಮ ಸಮುದಾಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ ನೀಡಿದೆ. ನಾಲ್ಕು ಮಕ್ಕಳನ್ನು ಹೆರುವ ಬ್ರಾಹ್ಮಣ ದಂಪತಿಗೆ 1 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಪರಶುರಾಮ್ ಕಲ್ಯಾಣ್ ಬೋರ್ಡ್ ಅಧ್ಯಕ್ಷ ಪಂಡಿತ ವಿಷ್ಣು ರಾಜೌರಿಯಾ, ನಾವು ನಮ್ಮ ಕುಟುಂಬಗಳ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸಿದ್ದೇವೆ. ಇತ್ತೀಚಿನ ದಂಪತಿ ಒಂದು ಮಗು ಸಾಕು ಅಂತಿದ್ದಾರೆ. ಆದರೆ ಹಿಂದೂಯೇತರರ ಜನಸಂಖ್ಯೆ ಹೆಚ್ಚಾಗುತ್ತಿದೆ  ಎಂದು ಕಳವಳ ವ್ಯಕ್ತಪಡಿಸಿದರು.


ಭವಿಷ್ಯದ ತಲೆಮಾರುಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಅದಕ್ಕೆ ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದ್ದಾರೆ. 4 ಮಕ್ಕಳನ್ನು ಹೆತ್ತ ದಂಪತಿಗೆ 1 ಲಕ್ಷ ರೂ. ನೀಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.

ತನ್ನ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ರಾಜೋರಿಯಾ (Pandit Vishnu Rajoria) ಅವರು ತಮ್ಮ ಸ್ವಂತ ಸಾಮರ್ಥ್ಯದಲ್ಲಿ ಅಥವಾ ಸಾಮಾಜಿಕ ಬೆಂಬಲದ ಮೂಲಕ ಬಹುಮಾನದ ಹಣವನ್ನು ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಬಿಜೆಪಿ ಸರ್ಕಾರವು ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಭಾನುವಾರದ ಕಾರ್ಯಕ್ರಮದಲ್ಲಿ ಒಟ್ಟು 58 ಜೋಡಿಗಳು ವಿವಾಹ ನಡೆದಿತ್ತು. ಈ ಸಂದರ್ಭದಲ್ಲಿ ನಾಲ್ಕು ಮಕ್ಕಳನ್ನು ಹೊಂದಿರುವ ದಂಪತಿಗೆ 1 ಲಕ್ಷ ಬಹುಮಾನವನ್ನು ನಾನು ಘೋಷಿಸಿದ್ದೆ. 1951ಕ್ಕೆ ಹೋಲಿಸಿದರೆ ದೇಶದಲ್ಲಿ ಬ್ರಾಹ್ಮಣರ ಜನಸಂಖ್ಯೆ ಅರ್ಧದಷ್ಟು ಕುಸಿತವಾಗಿದೆ ಎಂದು ಹೇಳಿದರು.

 

Share This Article