ಧಾರವಾಡ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 14 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ ವೇಳೆ ವೈದ್ಯಲೋಕಕ್ಕೆ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು. 14 ದಿನದ ಈ ಮಗುವಿಗೆ ತೀವ್ರ ಹೊಟ್ಟೆ ನೋವು ಇರುವ ಕಾರಣ, ಮಗುವಿನ ಪೋಷಕರು ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ಮಗುವನ್ನ ತಂದಿದ್ದಾರೆ. ವೈದ್ಯರು ಕೂಡಾ ಮಗುವಿನ ಹೊಟ್ಟೆಯಲ್ಲಿ ಗಂಟು ಇರಬೇಕು ಎಂದು ಶಸ್ತ್ರ ಚಿಕಿತ್ಸೆ ಕೂಡಾ ಮಾಡಿದ್ದಾರೆ. ಆದರೆ ಇದೇ ವೇಳೆ ವೈದ್ಯರಿಗೆ ಕೂಡಾ ಒಂದು ಅಚ್ಚರಿ ಕಾದಿತ್ತು. ಅದೇನಂದ್ರೆ ಈ 14 ದಿನದ ಗಂಡು ಮಗುವಿನ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಇತ್ತು. ವೈದ್ಯರು ಈ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿ ಸದ್ಯ ಭ್ರೂಣವನ್ನ ಹೊರಗೆ ತೆಗೆದಿದ್ದಾರೆ.
ಇನ್ನು ವಿಶ್ವದ 80 ಪ್ರಕರಣಗಳಲ್ಲಿ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆದಿದ್ದು ಈ ಪ್ರಕರಣ ಕೂಡಾ ಸೇರಿಕೊಂಡಿದೆ. ಈ ರೀತಿ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆಯಲು ಕಾರಣ ಕೂಡಾ ಇದೆ. ಅವಳಿ ಮಕ್ಕಳು ಹುಟ್ಟುವ ಸಂದರ್ಭದಲ್ಲಿ ಒಂದೇ ಮಗು ಬೆಳವಣಿಗೆ ಆದಾಗ, ಇನ್ನೊಂದು ಭ್ರೂಣ ಮಗುವಿನ ಹೊಟ್ಟೆ ಸೇರಿ ಈ ರೀತಿ ಆಗುತ್ತೆ ಅನ್ನೊದು ವೈದ್ಯರ ಹೇಳಿಕೆ. ಸದ್ಯ ಎರಡು ತಿಂಗಳ ಭ್ರೂಣವನ್ನ ಈ ಮಗುವಿನ ಹೊಟ್ಟೆಯಿಂದ ಹೊರ ತೆಗೆದು ಮಗುವಿಗೆ ಚಿಕತ್ಸೆ ನೀಡಿ ಮನೆಗೆ ಕಳಿಸಲಾಗಿದೆ.
ಒಟ್ಟಿನಲ್ಲಿ ಇಂಥದೊಂದು ಅಪರೂಪದ ಘಟನೆ ನಡೆದಿದ್ದು, ವೈದ್ಯರಿಗೆ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ. ಧಾರವಾಡದ ಎಸ್‍ಡಿಎಂ ವೈದ್ಯರು ಇದೇ ಮೊದಲ ಬಾರಿಗೆ ಇಂಥದೊಂದು ಪ್ರಕರಣ ನೋಡಿ, ಅದನ್ನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ, ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ. ಆದರೆ ವಿಶ್ವದಲ್ಲೇ ಇದು 80 ನೇ ಪ್ರಕರಣ ಎಂದು ಹೇಳಬಹುದು.