‘ಬಿಗ್ ಬಾಸ್’ (Bigg Boss Kannada 11) ಮನೆಯ ಆಟ ಇನ್ನೇನು 2 ವಾರಗಳಲ್ಲಿ ಕೊನೆಗೊಳ್ಳಲಿದೆ. ಮನೆಯಲ್ಲಿ ಸ್ಪರ್ಧಿಗಳ ಆಟ ರೋಚಕವಾಗಿದೆ. ಹೀಗಿರುವಾಗ ಮನೆಯಲ್ಲಿ ತಮ್ಮ ಜರ್ನಿಗೆ ಯಾರು ಅಡ್ಡಿಯಾಗಿದ್ದಾರೆ ಎಂದು ತಿಳಿಸಬೇಕು ಎಂದು ಸುದೀಪ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದಾರೆ. ಆಗ ನನ್ನ ಆಟಕ್ಕೆ ತ್ರಿವಿಕ್ರಮ್ (Trivikram) ತೊಂದರೆ ಆಗಿದ್ದಾರೆ ಎಂದು ಭವ್ಯಾ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಸರಿಗಮ ವಿಜಯ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
ವಾರಾಂತ್ಯದ ಎಪಿಸೋಡ್‌ನಲ್ಲಿ ಬಣ್ಣದಿಂದಲೇ ಮಾರಿಹಬ್ಬ ಶುರುವಾಗಿದೆ. ಸುದೀಪ್ ಕೊಟ್ಟ ಟಾಸ್ಕ್‌ನಲ್ಲಿ ತ್ರಿವಿಕ್ರಮ್ ನನ್ನ ಆಟಕ್ಕೆ ಅಡ್ಡಿ ಎಂದಿದ್ದಾರೆ. ಅವರು ಬಳಸುವ ತಂತ್ರಗಾರಿಕೆ ಮತ್ತು ಮಾತನಾಡುವ ರೀತಿಯಾಗಿರಲಿ ಅದು ನನ್ನ ಆಟಕ್ಕೂ ತೊಂದರೆ ಆಗಿದೆ ಎಂದು ತ್ರಿವಿಕ್ರಮ್ ವಿರುದ್ಧ ಭವ್ಯಾ ಮಾತನಾಡಿದ್ದಾರೆ. ಸುದೀಪ್ ಎದುರಲ್ಲಿ ಮುಲಾಜಿಲ್ಲದೇ ಕೆಲವು ವಿಚಾರಗಳನ್ನು ಭವ್ಯಾ (Bhavya Gowda) ಹೇಳಿದ್ದಾರೆ. ತ್ರಿವಿಕ್ರಮ್ (Trivikram) ಮುಖಕ್ಕೆ ಬಣ್ಣದ ಬಾಂಬ್ ಸಿಡಿಸುವಂತೆ ಮಾಡಿದ್ದಾರೆ.
ಆಗ ಭವ್ಯಾ ಮಾತು ಕೇಳಿ ತ್ರಿವಿಕ್ರಮ್ ಅವರಿಗೆ ಜ್ಞಾನೋದಯ ಆಗಿದೆ. ಮಾರಿಹಬ್ಬ ಶುರುವಾಗಿದೆ. ಅದರ ಬಣ್ಣ ಈಗ ಕಾಣಿಸುತ್ತಿದೆ ಎಂದು ತ್ರಿವಿಕ್ರಮ್ ಅವರು ಒಪ್ಪಿಕೊಂಡಿದ್ದಾರೆ. ಭವ್ಯಾ ಬಣ್ಣ ಈಗ ಗೊತ್ತಾಯ್ತು ಎಂಬರ್ಥದಲ್ಲಿ ತ್ರಿವಿಕ್ರಮ್ ಹೇಳಿದ್ದಾರೆ.
View this post on Instagram
ಆ ನಂತರ ಗೌತಮಿ, ಉಗ್ರಂ ಮಂಜು, ತ್ರಿವಿಕ್ರಮ್, ಚೈತ್ರಾ ಅವರು ಹನುಮಂತ ಹೆಸರು ಹೇಳಿದ್ದಾರೆ. ಅವರು ನಮ್ಮ ಆಟಕ್ಕೆ ಅಡ್ಡಿ ಎಂದಿದ್ದಾರೆ. ನನ್ನ ಗೆಲವು ಅಂತ ನೋಡಿದಾಗ ಹನುಮಂತ ನನಗೆ ಅಡ್ಡವಾಗಿ ಕಾಣಿಸುತ್ತಿದ್ದಾರೆ ಎಂದಿದ್ದಾರೆ ಗೌತಮಿ. ಬಳಿಕ ಚೈತ್ರಾ ಮಾತನಾಡಿ, ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದು ಆಗಾಗ ಸ್ವಿಚ್ ಆಫ್ ಆಗುತ್ತಿದ್ದೇನೆ ಎಂದು ಹೇಳಿ ಮನೆನೇ ಸ್ವಿಚ್ ಆಫ್ ಮಾಡುತ್ತಿದ್ದಾರೆ ಎಂದು ಹನುಮಂತಗೆ ಕೆಣಕಿದ್ದಾರೆ. ಇತ್ತ ತ್ರಿವಿಕ್ರಮ್ ಅವರು ಹನುಮಂತ ಎಲ್ಲರಿಗೂ ಹಲ್ವಾ ತಿನಿಸುತ್ತಿದ್ದಾರೆ ಎಂದಿದ್ದಾರೆ. ಇದಾದ ನಂತರ ಹನುಮಂತ ಅವರ ಮುಖಕ್ಕೂ ಬಣ್ಣದ ಬಾಂಬ್ ಸಿಡಿಸಿದ್ದಾರೆ.
ಆಗ ನಾನು ಆಟ ಶುರು ಮಾಡಿ ಬಹಳ ದಿನ ಆಗಿದೆ ಸರ್. ಅದು ಇವತ್ತು ಇವರಿಗೆ ಗೊತ್ತಾಗಿದೆ ಎಂದು ಸುದೀಪ್ ಮುಂದೆ ಹನುಮಂತ ಮನೆ ಮಂದಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಮನೆ ಮಂದಿಗೆ ಹನುಮಂತ ಠಕ್ಕರ್ ಕೊಟ್ಟಿದ್ದಾರೆ.