BBK 11: 9 ಸ್ಪರ್ಧಿಗಳ ನಡುವೆ ಪೈಪೋಟಿ- ಟಿಕೆಟ್ ಟು ಫಿನಾಲೆ ಪಾಸ್ ಸಿಗೋದು ಯಾರಿಗೆ?

Public TV
1 Min Read
bigg boss 1 3

‘ಬಿಗ್ ಬಾಸ್’ ಮನೆಯ ಆಟ (Bigg Boss Kannada 11) 100 ದಿನಗಳನ್ನು ಪೂರೈಸಿದೆ. ಇನ್ನೂ 3 ವಾರಗಳ ದೊಡ್ಮನೆ ಆಟ ಇರಲಿದೆ. 9 ಸ್ಪರ್ಧಿಗಳು ದೊಡ್ಮನೆಯಲ್ಲಿ ಉಳಿದುಕೊಂಡಿದ್ದು, ಅಳಿವು ಉಳಿವಿಗಾಗಿ ಜಟಾಪಟಿ ಶುರುವಾಗಿದೆ. ಟಿಕೆಟ್ ಟು ಫಿನಾಲೆ ಪಾಸ್ ಯಾರಾದರೂ ಒಬ್ಬರಿಗೆ ಸಿಗಲಿದೆ. ಈ ಕುರಿತು ಸುದೀಪ್ ವೀಕೆಂಡ್‌ನಲ್ಲಿ ಅಪ್‌ಡೇಟ್ ಕೊಟ್ಟಿದ್ದಾರೆ.

bigg boss 1 4

ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ (Sudeep) ಅವರು ವೇದಿಕೆ ಮೇಲೆ ಸ್ಪರ್ಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಮುಂದಿನ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ. ಗೇಮ್ ಚೇಂಜಿಂಗ್ ವೀಕ್ ಆಗಿದೆ. ಮುಂದಿನ ವಾರ ನಡೆಯುವ ಗೇಮ್‌ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತದೆ. ಅಂದ್ರೆ ಗ್ರ‍್ಯಾಂಡ್ ಫಿನಾಲೆಗೆ ನೇರವಾಗಿ ಸೆಲೆಕ್ಟ್ ಆಗ್ತಾರೆ. ಇಷ್ಟು ವಾರದ ಆಟ ಒಂದು ಲೆಕ್ಕಾವಾದರೆ, ಈಗಿನಿಂದ ಒಂದು ಲೆಕ್ಕಾ ಶುರುವಾಗಿದೆ. ತುಂಬಾ ಚೆನ್ನಾಗಿ ಆಡಿ ಕಪ್ ಹೇಗೆ ಗೆಲ್ಲಬೇಕು ಅಂತ ಯೋಚನೆ ಮಾಡಿ ಅಂತ ಎಲ್ಲಾ ಸ್ಪರ್ಧಿಗಳಿಗೂ ಕಿವಿ ಹಿಂಡಿದ್ದಾರೆ.

SUDEEP

ಆ ಟಿಕೆಟ್ ತೆಗೆದುಕೊಂಡವರು. ಮಿಕ್ಕಿದ ದಿನಗಳು ಆರಾಮ ಆಗಿ ಜೀವನ ಕಳೆಯಬಹುದು. ಪ್ಲ್ಯಾನ್ ಮಾಡಿಕೊಂಡು ಫೈನಲ್ ಹೇಗೆ ಹೊಡಿಬೇಕು ಅಂತ ಯೋಚಿಸಬಹುದು. ಎಲ್ಲರಿಗೂ ಆಲ್ ದಿ ಬೆಸ್ಟ್ ಎಂದು ಸುದೀಪ್ ಹೇಳಿದ್ದಾರೆ.

bigg boss 4

ಇನ್ನೂ ಬಿಗ್ ಬಾಸ್‌ನಲ್ಲೀಗ ಚೈತ್ರಾ, ಹನುಮಂತ, ಧನರಾಜ್ ಆಚಾರ್, ರಜತ್, ಭವ್ಯಾ, ತ್ರಿವಿಕ್ರಮ್, ಮೋಕ್ಷಿತಾ, ಮಂಜು, ಗೌತಮಿ ಇದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ಟು ಫಿನಾಲೆ ಪಾಸ್ ಸಿಗಲಿದೆ. ಹಾಗೂ ಯಾರು ಬಿಗ್ ಬಾಸ್ ವಿನ್ನರ್ ಆಗ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Share This Article