ಅಂತ್ಯಕ್ರಿಯೆ ಸ್ಥಳದಲ್ಲೇ ತಲೆಯೆತ್ತಲಿದೆಯೇ ಸಿಂಗ್‌ ಸ್ಮಾರಕ? – ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಪತ್ರ!

Public TV
3 Min Read
Manmohan Singh 3 2

ನವದೆಹಲಿ: ವಿಶ್ವಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಸ್ಮಾರಕ (Manmohan Singh Memorial) ನಿರ್ಮಾಣಕ್ಕೆ ಜಾಗ ಕೋರಿ, ರಾಷ್ಟ್ರೀಯ ಕಾಂಗ್ರೆಸ್‌ ಪ್ರಧಾನಿಗಳಿಗೆ ಪತ್ರ ಬರೆದಿದೆ. ಅವರ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸ್ಮಾರಕಕ್ಕೆ ಜಾಗ ಕೋರಿ ಪ್ರಧಾನಿ ಮೋದಿ (Narendra Modi) ಅವರಿಗೆ ಬರೆದ ಪತ್ರವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಮನಮೋಹನ್‌ ಸಿಂಗ್‌ ಅವರ ಅಂತಿಮ ವಿಧಿವಿಧಾನಗಳು ಶನಿವಾರ ಬೆಳಗ್ಗೆ ನಡೆಯಲಿದೆ. ಅವರ ಅಂತಿಮ ವಿಶ್ರಾಂತಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕು. ಏಕೆಂದರೆ ಅದು ಭಾರತದ ಮಹಾನ್‌ ಸುಪುತ್ರನ ಸ್ಮಾರಕಕ್ಕೆ ಪವಿತ್ರ ಸ್ಥಳವಾಗಿದೆ. ಅಲ್ಲದೇ ಇದು ರಾಜಕಾರಣಿಗಳು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿ ಅವರ ಸ್ಮಾರಕ ಹೊಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿದೆ ಎಂದು ಖರ್ಗೆ ಮನವಿ ಮಾಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Manmohan Singh 7

ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮನಮೋಹನ್ ಸಿಂಗ್ ಅವರು ತೆಗೆದುಕೊಂಡ ನಿರ್ಧಾರಗಳ ಪ್ರಯೋಜನವನ್ನ ಇಂದು ರಾಷ್ಟ್ರವು ಪಡೆಯುತ್ತಿದೆ. ದೇಶವು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿದ್ದಾಗ ಭಾರತವನ್ನು ಅದರಿಂದ ಹೊರತಂದವರು, ವಿತ್ತ ಸಚಿವರಾಗಿ ಆರ್ಥಿಕ ಸಮೃದ್ಧಿ, ಸ್ಥಿರತೆಯತ್ತ ದೇಶವನ್ನು ಮುನ್ನಡೆಸಿದವರು ಮನಮೋಹನ್‌ ಸಿಂಗ್‌, ತಮ್ಮ ಧೈರ್ಯ, ದೃಢ ಸಂಕಲ್ಪದಿಂದಲೇ ವಿಶ್ವದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಈ ವರ್ಷದ ಆರಂಭದಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು ಎಂದು ಕಾಂಗ್ರೆಸ್‌ ಪತ್ರದಲ್ಲಿ ಸ್ಮರಿಸಿದೆ.

ಆದ್ದರಿಂದ ಮನಮೋಹನ್‌ ಸಿಂಗ್‌ ಅವರ ಅಂತಿಮ ವಿಧಿವಿಧಾನಗಳು ನಡೆಯುವ ಸ್ಥಳದಲ್ಲೇ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್‌ ಮನವಿ ಮಾಡಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಕುನೋ ಪಾರ್ಕ್‌ನ ಚಿರತೆ ಶಿಯೋಪುರ್ ರಸ್ತೆಯಲ್ಲಿ ಪತ್ತೆ – ನಿವಾಸಿಗಳಲ್ಲಿ ಆತಂಕ

narendra modi mallikarjun kharge

ಶನಿವಾರ ನಿಗಮ್‌ ಬೂಧ್‌ ಘಾಟ್‌ನಲ್ಲಿ ಅಂತ್ಯಕ್ರಿಯೆ:
ನಾಳೆ (ಶನಿವಾರ) ಬೆಳಗ್ಗೆ 8 ಗಂಟೆಗೆ ದೆಹಲಿ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನ ರವಾನೆ ಮಾಡಿ ಬೆಳಗ್ಗೆ 9:30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 9:30ರ ಬಳಿಕ ಅಂತಿಮ ಯಾತ್ರೆ ಆರಂಭವಾಗಲಿದ್ದು, ಸುಮಾರು 11:45ಕ್ಕೆ ನಿಗಮ್‌ಬೋಧ್ ಘಾಟ್‌ನಲ್ಲಿ ಸರ್ಕಾರಿ ಮತ್ತು ಸೇನಾಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಸೇನಾಗೌರವಗಳಿಗೆ ಸೇನಾ ಇಲಾಖೆ ಕೂಡ ಸನ್ನದ್ಧವಾಗಿದೆ. 7 ದಿನ ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಇನ್ನು, ಜಾಗತಿಕ ಮಟ್ಟದಲ್ಲೂ ರಾಷ್ಟ್ರಗಳ ಮಧ್ಯೆ ಒಮ್ಮತ ಮೂಡಿಸ್ತಿದ್ದ ಚತುರನಾಗಿದ್ದ ಸಿಂಗ್ ಅಗಲಿಕೆಗೆ ಅಮೆರಿಕ, ರಷ್ಯಾ, ಚೀನಾ, ಪಾಕಿಸ್ತಾನ, ಮಲೇಷಿಯಾ, ಕೆನಡಾ ಕೂಡ ಸಂತಾಪ ಸೂಚಿಸಿವೆ. ಸಿನಿಗಣ್ಯರಾದ ರಜನಿಕಾಂತ್, ಚಿರಂಜೀವಿ, ಕಮಲ್‌ಹಾಸನ್ ಕೂಡ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕರಾವಳಿ ಉತ್ಸವ; 4,500 ರೂ. ಕೊಟ್ರೆ ಹೆಲಿಕಾಪ್ಟರ್‌ನಲ್ಲಿ ಹಾರಾಡೋ ಅವಕಾಶ

Share This Article