Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಕಲಬುರಗಿ ಬಂದ್ – ಪ್ರತಿಭಟನಾಕಾರರಿಂದ ಲಾರಿ, ಕಾರಿನ ಗ್ಲಾಸ್ ಪುಡಿಪುಡಿ

Public TV
Last updated: December 24, 2024 8:37 pm
Public TV
Share
3 Min Read
kalaburagi bandh dalit members protest against Amit Shahs remarks on Ambedkar demand resignation 4
SHARE

– ಅಮಿತ್‌ ಶಾ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
– ಬೆಂಬಲ ಸೂಚಿಸಿದ ಮುಖಂಡನ ಕಾರಿನ ಮೇಲೆ ದಾಳಿ

ಕಲಬುರಗಿ: ಎಲ್ಲಿ ನೋಡಿದರೂ ಅಲ್ಲಿ ಪ್ರತಿಭಟನಾಕಾರರ ಆಕ್ರೋಶ, ನಗರದ ಹಲವು ವೃತ್ತಗಳಲ್ಲಿ ಟಯರ್‌ಗೆ ಬೆಂಕಿ ಹಚ್ಚುವ ಮೂಲಕ ಕೇಂದ್ರ ಗೃಹ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ಬಂದ್‌ನಲ್ಲಿ.

ಮಂಗಳವಾರ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳು ನೀಡಿದ ಕಲಬುರಗಿ ಬಂದ್ (Kalaburagi Bandh) ಬಹುತೇಕ ಯಶಸ್ವಿಯಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರತಿಭಟನಾಕಾರರು, ಭಾರತ ರತ್ನ ಅಂಬೇಡ್ಕರ್ (Ambedkar) ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಲು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ರಾಷ್ಟ್ರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಸಂವಿಧಾನ ರಚನೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯ. ನ್ಯಾಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಅವರ ಹೋರಾಟ ಭಾರತೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಪ್ರತಿಭಟನಾಕಾರರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಸಂವಿಧಾನ ರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳು ನೀಡಿದ ಕಲಬುರಗಿ ಬಂದ್ ಹಿನ್ನೆಲೆಯಲ್ಲಿ ಕಲಬುರಗಿ ನಗರ ಸಂಪೂರ್ಣವಾಗಿ ಸ್ತಬ್ದವಾಗಿತ್ತು. ಯಾವುದೇ ರೀತಿಯ ವಾಹನಗಳ ಸಂಚಾರ ನಡೆಯಲಿಲ್ಲ. ವಾಹನಗಳಿಲ್ಲದೇ ನಗರದ ಹಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು.

kalaburagi bandh dalit members protest against Amit Shahs remarks on Ambedkar demand resignation 2

ಬೈಕ್ ಮೇಲೆ ಹಲ್ಲೆ:
ನಗರದ ಶಹಾಬಜಾರ ಬಡಾವಣೆಯಲ್ಲಿ ಕೆಲವು ಯುವಕರು ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸಿದ್ದಲ್ಲದೇ, ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನನ್ನು ಅಡ್ಡಗಟ್ಟಿ, ಬೈಕ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆಯಿತು.

ಲಾರಿ ಗಾಜು ಪುಡಿ ಪುಡಿ:
ಚಿಂಚೋಳಿ ಕ್ರಾಸ್ ಹತ್ತಿರ ಹಾಗೂ ಬೇಲೂರ್ ಕ್ರಾಸ್ ಹತ್ತಿರ ಬರುತ್ತಿದ್ದ ಲಾರಿಯನ್ನು ತಡೆದು ಕಲಬುರಗಿ ಬಂದ್ ಇದೆ. ಆದರೂ ರಸ್ತೆಗೆ ವಾಹನ ಇಳಿಸಿದ್ದು ಯಾಕೆ ಎಂದು ಆವಾಜ್ ಹಾಕುವ ಮೂಲಕ ಲಾರಿಯ ಗಾಜನ್ನು ಪ್ರತಿಭಟನಾಕಾರರು ಪುಡಿ ಪುಡಿ ಮಾಡಿದಲ್ಲದೇ ಚಾಲಕನ ಮೇಲೂ ಹಲ್ಲೆ ನಡೆಸಿದ ಘಟನೆ ನಡೆಯಿತು. ಇದನ್ನೂ ಓದಿ: ಪೂಂಚ್‌ನಲ್ಲಿ ದುರಂತ – 150 ಅಡಿಯ ಆಳದ ಕಣಿವೆಗೆ ಬಿದ್ದ ಸೇನಾ ವಾಹನ, 5 ಮಂದಿ ಬಲಿ

ಕಲ್ಯಾಣ ಮಂಟಪ ತಲುಪದ ಬೀಗರು
ನಗರದಲ್ಲಿ ಯಾವುದೇ ರೀತಿಯ ಆಟೋ ಸಂಚಾರವಾಗಲಿ ಅಥವಾ ವಾಹನ ಸಂಚಾರವಾಗಲಿ ಇರಲಿಲ್ಲ. ಹೀಗಾಗಿ ಮದುವೆಗೆಂದುಲೂರ್ ಕಡೆಗೆ ಹೊರಟಿದ್ದ ಒಂದು ಕುಟುಂಬದ ಸದಸ್ಯರು ವಾಹನಗಳು, ಆಟೋ ಸಂಚಾರ ಇಲ್ಲದೇ ನಗರದ ಗಂಜ್ ಪ್ರದೇಶದ ರಸ್ತೆಯ ಬದಿಯಲ್ಲೇ ಕಾದು ಕುಳಿತಿರುವ ದೃಶ್ಯ ಕಂಡು ಬಂದಿತು. ಇದನ್ನೂ ಓದಿ: ಪೂಂಚ್‌ನಲ್ಲಿ ದುರಂತ – 150 ಅಡಿಯ ಆಳದ ಕಣಿವೆಗೆ ಬಿದ್ದ ಸೇನಾ ವಾಹನ, 5 ಮಂದಿ ಬಲಿ

 

ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ:
ಜಿಲ್ಲೆಯ ವಿವಿಧ ತಾಲೂಕಿನಿಂದ ಕ್ರೂಸರ್ ವಾಹನಗಳ ಮೂಲಕ ಆಗಮಿಸಿದ ಪ್ರತಿಭಟನಾಕಾರರಿಗೆ ಅಲ್ಲಲ್ಲಿ ಊಟದ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಸವರಾಜ ದಿಗ್ಗಾವಿ ಅವರು ಪಲಾವ್ ಹಾಗೂ ಸಾಂಬಾರ್ ವ್ಯವಸ್ಥೆ ಮಾಡಿದ್ದರು.

ದಕ್ಷಿಣ ಬಂದ್, ಉತ್ತರದಲ್ಲಿ ವ್ಯಾಪಾರ:
ಕಲಬುರಗಿ ಉತ್ತರ ಮತಕ್ಷೇತ್ರದ ರೋಜಾ ಬಿ ಬಡಾವಣೆ, ಕೆ.ಬಿ.ಎನ್ ಮೆಡಿಕಲ್ ಕಾಲೇಜು ಸುತ್ತಮುತ್ತ ಹಾಗೂ ಹಾಗರಗಾ ಕ್ರಾಸ್ ಕಡೆಗೆ ಕೆಲ ಅಂಗಡಿಗಳು ವ್ಯಾಪಾರ ವಹಿವಾಟು ನಡೆಸಿತ್ತು. ರೋಜಾ ಬಿ ಬಡಾವಣೆಯ ತರಕಾರಿ ಮಾರುಕಟ್ಟೆ ಸಂಪೂರ್ಣ ವ್ಯಾಪಾರ ನಡೆಸುವ ಮೂಲಕ ಬಂದ್ ಬೆಂಬಲ ನೀಡಲಿಲ್ಲ.

 

kalaburagi bandh dalit members protest against Amit Shahs remarks on Ambedkar demand resignation 3

ಕಾರಿನ ಗಾಜು ಪುಡಿ:
ಪ್ರತಿಭಟನೆಯಲ್ಲಿ ಭಾಗಿಯಾದಂತಹ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸಂಘ ಪ್ರಧಾನ ಕಾರ್ಯದರ್ಶಿ ಸುನೀಲ್ ಮಾರುತಿ ಮಾನ್ಪಡೆ ಅವರ ಕಾರಿನ ಮೇಲೆಯೇ ಪ್ರತಿಭಟನಾಕಾರರು ದಾಳಿ ನಡೆಸಿ, ಕಾರಿನ ಹಿಂಬದಿಯ ಗಾಜನ್ನು ಪುಡಿ ಪುಡಿ ಮಾಡಿದ ಘಟನೆ ನಡೆದಿದೆ.

ಪ್ರತಿಭಟನೆಯಲ್ಲಿ ವಿಠ್ಠಲ ದೊಡ್ಡಮನಿ, ಸುಭಾಷ ರಾಠೋಡ್, ವಹಾಜ್ ಬಾಬಾ, ಶರಣಕುಮಾರ್ ಮೋದಿ, ಸೋಮಶೇಖರ್ ಹಿರೇಮಠ, ಲಚ್ಚಪ್ಪಾ ಜಮಾದಾರ್, ಭೀಮರಾವ್ ಟಿಟಿ, ಗುರುನಾಥ್ ಪೂಜಾರಿ, ಕೂಡಾ ಅಧ್ಯಕ್ಷ ಮಜರ್ ಆಲಂ ಖಾನ್, ಲಿಂಗರಾಜ ತಾರಫೇಲ್, ಮೀನಾಕ್ಷಿ ಬಾಳ್ಳಿ, ಕೆ ನೀಲಾ, ತಿಪ್ಪಣ್ಣ ಒಡೆಯರ್, ರಾಜೇಶ್ ಗುತ್ತೇದಾರ್, ನಂದುಕುಮಾರ್ ಮಾಲಿಪಾಟೀಲ್, ಸೂರ್ಯಕಾಂತ ನಿಂಬಾಳ್ಕರ್, ಶರಣಬಸಪ್ಪಾ ಸೂರ್ಯವಂಶಿ, ಚಂದು ಜಾಧವ್, ರಾಜಕುಮಾರ್ ಕಪನೂರ್, ಹಣಮಂತ ಯಳಸಂಗಿ,ವಿಶಾಲ ನವರಂಗ, ಸಚಿನ ಶಿರವಾಳ, ಮಲ್ಲಪ್ಪ ಹೊಸಮನಿ, ಅರ್ಜುನ್ ಭದ್ರೆ, ರಘುವೀರ್ ಥಾವಡೆ, ಆನಂದ ವಾರಿಕ್, ಸುನೀಲ್ ಮಾನ್ಪಡೆ, ಸೈಬಣ್ಣಾ ತಳವಾರ್, ಎಬಿ ಹೊಸಮನಿ, ಶ್ಯಾಂ ನಾಟೀಕರ್, ಅಶ್ವಿನಿ ಮದನಕರ್,ರೇಣುಕಾ ಸಿಂಗೆ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

 

TAGGED:AmbedkarcongressKalaburagi Bandhಅಂಬೇಡ್ಕರ್ಅಮಿತ್ ಶಾಕಲಬುರಗಿ ಬಂದ್‌
Share This Article
Facebook Whatsapp Whatsapp Telegram

Cinema Updates

Thug Life Trisha Kamal Haasan
ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್‌ʼ!
5 hours ago
Poonam Pandey
ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು
11 hours ago
prithwi bhat reception
ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್‌ ಅದ್ದೂರಿ ರಿಸೆಪ್ಷನ್‌
14 hours ago
pawan kalyan
ಆಪರೇಷನ್ ಸಿಂಧೂರದ ಬಗ್ಗೆ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ
15 hours ago

You Might Also Like

Jyoti Malhotra
Latest

ಪಹಲ್ಗಾಮ್‌ಗೂ ಭೇಟಿ ನೀಡಿದ್ದಳು ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ!

Public TV
By Public TV
3 hours ago
Kopala Murder
Latest

100 ರೂಪಾಯಿಗೆ ಅಜ್ಜಿಯನ್ನೇ ಕೊಂದ ಮೊಮ್ಮಗ

Public TV
By Public TV
4 hours ago
Accident Hulikal
Crime

ನಿಯಂತ್ರಣ ತಪ್ಪಿ ನದಿಗೆ ಉರುಳಿದ ಲಾರಿ – ಚಾಲಕ ಪಾರು

Public TV
By Public TV
4 hours ago
WEATHER 3
Bengaluru City

ರಾಜ್ಯದಲ್ಲಿ ಭಾರೀ ಮಳೆ – 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಜಾರಿ

Public TV
By Public TV
4 hours ago
Rain
Bengaluru City

ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ವರುಣರಾಯ – ಎಲ್ಲೆಲ್ಲಿ ಏನಾಗಿದೆ?

Public TV
By Public TV
4 hours ago
virat kohli rcb 2025
Bengaluru City

ಮಳೆಯಿಂದ ಪಂದ್ಯ ರದ್ದು, ಕೋಲ್ಕತ್ತಾ ಔಟ್‌ – ಪ್ಲೇ ಆಫ್‌ ಸನಿಹದಲ್ಲಿ ಆರ್‌ಸಿಬಿ

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?