‘ಬಿಗ್ ಬಾಸ್’ (Bigg Boss Kannada 8) ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ದುಬಾರಿ ಕಾರನ್ನು ನಟಿ ಖರೀದಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ದಿವ್ಯಾರವರ ಖುಷಿ ಕಂಡು ಫ್ಯಾನ್ಸ್ ಶುಭಕೋರಿದ್ದಾರೆ.
ಟಾಟಾ ಹ್ಯಾರಿಯರ್ ಕಾರಿನ್ನು ಮನೆಗೆ ತಂದಿದ್ದಾರೆ. ಕಾರು ಖರೀದಿಸುವಾಗ ಕುಟುಂಬಸ್ಥರು, ಅರವಿಂದ್ ಕೆಪಿ ಕೂಡ ನಟಿಯ ಜೊತೆಯಿದ್ದರು. ಇನ್ನೂ ಈ ಕಾರಿನ ಬೆಲೆ 16 ಲಕ್ಷ ರೂ.ಯಿಂದ ಆರಂಭಗೊಂಡು 32 ಲಕ್ಷ ರೂ.ವರೆಗೂ ಇದೆ. ಇದನ್ನೂ ಓದಿ:ವಾರಣಾಸಿ ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಸಾಯಿ ಪಲ್ಲವಿ
View this post on Instagram
ನಟಿ ಹಂಚಿಕೊಂಡಿರುವ ಪೋಸ್ಟ್‌ಗೆ ಅರವಿಂದ್ ಕೆಪಿ (Aravind Kp) ಕೂಡ ಕಾಮೆಂಟ್ ಮಾಡಿ, ಅಭಿನಂದನೆಗಳು.. ನಿನ್ನ ಬಗ್ಗೆ ಹೆಮ್ಮೆಯಿದೆ. ಹೀಗೆ ಮುನ್ನುಗ್ಗು ಎಂದು ಶ್ಲಾಘಿಸಿದ್ದಾರೆ. ಸದ್ಯ ದಿವ್ಯಾ ‘ನಿನಗಾಗಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ರಚನಾ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿವ್ಯಾ ಮತ್ತು ಅರವಿಂದ್ ಪರಿಚಯವಾದರು. ಆ ಸ್ನೇಹವೇ ಪ್ರೀತಿಗೆ ತಿರುಗಿತ್ತು. ಇಬ್ಬರೂ ಅದ್ಯಾವಾಗ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡಲಿದ್ದಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.