ನಟ ಶಿವರಾಜ್‌ಕುಮಾರ್‌ಗೆ ಡಿ.24ರಂದು ಸರ್ಜರಿ ಇರೋ ಹಿನ್ನೆಲೆ ಇಂದು (ಡಿ.18) ಪತ್ನಿಯೊಂದಿಗೆ ಅಮೆರಿಕಗೆ ತೆರಳಲಿದ್ದಾರೆ. ಈ ಕುರಿತು ನಟ ಸುದೀಪ್ ಪಬ್ಲಿಕ್ ಟಿವಿಗೆ ಮಾತನಾಡಿ, ಶಿವಣ್ಣ ಫೈಟರ್ ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ ಎಂದಿದ್ದಾರೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಅಮೆರಿಕಗೆ ಹೊರಡುವ ಮುನ್ನ ಶಿವಣ್ಣರನ್ನು ನೋಡಲು ಬಂದ ಪೂರ್ಣಿಮಾ ಕುಟುಂಬ
ಶಿವಣ್ಣ ಫೈಟರ್, ಅವರು ಯಾವತ್ತೂ ಕುಗಿಲ್ಲ, ಕುಗ್ಗೋದು ಇಲ್ಲ. ಅವರ ಪಕ್ಕದಲ್ಲಿ ದೊಡ್ಡ ಶಕ್ತಿಯಿದೆ ಅವರೇ ಗೀತಾ ಅಕ್ಕ. ಇವರ ಜೊತೆ ದೊಡ್ಡ ಶಕ್ತಿಯಾಗಿ ಕೆ.ಪಿ ಶ್ರೀಕಾಂತ್ ನಿಂತಿದ್ದಾರೆ. ಅವರು ಯಾವತ್ತೂ ಶಿವಣ್ಣರನ್ನು ಬಿಟ್ಟು ಕೊಟ್ಟಿಲ್ಲ. ಇವರೆಲ್ಲರೂ ಜೊತೆಯಾಗಿ ಇರಬೇಕಾದ್ರೆ ಇಲ್ಲಿ ಪಾಸಿಟಿವಿಟಿ ಇದೆ. ಹಾಗಾಗಿ ಶಿವಣ್ಣ ಫೈಟ್ ಮಾಡುತ್ತಾರೆ. ನನಗೆ ಇದರಲ್ಲಿ ಡೌಂಟ್ ಇಲ್ಲ ಎಂದಿದ್ದಾರೆ ಸುದೀಪ್.
ಅಂದಹಾಗೆ, ಇಂದು ಶಿವಣ್ಣ ಮನೆಗೆ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ನಟನನ್ನು ತಬ್ಬಿಕೊಂಡು ಧೈರ್ಯ ತುಂಬಿದ್ದಾರೆ. ನಟನ ಆರೋಗ್ಯದ ಕುರಿತು ಕುಶಲೋಪರಿ ವಿಚಾರಿಸಿದ್ದಾರೆ.