ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ರಜತ್ (Rajath) ಆರ್ಭಟ ಜೋರಾಗಿದೆ. ಸ್ಪರ್ಧಿ ರಜತ್ ಅವರ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಉಗ್ರಂ ಮಂಜು (Ugramm Manju) ಹಾಗೂ ರಜತ್ ನಡುವೆ ಜೋರು ಗಲಾಟೆ ನಡೆದಿದೆ. ಇದನ್ನೂ ಓದಿ:ಆಕೆ ಮುಗ್ಧೆ, ತಪ್ಪು ಮಾಡಿಲ್ಲ: ಪವಿತ್ರಾಗೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಪತಿ ಸಂತಸ
- Advertisement -
‘ಚೆಂಡು ಸಾಗಲಿ ಮುಂದೆ ಹೋಗಲಿ’ ಎನ್ನುವ ಟಾಸ್ಕ್‌ನಲ್ಲಿ ಬಿಗ್ ಬಾಸ್ ಚೈತ್ರಾ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ, ಚೈತ್ರಾ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್ ಬಗ್ಗೆ ಮಂಜು ಕೆಂಡಕಾರಿದ್ದಾರೆ. ಆಗ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.
- Advertisement -
- Advertisement -
ಕಳೆದ ವಾರಾಂತ್ಯ ಧನರಾಜ್ ಜೊತೆಗಿನ ರಜತ್ ಜಗಳದ ವಿಚಾರವಾಗಿ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಜೊತೆಗೆ ಶಿಕ್ಷೆ ನೀಡಿದ್ದರು. ಆದರೂ ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ. ಹಾಗಾದ್ರೆ ಈ ವಾರಾಂತ್ಯವು ಕೂಡ ರಜತ್‌ಗೆ ಸುದೀಪ್ ಬೆಂಡೆತ್ತುತ್ತಾರಾ? ಕಾದುನೋಡಬೇಕಿದೆ.
- Advertisement -
ಇನ್ನೂ ಬಿಗ್ ಬಾಸ್‌ನಿಂದ ಕಳೆದ ವಾರ ಶಿಶಿರ್ ಎಲಿಮಿನೇಟ್ ಆಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕುಟುಂಬದಲ್ಲಿನ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ ಕೂಡ ಮನೆಯಿಂದ ನಿರ್ಗಮಿಸಿದ್ದಾರೆ. ಅಸಲಿಗೆ ಏನಾಗಿದೆ ಎಂಬುದು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.