ಬೆಂಗಳೂರು| ಪರ ಪುರುಷನಿಂದ ಹೆಂಡತಿ, ನಾದಿನಿ ಜೊತೆ ಸಲುಗೆ – ಪ್ರಶ್ನಿಸಿದ್ದಕ್ಕೆ ಕಡಗದಿಂದ ಗುದ್ದಿ ಕೊಲೆ

Public TV
1 Min Read
bengaluru murder case

ಬೆಂಗಳೂರು: ತನ್ನ ಹೆಂಡತಿ ಮತ್ತು ನಾದಿನಿ ಜೊತೆಗೆ ಸಲುಗೆಯಿಂದಿದ್ದ ವ್ಯಕ್ತಿಯನ್ನು ಪ್ರಶ್ನಿಸಿ ಕಡಗದಿಂದ ಗುದ್ದಿಸಿಕೊಂಡು ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಭಿಷೇಕ್‌ ಕೊಲೆಯಾದ ದುರ್ದೈವಿ. ಕಾರ್ತಿಕ್‌ ಕೊಲೆ ಮಾಡಿದಾತ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

crime 1

ಘಟನೆ ಏನು?
ನಿಕಿತಾ ಮತ್ತು ನಿಶ್ಚಿತಾ ಅಕ್ಕ-ತಂಗಿಯರನ್ನು ಅಭಿಷೇಕ್‌ ಮತ್ತು ಅವಿನಾಶ್‌ ಅಣ್ಣ-ತಮ್ಮಂದಿರು ಮದುವೆಯಾಗಿದ್ದರು. ಅಭಿಷೇಕ್‌ ಮತ್ತು ನಿಖಿತಾ ಜೋಡಿಗೆ ಒಂದು ಮಗು ಹಾಗೂ ಅವಿನಾಶ್‌ ಮತ್ತು ನಿಶ್ಚಿತಾ ಜೋಡಿಗೆ ಒಂದು ಮಗು ಇತ್ತು. ಈ ಸಂಸಾರಕ್ಕೆ ಕಾರ್ತಿಕ್‌ ಎಂಬಾತ ಎಂಟ್ರಿಕೊಟ್ಟ.

ಅಕ್ಕ-ತಂಗಿಯರ ಜೊತೆ ಕಾರ್ತಿಕ್‌ ಸ್ನೇಹ ಸಂಬಂಧ ಬೆಳೆಸಿದ್ದ. ಇದೇ ವಿಚಾರಕ್ಕೆ ಅಭಿಷೇಕ್‌ ಮತ್ತು ನಿಖಿತಾ ದಂಪತಿ ನಡುವೆ ಗಲಾಟೆ ನಡೆದು ದೂರವಾಗಿದ್ದರು. ಇತ್ತ ಅವಿನಾಶ್‌ ಕೂಡ ತನ್ನ ಪತ್ನಿ ಜೊತೆಗೆ ಕಾರ್ತಿಕ್‌ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಇಷ್ಟೇ ಅಲ್ಲದೇ, ಕಾರ್ತಿಕ್ ಮತ್ತು ಅಭಿಷೇಕ್ ನಡುವೆ ಹಣಕಾಸಿನ ವ್ಯವಹಾರ ಕೂಡ ನಡೆದಿತ್ತು ಎನ್ನಲಾಗಿದೆ.

ಈ ಮಧ್ಯೆ ನ.27 ರಂದು ಅಭಿಷೇಕ್‌ನನ್ನು ಕಾರ್ತಿಕ್ ಕರೆಸಿಕೊಂಡಿದ್ದ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅನುಪಮ ಶಾಲೆ ಬಳಿ ಅಭಿಷೇಕ್‌ ಮೇಲೆ ಕಾರ್ತಿಕ್‌ ಹಲ್ಲೆ ನಡೆಸಿದ್ದಾನೆ. ಕಡಗದಿಂದ ಹಲವು ಬಾರಿ ತಲೆಗೆ ಗುದ್ದಿ ಹಲ್ಲೆ ಮಾಡಿದ್ದ. ಈ ವೇಳೆ, ಅಭಿಷೇಕ್‌ ಪತ್ನಿ ನಿಖಿತಾ, ಅವಿನಾಶ್ ಪತ್ನಿ ನಿಶ್ಚಿತ ಹಾಗೂ ಅವರ ತಾಯಿ ಮಂಜುಳಾ ಕೂಡ ಸ್ಥಳದಲ್ಲೇ ಇದ್ದು ಹಲ್ಲೆಗೆ ಪ್ರೇರೇಪಣೆ ನೀಡಿದ್ದರು. ಅಭಿಷೇಕ್ ತಲೆಗೆ ತೀವ್ರ ಪೆಟ್ಟಾಗಿ ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿದ್ದ. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ಕಾರ್ತಿಕ್, ಚೇತನ್, ನಿಖಿತಾ ಮತ್ತು ನಿಶ್ಚಿತಾರನ್ನು ಬಂಧಿಸಿದ್ದಾರೆ.

Share This Article