ಜಮೀರ್‌ ಪ್ರಭಾವ ಬಳಸಿ ಚಿತ್ರದುರ್ಗದಲ್ಲಿ 6 ಎಕ್ರೆ ಖಬರ್‌ಸ್ಥಾನ ಜಮೀನು ಕಬಳಿಕೆ- ವಕ್ಫ್ ಮಾಜಿ ಅಧ್ಯಕ್ಷನ ವಿರುದ್ಧವೇ ಆಕ್ರೋಶ

Public TV
2 Min Read
Anwar Pasha Waqf Chitradurga

ಚಿತ್ರದುರ್ಗ: ಇಲ್ಲಿಯವರೆಗೆ ಮಠ,ಮಂದಿರ, ರೈತರು ಹಾಗು ಸರ್ಕಾರದ ಜಮೀನುಗಳನ್ನು ವಕ್ಫ್ ಕಬಳಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಈಗ ವಕ್ಫ್ ಬೋರ್ಡ್‌ನ (Waqf Board) ಮಾಜಿ ರಾಜ್ಯಾಧ್ಯಕ್ಷರೊಬ್ಬರು ಮುಸ್ಲಿಂ ಸಮುದಾಯದ ಖಬರ್‌ಸ್ಥಾನ ಜಾಗವನ್ನೇ ಕಬಳಿಸಿದ್ದಾರೆಂಬ ಗಂಭೀರ ಆರೋಪ ಚಿತ್ರದುರ್ಗದಲ್ಲಿ (Chitradurga) ಕೇಳಿಬಂದಿದೆ.

ಚಿತ್ರದುರ್ಗದ ಅಗಸನಕಲ್ಲು ಬಡಾವಣೆಯ ನಿವಾಸಿಯಾಗಿರುವ ವಕ್ಫ್ ಬೋರ್ಡ್ ಮಾಜಿ ರಾಜ್ಯಾಧ್ಯಕ್ಷ ಅನ್ವರ್ ಪಾಷಾ ಅವರು ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರ ಆಪ್ತರಾಗಿದ್ದಾರೆ. ಹೀಗಾಗಿ ಅನ್ವರ್ ಪಾಷಾ ಸಚಿವರ ಪ್ರಭಾವ ಬಳಸಿ, ಚಿತ್ರದುರ್ಗದ ಮುಸ್ಲಿಂ ಸಮುದಾಯದ ಖಬರ್‌ಸ್ಥಾನಗೆ ಮಂಜೂರಾಗಿದ್ದ ಆರು ಎಕರೆ ಜಾಗದಲ್ಲಿ ಅವರ ಮನೆ ಹಾಗು ಕಾಲೇಜೊಂದನ್ನು ನಿರ್ಮಾಣ ಮಾಡಿದ್ದಾರೆಂದು ಸಮುದಾಯದ ಮುಖಂಡರಾದ ಅಜ್ಮಲ್ ಹಾಗೂ ಇಂತಿಯಾಜ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ ವಿರುದ್ಧ ದೇಶದ್ರೋಹದ ಕೇಸ್‌ – ಬಾಂಗ್ಲಾದಲ್ಲಿ ಇಸ್ಕಾನ್ ಬ್ಯಾನ್‌ ಆಗುತ್ತಾ?

Anwar Pasha Waqf Chitradurga 1

ಸರ್ಕಾರ ಸಮುದಾಯದ ಖಬರ್‌ಸ್ಥಾನಗೆ ನೀಡಿದ್ದ ಜಾಗವನ್ನು ಅನ್ವರ್ ಕಬಳಿಸಿದ್ದಾರೆಂದು ಮುಸ್ಲಿಂ ವೇದಿಕೆ ಅಧ್ಯಕ್ಷ ಅಜ್ಮಲ್ ಆರೋಪಿಸಿದ್ದಾರೆ. ಹಾಗೆಯೇ ವಕ್ಫ್ ಬೋರ್ಡ್ ನಿರ್ದೇಶಕರಾಗಿರುವ ಅನ್ವರ್ ಪಾಷಾ ಈ ಹಿಂದೆ ವಕ್ಫ್ ಬೋರ್ಡ್‌ಗೆ ರಾಜ್ಯಾಧ್ಯಕ್ಷರಾಗಿದ್ದು, ರಾಜಕೀಯ ಹಾಗೂ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಖಬರ್‌ಸ್ಥಾನ ಹಾಗೂ ರಸ್ತೆಯನ್ನು ಒತ್ತುವರಿ ಮಾಡಿದ್ದಾರೆ. ಬಳಿಕ ನಿರುಪಯುಕ್ತ ಖರಾಬು ಜಮೀನಾದ ಬೆಟ್ಟಗುಡ್ಡವಿರುವ ಜಮೀನಿನನ್ನು ಖಬರ್‌ಸ್ಥಾನ ಜಾಗವೆಂದು ಗುರುತಿಸಿ, ಸಮುದಾಯಕ್ಕೆ ವಂಚಿಸಿದ್ದಾರೆ ಎಂಬ ಆರೋಪವನ್ನು ಯುವ ವೇದಿಕೆ ಮುಖಂಡ ಇಂತಿಯಾಜ್ ಮಾಡಿದ್ದಾರೆ. ಇದನ್ನೂ ಓದಿ: ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್

Anwar Pasha Waqf Chitradurga 2

ಈ ಸಂಬಂಧ ಚಿತ್ರದುರ್ಗದ ನಗರ ಠಾಣೆಗೆ ಮಿನರ್ವ ಫೌಂಡೇಷನ್ ಹಾಗೂ ಮುಸ್ಲಿಂ ವೇದಿಕೆ ಮುಖಂಡರಾದ ಅಜ್ಮಲ್, ಇಂತಿಯಾಜ್, ಮುನ್ನ ನೇತೃತ್ವದಲ್ಲಿ ದೂರು ನೀಡಿದ್ದಾರೆ. ಈ ಖಬರ್‌ಸ್ಥಾನ ಮತ್ತು ಪಕ್ಕದ ರಸ್ತೆಯನ್ನು ಸಹ ಅನ್ವರ್ ಒತ್ತುವರಿ ಮಾಡಿದ್ದಾರೆ. ಹೀಗಾಗಿ ಈ ಜಮೀನಿನ ಸಂಬಂಧ ಸರ್ಕಾರ ಕೂಡಲೇ ಸರ್ವೆ ನಡೆಸಿ, ಖಬರ್‌ಸ್ಥಾನ ಜಾಗ ಉಳಿಸುವಂತೆ ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಕಾರು ಉರುಳಿದ ಕೇಸ್‌ – ಎಫ್‌ಐಆರ್‌ ದಾಖಲು, ತನಿಖೆ ಎದುರಿಸುತ್ತಿದೆ ಗೂಗಲ್‌ ಮ್ಯಾಪ್ಸ್‌

ಇನ್ನು ಈ ಸಂಬಂಧ ಸಮುದಾಯದ ಯುವಕನಾದ ಇಂತಿಯಾಜ್, ಅನ್ವರ್ ಪಾಷಾ ವಿರುದ್ಧ ವೀಡಿಯೊ ವೈರಲ್ ಮಾಡಿದ್ದರು. ಈ ಯುವಕನ ಹೋರಾಟಕ್ಕೆ ಸಾಥ್ ನೀಡಿರುವ ಸಮಾಜದ ಮುಖಂಡರು ಸಹ ಖಬರ್‌ಸ್ಥಾನ ಹಾಗೂ ಸಾರ್ವಜನಿಕ ರಸ್ತೆ ಒತ್ತುವರಿ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರು ಯೋಗೇಶ್ವರ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು: ಸುರೇಶ್ ಬಾಬು ಸಲಹೆ

Share This Article