ತೆನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?

Public TV
2 Min Read
Nikhil Kumaraswamy 5

ಮೈಸೂರು: ಚನ್ನಪಟ್ಟಣ ಚುನಾವಣೆ ಬಳಿಕ ಜೆಡಿಎಸ್ (JDS) ಪಾಳಯದಲ್ಲಿ ಮತ್ತೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕರ ಆರೋಪ-ಪತ್ಯಾರೋಪ ತಾರಕಕ್ಕೇರಿದೆ. ಜಿಟಿಡಿ ಮುನಿಸಿಗೆ ಮುಲಾಮು ಹಚ್ಚದಿದ್ದರೆ, ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಸಂಘಟನೆ ವಿಚಾರದಲ್ಲಿ ದೊಡ್ಡ ನಷ್ಟ ಗ್ಯಾರಂಟಿ. ಹೀಗಾಗಿ ಮತ್ತೆ ಪಿಚ್‌ಗೆ ಇಳಿಯುತ್ತಾರಾ ಹೆಚ್‌ಡಿ ದೇವೇಗೌಡರು (HD Devegowda) ಎಂಬ ಪ್ರಶ್ನೆ ಮೂಡಿದೆ.

Nikhil Kumaraswamy 2 1

ಹೌದು, ಒಂದು ಕಾಲದ ದಳಪತಿಗಳ ಭದ್ರಕೋಟೆಯಾಗಿದ್ದ ಚನ್ನಪಟ್ಟಣ ಉಪಚುನಾವಣೆ (Channapatna By Poll) ಬಳಿಕ ಮತ್ತೆ ಜೆಡಿಎಸ್ ಹಿರಿಯ ನಾಯಕರಲ್ಲಿ ಅಸಮಧಾನ ಭುಗಿಲೆದ್ದಿದೆ. ಚನ್ನಪಟ್ಟಣ ಉಪಚುನಾವಣೆ ಸೋಲಿಗೆ ಹೆಚ್‌ಡಿಕೆ ಕಾರಣ, ನಿಖಿಲ್‌ರನ್ನು ನಿಲ್ಲಿಸಲು ಹೇಳಿದ್ದು ಯಾರು? ದೇವೇಗೌಡರಾಗಲಿ ಅಥವಾ ಅವರ ಕುಟುಂಬದವರಾಗಲಿ ನನಗೆ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕರೆದೇ ಇಲ್ಲ ಎಂದು ಜಿಟಿಡಿ ಬೇಸರ ವ್ಯಕ್ತಪಡಿಸಿದ್ದು, ಹೆಚ್‌.ಡಿ ಕುಮಾರಸ್ವಾಮಿಗೆ ನನ್ನ ಮಗ ಬೇಕು… ನಾನು ಬೇಡದವನಾಗಿದ್ದೇನೆ. ನೋವುಂಡು ಜೆಡಿಎಸ್‌ನಲ್ಲಿ ಇದ್ದೇನೆ ಎಂದು ಜಿಟಿಡಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

HD Devegowda 5

ಇನ್ನು, ಅನಿವಾರ್ಯ ಸ್ಥಿತಿಯಲ್ಲಿ ನಿಖಿಲ್‌ರನ್ನು ಕಣಕ್ಕೆ ಇಳಿಸಬೇಕಾಯಿತು. ಜಿ.ಟಿ ದೇವೇಗೌಡರನ್ನು ಖುದ್ದು ಹೆಚ್.ಡಿ ದೇವೇಗೌಡರೆ ಫೋನ್ ಮಾಡಿ ಪ್ರಚಾರಕ್ಕೆ ಬರುವಂತೆ ಕರೆದಿದ್ದರು ಅವರು ಬರಲಿಲ್ಲ. ನಾವು ಯಾರು ಜಿ.ಟಿ. ದೇವೇಗೌಡರ ರಾಜಕೀಯ ನಿವೃತ್ತಿ ಬಯಸಿಲ್ಲ. ಅವರು ಇನ್ನೂ ಬಹಳ ವರ್ಷ ರಾಜಕಾರಣ ಮಾಡಬೇಕು. ನನ್ನಿಂದ ತೊಡಕಾಗುವುದಾದ್ರೆ ಚಾಮುಂಡಿಬೆಟ್ಟಕ್ಕೆ ಬರಲಿ ಎಂದು ಸಾರಾ ಮಹೇಶ್ ಹೇಳಿದ್ದಾರೆ.

ಇತ್ತ, ಮಗ ಸೋತ ನೋವಿನಲ್ಲಿದ್ದ ಹೆಚ್‌ಡಿಕೆಗೆ ಗಾಯದ ಮೇಲೆ ಬರೆ ಎಂಬಂತೆ ಜಿಟಿಡಿ ಮಾತು ಘಾಸಿ ಮಾಡಿದ್ರೆ, ನಿಖಿಲ್ ಮಾತ್ರ ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರಿಸುತ್ತೇನೆ. ನಾನು ಕಾರ್ಯಕರ್ತರ ಜೊತೆಗಿರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ | ಗೆಳೆಯನಿಗೆ ಥಳಿಸಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಟ್ರಕ್ ಚಾಲಕ

ಒಟ್ಟಿನಲ್ಲಿ ಜಿಟಿಡಿ ಮುನಿಸಿಗೆ ಮುಲಾಮು ಹಚ್ಚದಿದ್ದರೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ದೊಡ್ಡ ನಷ್ಟ ಅಗುವುದು ಗ್ಯಾರಂಟಿ. ಮಗನ ಜೊತೆ ಪ್ರೀತಿ ಅಪ್ಪನ ಜೊತೆ ಮುನಿಸು, ಹೆಚ್‌ಡಿಕೆಯ ಈ ನಡೆಯಿಂದ ಜಿಟಿಡಿ ಹಾಗೂ ಸಿಎಂ ಸಿದ್ದರಾಮಯ್ಯ ಹತ್ತಿರವಾಗಲು ಅವಕಾಶ ಮಾಡಿಕೊಟ್ಟರಾ..? ಜಿಟಿಡಿ ಮುನಿಸಿಗೆ ಮತ್ತೆ ಮುಲಾಮು ಹಚ್ಚಲು ದೊಡ್ಡಗೌಡರೇ ಪಿಚ್‌ಗೆ ಇಳಿಯುತ್ತಾರಾ ಕಾದು ನೋಡಬೇಕು.

Share This Article