ತಂದೆಯ ಮೊದಲ ಬೈಕ್ ಏರಿ ಸಲ್ಮಾನ್ ಖಾನ್ ಫೋಟೋಶೂಟ್

Public TV
1 Min Read
salman khan 1 1

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ‘ಸಿಖಂದರ್’ ಸಿನಿಮಾಗ ಬ್ರೇಕ್ ಸಿಕ್ಕ ಬೆನ್ನಲ್ಲೇ ತಂದೆಯ ಮೊದಲ ಬೈಕ್ ಏರಿ ಫೋಟೋಶೂಟ್ ಮಾಡಿಸಿದ್ದಾರೆ. ತಂದೆ ಸಲೀಂ ಖಾನ್ (Salim Khan) ಮತ್ತು ಬೈಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

Salman Khan 1

ಶೇರ್ ಮಾಡಿರುವ ಮೊದಲ ಫೋಟೋದಲ್ಲಿ, ತಂದೆ ಸಲೀಂ ಖಾನ್ ಬೈಕ್ ಏರಿ ಮಗನ ಕಡೆ ಪೋಸ್ ನೀಡಿದ್ದಾರೆ. ಅವರೊಂದಿಗೆ ನಿಂತು ಸಲ್ಮಾನ್ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೋದಲ್ಲಿ ತಂದೆಯ ಬೈಕ್ ಏರಿ ಸಲ್ಮಾನ್ ಕುಳಿತಿದ್ದಾರೆ. ಸದ್ಯ ಈ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.


ಅಂದಹಾಗೆ, ಸಲ್ಮಾನ್ ತಂದೆ ಸಲೀಂ ಖಾನ್ ಕೂಡ ಬೈಕ್ ಕ್ರೇಜ್ ಹೊಂದಿದ್ದರು. 1956ರ ‘Triumph Tiger 100’ ಎನ್ನುವ ಬೈಕ್ ಅನ್ನ ಖರೀದಿಸಿದ್ದರು. ಆಗಿನ ಈ ಒಂದು ಬೈಕ್ ಅನ್ನ ಸಲ್ಮಾನ್ ತುಂಬಾನೇ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಹಾಗೇನೇ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

ಇನ್ನೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಜೊತೆ ‘ಸಿಖಂದರ್’ ಚಿತ್ರವನ್ನು ಸಲ್ಮಾನ್ ಮಾಡುತ್ತಿದ್ದಾರೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಎ.ಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮುಂದಿನ ವರ್ಷ ಈದ್ ಹಬ್ಬದಂದು ‘ಸಿಖಂದರ್’ ಚಿತ್ರ ರಿಲೀಸ್ ಆಗಲಿದೆ.

Share This Article