ವಕ್ಫ್‌ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

Public TV
1 Min Read
Waqf Protest Clash Between MLC Pujar and Former MLA Veeranna Charanthimath Supporters

ಬಾಗಲಕೋಟೆ: ವಕ್ಫ್‌ ಬೋರ್ಡ್‌ (Waqf Board) ವಿರುದ್ಧದ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ (Bagalkot BJP) ಭಿನ್ನಮತ ಸ್ಫೋಟಗೊಂಡಿದೆ.

ಇಂದು ಕರ್ನಾಟಕ ಬಿಜೆಪಿ ರಾಜ್ಯವ್ಯಾಪಿ ವಕ್ಫ್ ವಿರುದ್ಧ  ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆ ಆಗಮಿಸಿದ ಹಾಲಿ ಎಂಎಲ್‌ಸಿ ಪಿಹೆಚ್ ಪೂಜಾರ (MLC PH Pujar), ಮಾಜಿ ಎಂಎಲ್ ಎ ವೀರಣ್ಣ ಚರಂತಿಮಠ (Veeranna Charantimath) ಬೆಂಬಲಿಗರು ಬಿಜೆಪಿ ಕಾರ್ಯಾಲಯದಲ್ಲಿ ಪರಸ್ಪರ ವಾಗ್ವಾದ ನಡೆಸಿದ್ದಾರೆ.

ಪಿಹೆಚ್ ಪೂಜಾರ ಬೆಂಬಲಿಗರು ಬಂದರೆ ನಾವು ಪ್ರತಿಭಟನೆಗೆ ಬರುವುದಿಲ್ಲ ವೀರಣ್ಣ ಚರಂತಿಮಠ ಬೆಂಬಲಿಗರು ಹೇಳಿದರೆ ನಾವು ಬಂದೇ ಬರುತ್ತೇವೆ ಎಂದು ಹಾಲಿ ಪರಿಷತ್‌ ಸದಸ್ಯ ಪಿ ಹೆಚ್ ಪೂಜಾರ ಬೆಂಬಲಿಗರು ಪಟ್ಟ ಹಿಡಿದಿದ್ದಾರೆ. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

 

ಎರಡು ಬಣಗಳ ನಡುವಿನ ತಿಕ್ಕಾಟ ಜೋರಾಗುತ್ತಿದ್ದಂತೆ ಗೊಂದಲ ಸರಿಪಡಿಸಲು ಬಿಜೆಪಿ ಮುಖಂಡರ ಕಚೇರಿಯಲ್ಲಿ ಸಭೆ ನಡೆಸಿದರು. ಎರಡು ಬಣಗಳ ಜೊತೆ ಮಾತನಾಡಿದರೂ ಯಾವುದೇ ಫಲ ಸಿಗಲಿಲ್ಲ.

ಅಂತಿಮವಾಗಿ ಬಾಗಲೋಟೆಯ ಡಿಸಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ವೀರಣ್ಣ ಚರಂತಿಮಠ ಬೆಂಬಲಿಗರು ಭಾಗವಹಿಸಿದರೆ ಪಿ ಹೆಚ್ ಪೂಜಾರ ಬೆಂಬಲಿಗರು ಬಿಜೆಪಿ ಕಚೇರಿಯಲ್ಲೇ ಉಳಿದರು.

 

Share This Article