ಟೋಲ್‌ ಕಟ್ಟದೇ ಕೈ ಮುಖಂಡನಿಂದ ದರ್ಪ – ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

Public TV
1 Min Read
Bengaluru Mysuru Expressway Gananguru toll booth workers assaulted Srirangapatna Mandya 1

ಮಂಡ್ಯ: ಬೆಂಗಳೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bengaluru-Mysuru Expressway) ರಾಜಕೀಯ ಪುಡಾರಿಗಳು ಪುಂಡಾಟ ನಡೆಸಿ ಟೋಲ್ (Toll) ದುಡ್ಡು ಕಟ್ಟದೇ ಧಿಮಾಕು ಪ್ರದರ್ಶನ ತೋರಿದ್ದಾರೆ. ಟೋಲ್ ಕಟ್ಟಿ ಎಂದಿದ್ದಕ್ಕೆ ಕಾಂಗ್ರೆಸ್‌ (Congress) ಮುಖಂಡ ಕ್ಯಾತೆ ತೆಗೆದು ಜಗಳ ಮಾಡಿದ್ದು ಅಲ್ಲದೇ ಹಲ್ಲೆ ನಡೆಸಿದ್ದಾರೆ.

ಗುರುವಾರ ಮಧ್ಯಾಹ್ನ ಕಾಂಗ್ರೆಸ್ ಪಕ್ಷದ ಸಮಿತಿ ಒಂದರ ಪದಾಧಿಕಾರಿ ಬೋರ್ಡ್‌ ಹಾಕಿದ ಕಾರು ಶ್ರೀರಂಗಪಟ್ಟಣ (Srirangapatna) ತಾಲೂಕಿನ ಗಣಂಗೂರು ಟೋಲ್‌ಗೆ ಬಂದಿದೆ. ಮೈಸೂರು ಕಡೆಗೆ ಹೊರಟಿದ್ದ ಕಾರು ಚಾಲಕ ಮತ್ತು ಅದರ ಒಳಗಡೆ ಇದ್ದ ಪ್ರಯಾಣಿಕರು ಟೋಲ್‌ ಕಟ್ಟಲು ನಿರಾಕರಿಸಿದ್ದಾರೆ. ನಂತರ ಯಾಕೆ ಕಾರನ್ನು ಬಿಡುತ್ತಿಲ್ಲ ಎಂದು ಪ್ರಶ್ನಿಸಿ ಕೈ ಮುಖಂಡ ಕಾರಿನಿಂದ ಇಳಿದು ಅವಾಜ್ ಹಾಕಿದ್ದಾನೆ.

Bengaluru Mysuru Expressway Gananguru toll booth workers assaulted Srirangapatna Mandya 2

ನಾನು ಕಾಂಗ್ರೆಸ್‌ ನಾಯಕ, ಟೋಲ್ ದುಡ್ಡು ಕಟ್ಟಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಟೋಲ್‌ ದುಡ್ಡು ಕಟ್ಟಲೇಬೇಕೆಂದು ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ – ಮೂವರಿಗೆ ಚಾಕುವಿನಿಂದ ಹಲ್ಲೆ

ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಮಹಿಳೆ ಕೆಳಗೆ ಇಳಿದು ಮಹಿಳಾ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಜುಟ್ಟು ಹಿಡಿದು ಎಳೆದಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆ ನಡೆಸಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ದೂರನ್ನು ದಾಖಲಿಸಿಕೊಳ್ಳದೇ ಅವರನ್ನ ಸ್ಥಳದಿಂದ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

 

Share This Article