‌Pushpa 2: ಶ್ರೀಲೀಲಾ ಫ್ಯಾನ್ಸ್‌ಗೆ ಸಿಹಿಸುದ್ದಿ- ಅಲ್ಲು ಅರ್ಜುನ್‌ ಜೊತೆಗಿನ ಐಟಂ ಸಾಂಗ್‌ ನ.24ಕ್ಕೆ ರಿಲೀಸ್

Public TV
1 Min Read
sreeleela 1 1

ನ್ನಡದ ಭರಾಟೆ ಬ್ಯೂಟಿ ಶ್ರೀಲೀಲಾ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಸೊಂಟ ಬಳುಕಿಸಿರುವ ವಿಚಾರ ಈಗಾಗಲೇ ರಿವೀಲ್ ಆಗಿದೆ. ಆದರೆ ಈ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಅಲ್ಲು ಅರ್ಜುನ್ (Allu Arjun) ಜೊತೆಗಿನ ಶ್ರೀಲೀಲಾ (Sreeleela) ಐಟಂ ಸಾಂಗ್ ರಿಲೀಸ್ ಆಗಲಿರುವ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಇದನ್ನೂ ಓದಿ:ರಿಲೇಷನ್‌ಶಿಪ್‌ನಲ್ಲಿರೋದಾಗಿ ಒಪ್ಪಿಕೊಂಡ ವಿಜಯ್ ದೇವರಕೊಂಡ

sreeleela

ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಜೋಡಿ ‘ಕಿಸ್ಸಿಕ್’ ಎಂಬ ಹಾಡಿಗೆ ಈಗಾಗಲೇ ಹೆಜ್ಜೆ ಹಾಕಿದ್ದಾರೆ. ನ.24ರಂದು ಸಂಜೆ 7: 02ಕ್ಕೆ ಈ ಸಾಂಗ್ ರಿಲೀಸ್ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಗುಡ್ ನ್ಯೂಸ್ ಕೊಟ್ಟಿದೆ. ಈಗಾಗಲೇ ಚಿತ್ರತಂಡ ರಿವೀಲ್ ಮಾಡಿರುವ ಶ್ರೀಲೀಲಾ ಪೋಸ್ಟರ್‌ನಿಂದ ಹಾಡಿನ ಕುರಿತು ನಿರೀಕ್ಷೆ ಹೆಚ್ಚಿಸಿದೆ. ‘ಕಿಸ್ಸಿಕ್’ ಹಾಡಿಗಾಗಿ ಪಡ್ಡೆಹುಡುಗರು ಎದುರು ನೋಡುತ್ತಿದ್ದಾರೆ.

 

View this post on Instagram

 

A post shared by Sreeleela (@sreeleela14)

ಅಂದಹಾಗೆ, ಡಿ.5ಕ್ಕೆ ‘ಪುಷ್ಪ 2’ ಸಿನಿಮಾ ರಿಲೀಸ್ ಆಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ, ಫಹಾದ್ ಫಾಸಿಲ್, ಅನಸೂಯ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article