BBK 11: ತಾಕತ್ತು ಇದ್ದರೆ ತಡೆಯಿರಿ ನೋಡೋಣ- ಶಿಶಿರ್‌ಗೆ ಚೈತ್ರಾ ಅವಾಜ್

Public TV
1 Min Read
CHAITHRA 2

‘ಬಿಗ್ ಬಾಸ್’ (Bigg Boss Kannada 11) ಮನೆಯ ಆಟ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಸಾಕಷ್ಟು ಟ್ವಿಸ್ಟ್‌ಗಳೊಂದಿಗೆ ಮನೆಯ ಆಟ ರಂಗೇರಿದೆ. ಇದೀಗ ಮತ್ತೆ ಟಾಸ್ಕ್‌ವೊಂದರಲ್ಲಿ ಶಿಶಿರ್ ಶಾಸ್ತ್ರಿ (Shishir Shastry) ಮತ್ತು ಚೈತ್ರಾ ಕುಂದಾಪುರ (Chaithra Kundapura) ನಡುವೆ ಕಿರಿಕ್ ನಡೆದಿದೆ. ತಾಕತ್ತು ಇದ್ದರೆ ತಡೆಯಿರಿ ನೋಡೋಣ ಅಂತ ಶಿಶಿರ್‌ಗೆ ಚೈತ್ರಾ ಸವಾಲು ಹಾಕಿದ್ದಾರೆ.

bigg boss 1 7

ನಿನ್ನೆ (ನ.20) ರಜತ್ ಮತ್ತು ಗೋಲ್ಡ್ ಸುರೇಶ್ ನಡುವೆ ಬಿಗ್ ಫೈಟ್ ನಡೆದಿತ್ತು. ಗುಗ್ಗು ನನ್ನ ಮಗ ಎಂದು ಸುರೇಶ್‌ಗೆ ರಜತ್ ನಿಂದಿಸಿದ್ದರು. ಈ ಘಟನೆ ಮರೆಯುವ ಮೊದಲೇ ಇತ್ತ ಶಿಶಿರ್ ಮತ್ತು ಚೈತ್ರಾ ನಡುವೆ ಕಿತ್ತಾಟ ನಡೆದಿದೆ. ಭವ್ಯಾ ಟೀಮ್‌ನವರು ಟಾಸ್ಕ್ ಆಡುವಾಗ ಯಡವಟ್ಟು ಮಾಡಿದ್ದಾರೆ. ಇದನ್ನು ಗಮನಿಸಿದ ಉಸ್ತುವಾರಿ ಶಿಶಿರ್ ಆಟದ ಬಗ್ಗೆ ಚಕಾರವೆತ್ತಿದ್ದಾರೆ. ಇದನ್ನೂ ಓದಿ:‘ವಿಶ್ವ ಕನ್ನಡ ಹಬ್ಬ’ಕ್ಕೆ ಹಾರೈಸಿದ ಶಿವರಾಜ್ ಕುಮಾರ್

chaithra 1 2

ಈ ವಿಚಾರವಾಗಿ ಶಿಶಿರ್ ಮತ್ತು ಚೈತ್ರಾ ನಡುವೆ ವಾಗ್ವಾದ ನಡೆದಿದೆ. ಸೋಲುತ್ತೇವೆ ಅಂತ ಭಯ ಇದ್ದಾಗ ಹೀಗೆ ಆಡೋದು ಅಂತ ಚೈತ್ರಾ ಕಿಡಿಕಾರಿದ್ದಾರೆ. ಆಗ ಶಿಶಿರ್ ಬರೀ ಮಾತು, ಅದು ಬಿಟ್ಟು ಬೇರೆ ಏನು ಇಲ್ಲ ಎಂದು ತಿರುಗೇಟು ನೀಡುತ್ತಾರೆ. ಆಗ ಚೈತ್ರಾ ಇದನ್ನೂ ಬಿಟ್ಟು ಬೇರೆ ಏನು ಹೇಳೋದಕ್ಕೆ ಬರುತ್ತೆ ನಿಮಗೆ ಅಂತ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಆಗ ಸುಮ್ಮನೆ ಹೋಗು ಆ ಕಡೆ ಅಂತ ಶಿಶಿರ್ ಜೋರಾಗಿ ಕೂಗಾಡಿದ್ದಾರೆ. ನನ್ನ ಆ ಕಡೆ ಹೋಗು ಅಂತ ಹೇಳೋದ್ದಕ್ಕೆ ಯಾವ ಅಧಿಕಾರ ಕೂಡ ನಿಮಗಿಲ್ಲ. ಆ ಕಡೆ ಹೋಗೋದಿಲ್ಲ ಇಲ್ಲೇ ನಿಂತುಕೊಳ್ಳುತ್ತೇನೆ. ತಾಕತ್ತು ಇದ್ದರೆ ತಡೆಯಿರಿ ನೋಡೋಣ ಅಂತ ಅವಾಜ್ ಹಾಕಿದ್ದಾರೆ. ಇಬ್ಬರ ಜಗಳ ನೋಡಿ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.

Share This Article