Odisha| ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ 20 ಲಕ್ಷ ರೂ. ಸೀಜ್

Public TV
1 Min Read
Money

ಭುವನೇಶ್ವರ: ಹಸುವಿನ ಸಗಣಿ ರಾಶಿಯಲ್ಲಿ (Cow Dung) ಬಚ್ಚಿಟ್ಟಿದ್ದ 20 ಲಕ್ಷ ರೂ. ಹಣವನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಒಡಿಶಾದ (Odisha) ಬಾಲಾಸೋರ್ (Balasore) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಹೈದರಾಬಾದ್ ಮತ್ತು ಒಡಿಶಾ ಪೊಲೀಸ್ ತಂಡ ದಾಳಿ ನಡೆಸಿ ಕಮರ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ಬಡಮಂಡರುಣಿ ಗ್ರಾಮದಲ್ಲಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಸ್ಕ್‌ ಜೊತೆ ಒಪ್ಪಂದ – ಫಸ್ಟ್‌ ಟೈಂ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

cow dung cakes3
ಸಾಂದರ್ಭಿಕ ಚಿತ್ರ

ಗೋಪಾಲ್ ಎಂಬಾತ ಹೈದರಾಬಾದ್‌ನ ಕೃಷಿ ಆಧಾರಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ಲಾಕರ್‌ನಿಂದ 20 ಲಕ್ಷಕ್ಕೂ ಹೆಚ್ಚು ಹಣವನ್ನು ಕಳ್ಳತನ ಮಾಡಿದ್ದ. ಬಳಿಕ ತನ್ನ ಸೋದರ ಮಾವ ರವೀಂದ್ರ ಬೆಹೆರಾ ಮೂಲಕ ಹಣವನ್ನು ಗ್ರಾಮಕ್ಕೆ ಕಳುಹಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಇದನ್ನೂ ಓದಿ: ಜಪಾನ್‌ನಿಂದ ಚೀನಾಗೆ ಶಿಫ್ಟ್ ಆಯ್ತು ಟ್ರಂಪ್ ‘ವಾಣಿಜ್ಯ ಯುದ್ಧ’ ಕಾರ್ಡ್ – ಭಾರತ ಮುಂದಿನ ಟಾರ್ಗೆಟ್?

ದೂರಿನ ಆಧಾರದ ಮೇರೆಗೆ ಹೈದರಾಬಾದ್ ಪೊಲೀಸರ ತಂಡ ಕಮರ್ದಾ ಪೊಲೀಸರೊಂದಿಗೆ ರವೀಂದ್ರ ಮನೆಯ ಮೇಲೆ ದಾಳಿ ನಡೆಸಿ ಸಗಣಿ ರಾಶಿಯಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಸರ್ಕಾರಿ ನೌಕರರ ಬಿಪಿಎಲ್‌ ಕಾರ್ಡ್‌ ರದ್ದು – ಕಲಬುರಗಿಯಲ್ಲಿ ಹೆಚ್ಚು, ಉಡುಪಿಯಲ್ಲಿ ಅತಿ ಕಡಿಮೆ

ಹಣ ಕದ್ದ ಬಳಿಕ ಗೋಪಾಲ್ ಹಾಗೂ ರವೀಂದ್ರ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಕಮರ್ದಾ ಪೊಲೀಸ್ ಠಾಣೆ ಐಐಸಿ ಪ್ರೇಮದ ನಾಯಕ್ ಹೇಳಿದ್ದಾರೆ. ದಾಳಿಯ ವೇಳೆ ಆರೋಪಿಯ ಕುಟುಂಬದ ಸದಸ್ಯರೊಬ್ಬರನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಿಗೆ ಫೆನ್ಸಿಂಗ್ – ಒತ್ತುವರಿ ಆಗಿದ್ರೆ ಕೋರ್ಟ್ ಮೂಲಕ ತೆರವು

Share This Article