BBK 11: ಕಿಚ್ಚನ ಕೋಪಕ್ಕೆ ಚೈತ್ರಾ ಕುಂದಾಪುರ ಗಪ್‌ ಚುಪ್‌- ಅಷ್ಟಕ್ಕೂ ಆಗಿದ್ದೇನು?

Public TV
2 Min Read
sudeep 1

ಕನ್ನಡದ ‘ಬಿಗ್ ಬಾಸ್ 11’ರ (Bigg Boss Kannada 11) ಶೋ 8ನೇ ವಾರಕ್ಕೆ ಕಾಲಿಟ್ಟಿದೆ. ಇನ್ನೂ ಸಾಮಾನ್ಯವಾಗಿ ಯಾರ ಮೇಲೂ ಕೋಪ ಮಾಡಿಕೊಳ್ಳದ ಸುದೀಪ್ ಇದೀಗ ಚೈತ್ರಾ ಕುಂದಾಪುರ (Chaithra Kundapura) ಮೇಲೆ ಸಿಟ್ಟಾಗಿದ್ದಾರೆ. ಚೈತ್ರಾಗೆ ಸಖತ್ ಆಗಿ ಸುದೀಪ್ (Sudeep) ವಾರಾಂತ್ಯದ ಎಪಿಸೋಡ್‌ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

chaithra

ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯ ಬಾತ್‌ರೂಮ್‌ನಲ್ಲಿ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಬಳಿಕ ಬಿಗ್‌ಬಾಸ್‌ಗೆ ವಾಪಸ್ ಆದ್ಮೇಲೆ ಉಳಿದ ಸ್ಪರ್ಧಿಗಳ ಬಗ್ಗೆ ಹೊರಗಡೆ ಏನೆಲ್ಲಾ ನಡೆಯುತ್ತಿದೆ? ಸ್ಪರ್ಧಿಗಳ ಮೇಲೆ ಯಾವ ರೀತಿಯ ಬ್ಲಾಡ್ ಇಂಪ್ಯಾಕ್ಟ್ ಆಗಿದೆ ಅಂತ ಚೈತ್ರಾ ಸೂಚಿಸಿದರು.

chaithra kundapura

ಇದೇ ವಿಚಾರವಾಗಿ ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ಚೈತ್ರಾ ಮೇಲೆ ಕೆಂಡಕಾರಿದ್ದಾರೆ. ಮನೆ ಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತೀರಿ, ಬೆಳಗ್ಗೆ ಬಂದು ಅದನ್ನು ಸ್ಪರ್ಧಿಗಳಿಗೆ ಹೇಳುವ ಉದ್ದೇಶವೇನು ಅಂತ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ

sudeepಆಗ ಚೈತ್ರಾ, ನಾನೇ ಡಾಕ್ಟರ್ ಹತ್ತಿರ ಕೆಲವೊಂದು ಕೇಳಿದ್ದೇ, ಅಲ್ಲಿದ್ದ ನರ್ಸ್ ಹೀಗೆ ಹೇಳಿದರು. ಪ್ರತಿಯೊಬ್ಬರ ಮೇಲಿನ ಅಭಿಪ್ರಾಯ ತಿಳಿಸಿದರು. ಅದು ನನ್ನ ಅಭಿಪ್ರಾಯ ಅಲ್ಲ ಎಂದರು. ತಪ್ಪು ಮಾಡಿ ಮಾತಿನಲ್ಲೇ ಸಮರ್ಥನೆ ಮಾಡಿಕೊಳ್ತಿದ್ದ ಚೈತ್ರಾ ಮೇಲೆ ಸುದೀಪ್ ರಾಂಗ್ ಆದರು. ಬಾಯಿ ಮುಚ್ಚುವಂತೆ ಚೈತ್ರಾಗೆ ಶ್.. ಎಂದು ಸನ್ನೆ ಮಾಡಿದರು. ಸುದೀಪ್ ಕೋಪ ಕಂಡು ಚೈತ್ರಾ ಕುಂದಾಪುರ ಗಪ್ ಚುಪ್ ಆದರು. ಮಾತು ನಿಲ್ಲಿಸಿ ಚೈತ್ರಾ ಕಣ್ಣೀರು ಹಾಕಿದರು. ಆ ನಂತರ ಉಸಿರು ಕಟ್ಟಿಸುವ ವಾತಾವರಣದಲ್ಲಿ ನನಗೆ ಇರೋಕೆ ಆಗಲ್ಲ. ಮನೆಗೆ ಕಳುಹಿಸಿ ಎಂದು ಚೈತ್ರಾ ಬಿಗ್ ಬಾಸ್ ಮನವಿ ಮಾಡಿದ್ದಾರೆ.

ಇನ್ನೂ ಹೊರಗಿನ ವಿಚಾರವನ್ನು ಸ್ಪರ್ಧಿಗಳು ಮನೆಯೊಳಗೆ ಚರ್ಚಿಸುವಂತಿಲ್ಲ ಎಂದು ಮನೆಯ ಮೂಲ ನಿಯಮವಾಗಿದೆ. ಅದಕ್ಕೆ ಅದನ್ನು ಸುದೀಪ್ ಚೈತ್ರಾಗೆ ಪ್ರಶ್ನೆ ಮಾಡಿದ್ದಾರೆ. ಸದ್ಯ ವಾಹಿನಿ ರಿವೀಲ್ ಮಾಡಿರುವ ಪ್ರೋಮೋ ನೋಡಿ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಕಿಚ್ಚನ ಪಂಚಾಯಿತಿಗಾಗಿ ಕಾಯುತ್ತಿದ್ದಾರೆ.

Share This Article