ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಮಾಜಿ ಮಂತ್ರಿ ರಾಮುಲುಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಕೋವಿಡ್ ಅಕ್ರಮ (Covid Scam) ಆರೋಪ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲು ಸಿಎಂ ನೇತೃತ್ವದ ಸಂಪುಟ ಸಭೆ ತೀರ್ಮಾನಿಸಿದೆ.
ಕೋವಿಡ್ ಭ್ರಷ್ಟಾಚಾರದ ಕುರಿತು ಸತ್ಯಶೋಧನೆಗಾಗಿ ನೇಮಕಗೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿʼಕುನ್ಹಾ ಅವರ ಆಯೋಗವು ಸಲ್ಲಿಸಿರುವ 2 ಮಧ್ಯಂತರ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟವು ತೀರ್ಮಾನಿಸಿದೆ.… pic.twitter.com/zNee3dKnEn
— Siddaramaiah (@siddaramaiah) November 14, 2024
ಇನ್ನೂ 2-3 ದಿನಗಳಲ್ಲಿ ಐಜಿ ಮಟ್ಟದ ಅಧಿಕಾರಿ ನೇತೃತ್ವದ ಎಸ್‌ಐಟಿ ರಚನೆ ಆಗಲಿದ್ದು, ಬಳಿಕ ಬಿಎಸ್‌ವೈ ವಿರುದ್ಧ ಎಫ್‌ಐಆರ್ (FIR) ದಾಖಲಾಗಲಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭತ್ತ ಖರೀದಿಸಿ ಕೋಟಿ ಕೋಟಿ ವಂಚನೆ, ತಿರುಪತಿಯಲ್ಲೂ ರೈತರಿಗೆ ನಾಮ – ಆರೋಪಿ ಅರೆಸ್ಟ್!
ಇದರೊಂದಿಗೆ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕ್ಯಾಬಿನೆಟ್ ಸಚಿವರಿಂದ ಆಗ್ರಹ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನಕ್ಸಲರು ಊಟ ಮಾಡಿದ್ದ ಮನೆಗೆ ಎಎನ್‍ಎಫ್ ತಂಡ ಭೇಟಿ – ಚುರುಕುಗೊಂಡ ಕೂಂಬಿಂಗ್
ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗ ನೀಡಿದ ವರದಿ ಆಧಾರದ ಮೇಲೆ ಸಚಿವ ಸಂಪುಟ ಈ ನಿರ್ಣಯಕ್ಕೆ ಬಂದಿದೆ. ಇದೇ ವೇಳೆ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಷರತ್ತುಗಳನ್ನು ಸಡಿಲ ಮಾಡಲು ಒಪ್ಪಿಗೆ ಸೂಚಿಸಿದೆ.
ಶೇ.50ರಷ್ಟು ಸೀಟುಗಳಿಗೆ ಕಡ್ಡಾಯವಾಗಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ನಿಯಮಕ್ಕೆ ಕೊಕ್ ನೀಡಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಗಮನಾರ್ಹ ಸಾಧನೆ – 24.2 GW ಸಾಮರ್ಥ್ಯ ವೃದ್ಧಿ: ಜೋಶಿ