ಚಿಕ್ಕಮಗಳೂರು: ಕೊಪ್ಪದ (Koppa) ಕಾಡಂಚಿನ ಗ್ರಾಮದಲ್ಲಿ ನಕ್ಸಲರು ಭೇಟಿ ನೀಡಿದ್ದ ಮನೆಗೆ ಎಎನ್‍ಎಫ್ (Anti-Naxal Force) ತಂಡ ತೆರಳಿ ಮಾಹಿತಿ ಕಲೆಹಾಕಿದೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಡೇಗುಂದಿ ಗ್ರಾಮದ ಸುಬ್ಬೇಗೌಡ ಎಂಬವರ ಮನೆಗೆ ನಕ್ಸಲರು ಭೇಟಿ ನೀಡಿದ್ದರು. ಈ ವೇಳೆ ಗನ್ ತೋರಿಸಿ ಬೆದರಿಸಿ ಅಡುಗೆ ಮಾಡಿಸಿಕೊಂಡು ಊಟ ಮಾಡಿ ಹೋಗಿದ್ದರು. ಈ ವಿಚಾರ ತಿಳಿದ ಪೊಲೀಸರು (Police) ಹಾಗೂ ಎಎನ್‍ಎಫ್ ತಂಡ ಮನೆಗೆ ತೆರಳಿ ಪರಿಶೀಲನೆ ನಡೆಸಿದೆ.
- Advertisement -
- Advertisement -
ಕೊಪ್ಪ ಡಿವೈಎಸ್‍ಪಿ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಎಷ್ಟು ಜನ ಬಂದಿದ್ದರು? ಅವರ ಬಳಿ ಏನೇನಿತ್ತು? ಏನು ಮಾತಾಡಿದ್ದಾರೆ. ಅಡುಗೆ ಏನು ಮಾಡಿದ್ರಿ, ಎಷ್ಟು ಜನಕ್ಕೆ ಮಾಡಿಕೊಟ್ಟಿದ್ದೀರಿ? ಎಂದು ವಿಚಾರಿಸಲಾಗಿದೆ.
- Advertisement -
- Advertisement -
ಊಟ ಮಾಡಿ ಹೋಗುವಾಗ ಪೊಲೀಸರು ಬರುತ್ತಾರೆ ಎಂದು ನಕ್ಸಲರು ಗನ್ ಬಿಟ್ಟು ಹೋಗಿದ್ದಾರೆ. ನಕ್ಸಲರು ಹೋದ ಮಾರ್ಗದಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೊಪ್ಪ ತಾಲೂಕಿನ ಅರಣ್ಯ ಭಾಗಗಳಲ್ಲಿ ಪೊಲೀಸರು ಹಾಗೂ ಎಎನ್‍ಎಫ್ ತಂಡ ಹೈ ಅಲರ್ಟ್ ಆಗಿದೆ.