Thandel: ಸಾಯಿ ಪಲ್ಲವಿ, ನಾಗಚೈತನ್ಯ ರೊಮ್ಯಾಂಟಿಕ್ ಪೋಸ್ಟರ್ ರಿಲೀಸ್

Public TV
1 Min Read
sai pallavi 1

‘ಲವ್ ಸ್ಟೋರಿ’ (Love Story) ಸಿನಿಮಾದ ಸಕ್ಸಸ್ ನಂತರ ನಾಗಚೈತನ್ಯ (Naga Chaitanya) ಮತ್ತು ಸಾಯಿ ಪಲ್ಲವಿ ಮತ್ತೆ ಜೊತೆಯಾಗಿದ್ದಾರೆ. ‘ತಾಂಡೆಲ್’ (Thandel) ಚಿತ್ರಕ್ಕಾಗಿ ಕೈಜೋಡಿಸಿದ್ದು, ಇದರಲ್ಲೂ ರೊಮ್ಯಾಂಟಿಕ್ ಕಥೆ ಹೇಳಲು ಹೊರಟಿದ್ದಾರೆ. ಅದಷ್ಟೇ ಅಲ್ಲ, ತಾಂಡೆಲ್ ರಿಲೀಸ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಇದನ್ನೂ ಓದಿ:ದೇವಸ್ಥಾನದಲ್ಲಿ ಕ್ಷಮೆಯಾಚಿಸಿ ಇಲ್ಲವೇ 5 ಕೋಟಿ ಕೊಡಿ: ಸಲ್ಮಾನ್‌ ಖಾನ್‌ಗೆ ಮತ್ತೊಂದು ಬೆದರಿಕೆ

sai pallavi

‘ತಾಂಡೆಲ್’ (Thandel) ಸಿನಿಮಾದಲ್ಲಿನ ಸಾಯಿ ಪಲ್ಲವಿ ಜೊತೆಗಿನ ನಾಗಚೈತನ್ಯ ರೊಮ್ಯಾಂಟಿಕ್ ಪೋಸ್ಟರ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಸಾಯಿ ಪಲ್ಲವಿ ಅವರನ್ನು ನಟ ತಬ್ಬಿಕೊಂಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ. ಫೆ.14 ಪ್ರೇಮಿಗಳ ದಿನಾಚರಣೆಗೂ ಮುನ್ನ ಫೆ.7ರಂದು ‘ತಾಂಡೆಲ್’ ಸಿನಿಮಾ ರಿಲೀಸ್ ಆಗುತ್ತಿದೆ.

 

View this post on Instagram

 

A post shared by Geetha Arts (@geethaarts)

ಈ ಹಿಂದಿನ ‘ಲವ್ ಸ್ಟೋರಿ’ ಚಿತ್ರಕ್ಕಿಂತ ವಿಭಿನ್ನ ಕಥೆಯನ್ನೇ ತೋರಿಸಲು ಚಿತ್ರತಂಡ ಸಜ್ಜಾಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ. ಇನ್ನೂ ಈ ಚಿತ್ರವನ್ನು ಗೀತಾ ಆರ್ಟ್ಸ್ ಮೂಲಕ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ.

Share This Article