ದೇವಿರಮ್ಮನ ಬೆಟ್ಟದಲ್ಲಿ ಪ್ರಜ್ಞೆ ತಪ್ಪಿದ ಯುವತಿ – ಬೆಟ್ಟದ ತುದಿಯಿಂದ ಹೊತ್ತು ತಂದ ಪೊಲೀಸರು!

Public TV
1 Min Read
Devirammana Betta

– ಬೆಟ್ಟ ಹತ್ತುವಾಗ ಯುವತಿಗೆ ಕಾಲು ಮುರಿತ

ಚಿಕ್ಕಮಗಳೂರು: ದೇವೀರಮ್ಮನ ಬೆಟ್ಟದಲ್ಲಿ (Devirammana Betta) ದೇವರ ದರ್ಶನ ಪಡೆದು ಬೆಟ್ಟ ಇಳಿಯುವಾಗ ಯುವತಿಯೊಬ್ಬಳಿಗೆ ಕಾಲು ಉಳುಕಿ, ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಬೆಟ್ಟದ ತುದಿಯಿಂದ ಯುವತಿಯನ್ನು ಪೊಲೀಸ್ (Police) ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹೊತ್ತು ತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.

ಬೇಲೂರು ತಾಲೂಕಿನ ಎಂಸಂದಿ ಗ್ರಾಮದ ಸಿಂಧು (25) ಎಂಬ ಯುವತಿ, ಮಾಣಿಕ್ಯಧಾರಾ ಕಡೆಯಿಂದ ಬೆಟ್ಟ ಹತ್ತಿ ದೇವಿ ದರ್ಶನ ಪಡೆದು ಇಳಿಯುತ್ತಿದ್ದಳು. ಈ ವೇಳೆ ಯುವತಿಗೆ ಪ್ರಜ್ಞೆ ತಪ್ಪಿದೆ. ಯುವತಿಯನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸಾವಿರಾರು ಭಕ್ತರು ಮಳೆ, ಜಾರಿಕೆ ಮಧ್ಯೆಯೂ ಹಗ್ಗ ಹಿಡಿದು ದೇವೀರಮ್ಮನ ಬೆಟ್ಟವನ್ನು ಹತ್ತುತ್ತಿದ್ದಾರೆ. ಈ ಬಾರಿ ಬೆಟ್ಟ ಹತ್ತುವಾಗ ಭಕ್ತರಿಗೆ ನಾನಾ ರೀತಿಯ ತೊಂದರೆ ಎದುರಾಗುತ್ತಿದೆ. ಬೆಂಗಳೂರು ಮೂಲದ ದಿವ್ಯಾ (30) ಎಂಬ ಯುವತಿಗೆ ಕಾಲು ಮುರಿತವಾಗಿದೆ. ಮಂಗಳೂರಿನ ಜಯಮ್ಮ (55) ಎಂಬವರು ಲೋ ಬಿಪಿಯಿಂದ ಬೆಟ್ಟದ ಮಧ್ಯೆದಲ್ಲೇ ಸುಸ್ತಾಗಿ ಕುಳಿತಿದ್ದಾರೆ. ತರೀಕೆರೆ ಮೂಲದ ವೇಣು ಎಂಬ ಯುವಕ ಜಾರಿ ಬಿದ್ದು ಆತನ ತಲೆಗೆ ಗಾಯವಾಗಿದೆ.

ಎಲ್ಲರನ್ನೂ ಪೊಲೀಸರು ಸುರಕ್ಷಿತವಾಗಿ ಹೊತ್ತು ತಂದಿದ್ದಾರೆ. ಬಳಿಕ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.

Share This Article