ರಾಯಚೂರು: ದಿನಪತ್ರಿಕೆ ಹಾಕಲು ತೆರಳುತ್ತಿದ್ದ ಹುಡುಗನಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರಿನ ಗೋಶಾಲಾ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
- Advertisement 2-
ಜಲಾಲನಗರದ ನಿವಾಸಿಯಾದ 16 ವರ್ಷದ ಉಪೇಂದ್ರ ಮೃತ ದುರ್ದೈವಿ. ಉಪೇಂದ್ರ ಪ್ರತಿದನದಂತೆ ಇಂದು ಕೂಡ ಬೆಳಗ್ಗೆ ತನ್ನ ಸೈಕಲಿನಲ್ಲಿ ಪೇಪರ್ ಹಾಕಲು ತೆರಳುತ್ತಿದ್ದ. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಉಪೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement 3-
- Advertisement 4-
ಘಟನೆ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಿನ ಜಾವವಾಗಿದ್ದರಿಂದ ಖಾಲಿ ರಸ್ತೆಯಲ್ಲಿ ಚಾಲಕ ಅತಿ ವೇಗವಾಗಿ ಲಾರಿ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.