ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್, ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ ಬಾಸ್: ಅಶೋಕ್‌ ಲೇವಡಿ

Public TV
2 Min Read
BJP Protest 2

ಬೆಂಗಳೂರು: ಟಿವಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ (Bigg Boss TV Show) ಸುದೀಪ್ ಬಿಗ್ ಬಾಸ್. ಆದ್ರೆ ಈ ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ ಮುಸಲ್ಮಾನರ ಬಿಗ್‌ಬಾಸ್ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ಲೇವಡಿ ಮಾಡಿದ್ದಾರೆ.

ರಾಜ್ಯ ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ (Hubballi Riot Case) ವಾಪಸ್‌ಗೆ ನಿರ್ಧಾರ ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು, ಟಿವಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಬಿಗ್ ಬಾಸ್. ಆದ್ರೆ ಈ ಕಾಂಗ್ರೆಸ್‌ ಸರ್ಕಾರಕ್ಕೆ ಭಯೋತ್ಪಾದಕರೇ ಬಿಗ್ ಬಾಸ್. ಸಿದ್ದರಾಮಯ್ಯ (Siddaramaiah) ಮುಸಲ್ಮಾನರ ಬಿಗ್‌ಬಾಸ್. ಭಾರತಕ್ಕೆ ಅಪಮಾನ ಮಾಡುವ ಕೆಲಸ ಮಾಡ್ತಿರೋರೇ ಹೆಚ್ಚು ಇವರಿಗೆ. ಇವರು ಸಿಎಂ ಸ್ಥಾನದಲ್ಲಿ ಕೂತು ಕಾನೂನು ಕಾಪಾಡುವ ಕೆಲಸ ಮಾಡ್ತಿಲ್ಲ. ಮುಡಾ ಸೈಟು ವಾಪಸ್, ಖರ್ಗೆ ಸಿಎ ಸೈಟು ವಾಪಸ್, ಈಗ ಕೇಸ್ ವಾಪಸ್. ಮುಸಲ್ಮಾನರ ಓಲೈಕೆಯಿಂದ ಅಧಿಕಾರದಲ್ಲಿ ಉಳ್ಕೋತಾರೆ ಅನ್ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ ಪಡೆಯುವ ಸರ್ಕಾರದ ನಿರ್ಧಾರಕ್ಕೆ ಖಂಡನೆ – ಭುಗಿಲೆದ್ದ ಬಿಜೆಪಿ ಪ್ರತಿಭಟನೆ

CM Siddaramaiah

ಹಿಂದೂಗಳ ಮೇಲಿನ ಕೇಸ್ ವಾಪಸ್ ತಗೋತಾರಾ? ಕನ್ನಡ ಪರ ಹೋರಾಟಗಾರರ ಕೇಸ್ ವಾಪಸ್ ತಗೋತಾರಾ? ಕರ್ನಾಟಕ ರಕ್ಷಣ ವೇದಿಕೆ ನಾರಾಯಣ ಗೌಡಗೆ ತಿಂಗಳಾನುಗಟ್ಟಲೆ ಜೈಲಿಗೆ ಹಾಕಿದ್ರು. ಆದ್ರೆ ಠಾಣೆ ಕಲ್ಲೆಸೆದವರ ಕೇಸ್ ವಾಪಸ್ ಪಡೆದ್ರು. ಇವರ ಯೋಗ್ಯತೆ ಏನು ಅಂತ ಗೊತ್ತಾಯ್ತಲ್ಲ. ಕುಲಕರ್ಣಿ ವಿರುದ್ಧ ಕ್ರಮ ಇಲ್ಲ, ಮುನಿರತ್ನ ಕೂಡಲೇ ಬಂಧನವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಎಸ್‌ಸಿಒ ಶೃಂಗಸಭೆ – ಮಂಗಳವಾರ ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

ಇದೇ ವೇಳೆ ನಾಗಮಂಗಲ ಪ್ರಕರಣದ ಕುರಿತು ಮಾತನಾಡಿದ ಅಶೋಕ್‌, ಗಣಪತಿಯನ್ನೇ ಅರೆಸ್ಟ್ ಮಾಡಿದ ನೀಚರು ಇವರು. ನಾಗಮಂಗಲ ಪ್ರಕರಣದಲ್ಲಿ ಹಿಂದೂಗಳೇ ಮೊದಲ ಆರೋಪಿಗಳು. ಇದು ಪಕ್ಕಾ ಟಿಪ್ಪು ಸುಲ್ತಾನ್ ಸರ್ಕಾರ. ಸಿದ್ದರಾಮಯ್ಯ ಪದೇ ಪದೇ ಚಾಮುಂಡಿ ಕಾಪಾಡ್ತಾಳೆ ಅಂತಿದ್ರು. ಚಾಮುಂಡಿ ಮೇಲೆ ಪ್ರೀತಿ ಇದ್ದಿದ್ರೇ ಮೈಸೂರು ಏರ್‌ಪೋರ್ಟ್‌ಗೆ ಚಾಮುಂಡೇಶ್ವರಿ ಹೆಸರಿಡ್ಬೇಕಾಗಿತ್ತು. ಏರ್‌ಪೋರ್ಟ್‌ಗೆ ಯಾಕೆ ಟಿಪ್ಪು ಸುಲ್ತಾನ್ ಹೆಸರು ಇಡಲು ಹೋಗಿದ್ರು? ಎಂದು ಪ್ರಶ್ನೆ ಮಾಡಿದರು.

ಟಿಪ್ಪು ಹೆಸರು ಇಡಲು ಹೋದಾಗ ನಾವು ತಡೆದ್ವಿ. ಈಗ ಕುರ್ಚಿ ಖಾಲಿ ಆಗುತ್ತೆ ಅಂತ ಚಾಮುಂಡೇಶ್ವರಿ ಜಪ ಮಾಡ್ತಿದ್ದಾರೆ. ಇದು ತುಘಲಕ್ ಸರ್ಕಾರ. ಗಲಭೆಕೋರರಿಗೆ ಬೆಂಬಲಿಸುವ ಸರ್ಕಾರ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕುಖ್ಯಾತ ದರೋಡೆಕೋರ ಬಿಷ್ಣೋಯ್‌ನನ್ನು ಮುಂಬೈ ಪೊಲೀಸರು ಯಾಕೆ ಕಸ್ಟಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ?

Share This Article