ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

Public TV
3 Min Read
Giorgia Meloni

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ನೇತೃತ್ವದ ಇಟಲಿ ಸರ್ಕಾರ ಹೊಸ ಕಾನೂನುಗಳನ್ನು (New Law) ಜಾರಿಗೆ ತರಲು ಮುಂದಾಗಿದೆ. ಅತ್ಯಾಚಾರ ಎಸಗುವವರಿಗೆ ಘೋರ ಶಿಕ್ಷೆ ವಿಧಿಸಲಾಗುತ್ತದೆ.

ಹೌದು. ಅತ್ಯಾಚಾರ ಎಸಗುವ ಆರೋಪಿಗಳಿಗೆ ರಾಸಾಯನಿಕ ವಸ್ತುಗಳನ್ನು ಇಂಜೆಕ್ಟ್ ಮಾಡುವ ಮೂಲಕ ಪುರುಷತ್ವಹರಣ ಮಾಡಲಾಗುತ್ತದೆ. ಇದನ್ನು ಕೆಮಿಕಲ್‌ ಕ್ಯಾಸ್ಟ್ರೇಶನ್‌ (Chemical Castration) ಎಂದೂ ಸಹ ಕರೆಯಲಾಗುತ್ತದೆ. ಇಂಜೆಕ್ಷನ್ ನೀಡುವ ಮೂಲಕ ಟೆಸ್ಟೋಸ್ಟಿರಾನ್ ಉತ್ಪತ್ತಿಯಾಗುವುದನ್ನು ತಡೆಯಲಾಗುತ್ತದೆ. ಈ ಮೂಲಕ ಲೈಂಗಿಕ ಬಯಕೆಯನ್ನು ಕಡಿಮೆ ಮಾಡಿ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಆದ್ರೆ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ವಿರೋಧಿಸಿದ್ದು, ಇದು ಮಾನವತೆ ಮತ್ತು ನ್ಯಾಯದ ಉಲ್ಲಂಘನೆ ಎಂದು ಹೇಳಿವೆ.

Chemical Castration

ಅಷ್ಟಕ್ಕೂ ಕೆಮಿಕಲ್‌ ಕ್ಯಾಸ್ಟ್ರೇಶನ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಬೇರಾವುದೇ ದೇಶದಲ್ಲಿ ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ಇದೆಯೇ? ಇದರಿಂದ ನಿಜವಾಗಿಯೂ ಲೈಂಗಿಕ ಅಪರಾಧಗಳನ್ನು ತಡೆಯಬಹುದೇ? ಎಂಬ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಮುಂದೆ ಓದಿ. ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

ಕೆಮಿಕಲ್‌ ಕ್ಯಾಸ್ಟ್ರೇಷನ್‌ ಏನಿದು ಚಿಕಿತ್ಸೆ?

ಕೆಮಿಕಲ್‌ ಕ್ಯಾಸ್ಟ್ರೇಷನ್‌ ವೈದ್ಯಕೀಯ ಪ್ರಕ್ರಿಯೆಯಾಗಿದೆ. ದೇಹದಲ್ಲಿ ಟೆಸ್ಟೋಸ್ಟೆರಾನ್‌ನಂತಹ (Testosterone) ಹಾರ್ಮೋನು ಮಟ್ಟವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಅಪರಾಧಿಗಳಲ್ಲಿ ಲೈಂಗಿಕ ಬಯಕೆಯ ಮಟ್ಟ ಕಡಿಮೆಯಾಗುತ್ತದೆ. ಆದ್ರೆ ಇದು ಶಾಶ್ವತ ಪರಿಹಾರವಲ್ಲ ಎಂದೂ ತಜ್ಞರು ಹೇಳಿದ್ದಾರೆ. ಕೆಮಿಕಲ್‌ ಕ್ಯಾಸ್ಟ್ರೇಷನ್‌ ಪರಿಣಾಮವು ಒಂದು ನಿರ್ದಿಷ್ಟ ಅವಧಿಯವರೆಗೆ ಕೆಲಸ ಮಾಡುತ್ತದೆ. ನಂತರ ಚಿಕಿತ್ಸೆಗೆ ಒಳಗಾದ ಪುರುಷರಲ್ಲಿ ಮತ್ತೆ ಲೈಂಗಿಕ ಬಯಕೆ ಉಂಟಾಗುತ್ತದೆ. ಹಾಗಾಗಿ ಅಪರಾಧಿಗಳಿಗೆ ನಿರ್ದಿಷ್ಟ ಅವಧಿ ಮುಗಿದ ಬಳಿಕ ಮತ್ತೆ ಔಷಧವನ್ನು ಇಂಜೆಕ್ಟ್‌ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.

Giorgia Meloni 2

ವಿರೋಧ ಏಕೆ?

ಏಕೆಂದರೆ ಕೆಮಿಕಲ್‌ ಇಂಜೆಕ್ಟ್‌ ಮಾಡುವುದರಿಂದ ಅಪರಾಧಿಗೆ ತಪ್ಪಿನ ಅರಿವಾಗುವುದಿಲ್ಲ. ಲೈಂಗಿಕ ಬಯಕೆಯನ್ನು ಒಂದು ಕಾಲಮಿತಿಯವರೆಗೆ ತಡೆಯಬಹುದೇ ಹೊರತು ಅವರ ಕೋಪವನ್ನು ಕಡಿಮೆ ಮಾಡಲಾಗುವುದಿಲ್ಲ. ಅಲ್ಲದೇ ಶಿಕ್ಷೆ ಅವಧಿ ಮುಗಿದ ಬಳಿಕ ಅವನು ಮತ್ತೆ ಅಪರಾಧ ಎಸಗಬಹುದು. ಅಲ್ಲದೇ ಲೈಂಗಿಕ ಬಯಕೆ ಕಡಿಮೆಯಾದ್ರೆ ಆಕ್ರಮಣಕಾರಿ ಸ್ವಭಾವದಿಂದ ಮಹಿಳೆಯರು, ಮಕ್ಕಳನ್ನ ಕೊಲ್ಲುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಹಾಗಾಗಿ ಈ ರೀತಿಯ ಕಾನೂನು ತರುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

Crime

ಅಪರಾಧ ಕಡಿಮೆಯಾಗಿದೆಯೇ?

ಈಗಾಗಲೇ ಕೆಲ ದೇಶಗಳಲ್ಲಿ ಲೈಂಗಿಕ ಅಪರಾಧಿಗಳಿಗೆ ಈ ಶಿಕ್ಷೆ ನೀಡಲಾಗುತ್ತಿದೆ. ಇದರಿಂದ ಅಪರಾಧ ಕಡಿಮೆಯಾಗಿದೆಯೇ ಎನ್ನುವ ಬಗ್ಗೆ ನೇರ ವರದಿಗಳಿಲ್ಲ. 2017ರಲ್ಲಿ ಇಂಡೋನೇಷ್ಯಾದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಈ ಶಿಕ್ಷೆ ನೀಡಲಾಗಿತ್ತು. ಇಂಡೋನೇಷಿಯನ್ ವಿಟ್ನೆಸ್ ಮತ್ತು ವಿಕ್ಟಿಮ್ ಪ್ರೊಟೆಕ್ಷನ್ ಏಜೆನ್ಸಿ ಪ್ರಕಾರ, 2017ರಲ್ಲಿ ಇಂಡೋನೇಷ್ಯಾದಲ್ಲಿ 70 ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿತ್ತು. 2018-2019ರಲ್ಲಿ ಈ ಪ್ರಕರಣಗಳ ಸಂಖ್ಯೆ 149ಕ್ಕೆ ಏರಿಕೆಯಾಗಿತ್ತು. 200-21ಕ್ಕೆ ಇದರ ಶೇಕಡಾವಾರು ಪ್ರಮಾಣ ಶೇ.50ಕ್ಕೆ ಏರಿಕೆಯಾಗಿತ್ತು. ಹಾಗಾಗಿ ಅಲ್ಲಿ ಈ ಚಿಕಿತ್ಸೆ ಕೊಡಲು ಜಾರಿಗೆ ತರಲಾಗಿತ್ತು. ಇದನ್ನೂ ಓದಿ: ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ

court file

ಯಾವ್ಯಾವ ದೇಶಗಳಲ್ಲಿ ಚಿಕಿತ್ಸೆ?

* ಕೆಮಿಕಲ್ ಕ್ಯಾಸ್ಟ್ರೇಶನ್ ಅನ್ನು ಮೊದಲ ಬಾರಿಗೆ ಅಮೇರಿಕಾದಲ್ಲಿ 1966 ರಲ್ಲಿ ಮಾಡಲಾಯಿತು. ಈಗ ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಜಾರ್ಜಿಯಾ ಮತ್ತು ಟೆಕ್ಸಾಸ್ ಸೇರಿದಂತೆ 9 ರಾಜ್ಯಗಳು ಶಿಶುಕಾಮಿಗಳಿಗೆ ಈ ಶಿಕ್ಷೆ ನೀಡುತ್ತಿವೆ.
* 2009ರ ಸೆಪ್ಟೆಂಬರ್‌ನಲ್ಲಿ ಪೋಲೆಂಡ್ ಸಂಸತ್ತು ತನ್ನ ದಂಡ ಸಂಹಿತೆ ಬದಲಾಯಿಸಿದ ನಂತರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಈ ಶಿಕ್ಷೆ ನೀಡಲು ನಿರ್ಧರಿಸಿತು.
* ರಷ್ಯಾದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಲೈಂಗಿಕ ಅಪರಾಧಿಗಳಿಗೆ ಆಂಡ್ರೊಜೆನ್-ತಡೆಗಟ್ಟುವ ಔಷಧಿಗಳನ್ನು ನೀಡಲಾಗುತ್ತಿದೆ.
* 2012ರಲ್ಲಿ ಯುರೋಪಿಯನ್ ದೇಶವಾದ ಎಸ್ಟೋನಿಯಾದಲ್ಲಿ ಈ ಶಿಕ್ಷೆ ಕೊಡಲು ಪ್ರಾರಂಭವಾಯಿತು. ಈ ಔಷಧಿಯನ್ನು ಕೆಲವು ತಿಂಗಳವರೆಗೆ ನೀಡದೇ ಮೂರು ವರ್ಷಗಳವರೆಗೆ ನಿರಂತರವಾಗಿ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು.
* ಜೊತೆಗೆ ಉಕ್ರೇನ್, ಕೆನಡಾ, ಡೆನ್ಮಾರ್ಕ್, ಜರ್ಮನಿ, ಇಸ್ರೇಲ್, ನಾರ್ವೆ ಮತ್ತು ಸ್ವೀಡನ್‌ನಂತಹ ಅನೇಕ ದೇಶಗಳಲ್ಲಿಯೂ ಶಿಶುಕಾಮಿಗಳಿಗೆ ರಾಸಾಯನಿಕ ಕ್ಯಾಸ್ಟ್ರೇಶನ್ ಶಿಕ್ಷೆಯನ್ನಾಗಿ ನೀಡಲಾಗುತ್ತಿದೆ.

ಕೈದಿಗಳೇ ಈ ಶಿಕ್ಷೆಗೆ ಒಪ್ಪಿದ್ದು ಏಕೆ?

ಅಮೆರಿಕದಂತಹ ದೇಶಗಳಲ್ಲಿ ಕೆಲ ಕೈದಿಗಳು ಕೆಮಿಕಲ್‌ ಕ್ಯಾಸ್ಟ್ರೇಷನ್‌ ಚಿಕಿತ್ಸೆಯನ್ನ ಖುದ್ದು ಆಯ್ಕೆ ಮಾಡಿಕೊಂಡಿದ್ದಾರೆ. ಕೈದಿಗಳು ಸ್ವತಃ ಈ ಚಿಕಿತ್ಸೆ ಒಪ್ಪಿದರೆ ಅವರು ತಮ್ಮ ಶಿಕ್ಷೆಯಿಂದ ಮುಕ್ತರಾಗುತ್ತಾರೆ. ಕೆಲವರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Share This Article