ನರೇಂದ್ರ ಮೋದಿ ನೇತೃತ್ವದ ಸರ್ಕಾರ 5 ವರ್ಷ ಪೂರ್ಣ ಮಾಡಲ್ಲ: ಸಿದ್ದರಾಮಯ್ಯ

Public TV
1 Min Read
SIDDU MODI

– ಇನ್ನೂ ಸ್ವಲ್ಪ ದಿನಗಳಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡ್ತೀವಿ ಎಂದ ಸಿಎಂ

ಬೆಂಗಳೂರು: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ 5 ವರ್ಷ ಅವಧಿ ಪೂರ್ಣ ಮಾಡೊಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಭವಿಷ್ಯ ನುಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬಿಜೆಪಿ ಅವರು ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ಅದು ಅವರಿಂದ ಸಾಧ್ಯವಿಲ್ಲ. ಈ ಬಾರಿ ನಾವು ಕೇಂದ್ರದಲ್ಲಿ 100 ಸ್ಥಾನ ತಲುಪಿದ್ದೇವೆ. ಇನ್ನೂ ಸ್ವಲ್ಪ ದಿನಗಳಲ್ಲಿ ಸರ್ಕಾರ ರಚನೆ ಮಾಡ್ತೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆಯಿಂದ ಕೋಟ್ಯಂತರ ಹಣ ಉಳಿತಾಯ: ಅಶೋಕ್

Narendra Modi Nitish Kumar Chandrababu Naidu

ಮೋದಿ ಸರ್ಕಾರ 5 ವರ್ಷ ಪೂರೈಕೆ ಮಾಡೊಲ್ಲ. ಇವತ್ತಿನ ರಾಜಕೀಯ ಸನ್ನಿವೇಶದಿಂದ ಇದನ್ನ ಹೇಳುತ್ತಿದ್ದೇನೆ. ಮೋದಿ ಸರ್ಕಾರ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಬೆಂಬಲದ ಮೇಲೆ ನಿಂತಿರೋದು. ಅವರು ಯಾವಾಗ ಬೇಕಾದ್ರೂ ಬೆಂಬಲ ವಾಪಸ್ ಪಡೆಯಬಹುದು‌ ಎಂದು ಹೇಳಿದ್ದಾರೆ.

ನಮಗೆ ಇರುವ ಮಾಹಿತಿ ಪ್ರಕಾರ, ಸದ್ಯದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 5 ವರ್ಷ ಪೂರ್ಣ ಮಾಡೊಲ್ಲ. ನಮ್ಮ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ಅವರು ಹೇಳ್ತಾರೆ. 136 ಸ್ಥಾನ ಇದ್ದರೂ ಬೀಳುತ್ತೆ ಅಂತಾ ಮಾತಾಡ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ: ಪರಮೇಶ್ವರ್

Share This Article